ಬೆಂಗಳೂರು: ಎರಡು ಕಡೆ ಟಿಕೆಟ್ ಕೊಡ್ತಾರೆ ಅಂತಾ ನಾನು ಕನಸು ಮನಸಲ್ಲೂ ಅನ್ಕೊಂಡಿರಲಿಲ್ಲ. ವಿಧಿ ನಿಯಮ, ವರಿಷ್ಠರ ತೀರ್ಮಾನ ಎಂದು ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಿಂದರಾಜನಗರ ನನ್ನ ಜನ್ಮ ಭೂಮಿ. ವರುಣಾ (Varuna), ಚಾಮರಾಜನಗರ (Chamarajanagar) ನನ್ನ ಕರ್ಮ ಭೂಮಿಯಾಗಿದೆ. ಭಗವಂತನ ಇಚ್ಛೆ ಹೇಗಿದಿಯೊ ನೋಡೋಣ. ನಾಳೆಯಿಂದ ವರುಣಾ, ಚಾಮರಾಜನಗರದಲ್ಲಿ ಪ್ರಚಾರ ಶುರು ಮಾಡುತ್ತೇನೆ ಎಂದು ಹೇಳಿದರು.
Advertisement
Advertisement
ಗುಬ್ಬಿ, ಗೋವಿಂದರಾಜನಗರ ಮಗನಿಗೆ ಕೇಳಿದ್ದೇನೆ. ಈ ಬಗ್ಗೆ ಬಿಜೆಪಿ (BJP) ಹೈಕಮಾಂಡ್ ಜೊತೆಗೂ ಮಾತನಾಡಿದ್ದೇನೆ. ಮಗನಿಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್‍ಗೆ ಬಿಟ್ಟದ್ದು, ಬೆಂಬಲಿಗರು ಸಂಯಮದಿಂದ ಇರಬೇಕು ಎಂದರು. ಇದನ್ನೂ ಓದಿ: ಟಿಕೆಟ್ ತಪ್ಪಿದ್ದಕ್ಕೆ ಲಕ್ಷ್ಮಣ ಸವದಿ ಕಣ್ಣೀರು
Advertisement
Advertisement
ಗೋವಿಂದರಾಜನಗರ ಕ್ಷೇತ್ರ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸೋಮಣ್ಣನ ಮನೆ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದರು. ಸೋಮಣ್ಣ ಮಗ ಡಾ. ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರದಿಂದಲೇ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದರು. ಬೇರೆವರಿಗೆ ಟಿಕೆಟ್ ನೀಡಿದ್ರೆ ನಮ್ಮ ಬೆಂಬಲಿಗರಿಗೆ ಕೆಲಸ ಮಾಡಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ – ಜಾತಿವಾರು ಲೆಕ್ಕಾಚಾರ ಏನು?