ಮಂಡ್ಯ: ಇಡೀ ಪ್ರಪಂಚದಲ್ಲಿ ಭಾರತ ಸರ್ಕಾರದ ಕೆಲಸ ಅವಿಸ್ಮರಣೀಯ. ಮೋದಿ (Narendra Modi) ನೇತೃತ್ವದಲ್ಲಿ ಭಾರತ ವಿಶ್ವ ಮೆಚ್ಚುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು.
ಶ್ರೀರಂಗಪಟ್ಟಣದ ಕೊತ್ತತ್ತಿ ಗ್ರಾಮದಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅನೇಕ ವರ್ಷಗಳ ಕಾಲ ಕಾಂಗ್ರೆಸ್ (Congress) ಆಡಳಿತ ನೋಡಿದ್ದೀರಿ. ಕಳೆದ 9 ವರ್ಷದಲ್ಲಿ ನಮ್ಮ ಸರ್ಕಾರ ಸ್ವಚ್ಛ ಆಡಳಿತವನ್ನು ನೀಡುತ್ತಿದೆ. ನಮ್ಮ ಅವಧಿಯಲ್ಲಿ ಒಬ್ಬ ಮಂತ್ರಿಯ ಮೇಲೆ ಭ್ರಷ್ಟಾಚಾರದ ಆರೋಪ ಬರಲಿಲ್ಲ. ಈ ಬಾರಿ ಪೂರ್ಣ ಪ್ರಮಾಣದ ಬಿಜೆಪಿ (BJP) ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂಬ ಭರವಸೆ ಇದೆ. ನಾವು ಯಾವುದೇ ಮಂತ್ರಿಯನ್ನು ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದರು. ಇದನ್ನೂ ಓದಿ: ಒಂದು ಕೊಡ್ರಯ್ಯ ಅಂದ್ರೆ 2 ಕೊಟ್ಟವ್ರೆ; ಚಾಮರಾಜನಗರ ವೋಲ್ಟೇಜ್ ಆದ್ರೆ, ವರುಣಾ ಹೈವೋಲ್ಟೇಜ್: ಸೋಮಣ್ಣ
Advertisement
Advertisement
ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರವಿತ್ತು. ರಾಜೀವ್ ಗಾಂಧಿ ಭ್ರಷ್ಟಾಚಾರ ತಡೆಯುವಲ್ಲಿ ನಿಸ್ಸಹಾಯಕರಾಗಿದ್ದರು. ಮೋದಿ ಪ್ರಧಾನಿ ಆಗಿ 10 ಸಾವಿರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ಆಗುವುದಿಲ್ಲ. ಇದು ನೇರವಾಗಿ ರೈತರ ಖಾತೆಗೆ ಸೇರಲಿದೆ. ಇದು ಮೋದಿ ನೇತೃತ್ವದ ಬಿಜೆಪಿಯ ಸ್ವಚ್ಛ ಆಡಳಿತ. ಈಗಾಗಲೇ ಕೇಂದ್ರ ಸರ್ಕಾರದಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ನಮಗೆ ಸ್ಥಾನವಿಲ್ಲ ಎಂದು ಕಾಂಗ್ರೆಸ್‌ನವರಿಗೆ ಗೊತ್ತಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಹೂವಿನಲ್ಲಿ ಕಲ್ಲು ಬಂದಿಲ್ಲ, ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ : ಪರಮೇಶ್ವರ್
Advertisement
ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಅದನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇದರಿಂದಾಗಿ ಕಾಂಗ್ರೆಸ್ ಹತಾಶೆಗೊಂಡಿದ್ದಾರೆ. ನಮ್ಮ ಪ್ರಧಾನಿ ಬಗ್ಗೆ ವಿಷದ ಸರ್ಪದ ಮಾತನ್ನಾಡಿದ್ದಾರೆ. ಆದರೆ ನಮ್ಮ ಪ್ರಧಾನಿ ಯಾರ ಬಗ್ಗೆಯೂ ತುಚ್ಛವಾಗಿ ಮಾತನಾಡಿಲ್ಲ. ಮೋದಿಯ ಜನಪ್ರಿಯತೆ ನೋಡಿ ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲ. ಆ ಹೊಟ್ಟೆಯುರಿ ಹಾಗೂ ಹತಾಶೆಗೆ ಈ ರೀತಿಯಾಗಿ ವತಿಸುತ್ತಿದ್ದಾರೆ. ಭಗವಂತ ಅವರಿಗೆ ಹೊಟ್ಟೆಯುರಿ ತಡೆಯುವ ಶಕ್ತಿಯನ್ನು ಕೊಡಲಿ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಕಾರಿನಿಂದ ಕುಸಿದಿದ್ದಕ್ಕೆ ಸಿದ್ದರಾಮಯ್ಯರನ್ನು ಟೀಕಿಸುವುದು ಸರಿಯಲ್ಲ – ಬಿಎಸ್‍ವೈ
Advertisement
ನಾವು ಯಾವಾಗಲೂ ಪ್ರಾಮಾಣಿಕವಾಗಿ ನಡೆದುಕೊಂಡು ಬಂದ ಜನ. ಆರ್ಟಿಕಲ್ 370ನ್ನು ಸಮಾಪ್ತಿ ಮಾಡುವುದಾಗಿ ಹೇಳಿದ್ದೆವು. ಅದರಂತೆ ಕಾಶ್ಮೀರವನ್ನು (Kashmir) ಭಾರತದಲ್ಲಿಯೇ ಉಳಿಸಿದ್ದೇವೆ. ಹೇಳಿದಂತೆ ನಡೆದುಕೊಳ್ಳುವ ಪಕ್ಷ ನಮ್ಮದು. ಪಿಎಫ್‌ಐ (PFI) ಸರ್ಕಾರ ಬಾಂಬ್ ಹಾಕಿ ಗೊಂದಲ ಸೃಷ್ಟಿ ಮಾಡಿತ್ತು. ಅದನ್ನು ಬ್ಯಾನ್ ಮಾಡುವುದಾಗಿ ಹೇಳಿದ್ದೆವು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿ ಅದನ್ನೂ ಮಾಡಿ ತೋರಿಸಿದ್ದೇವೆ. ನಮ್ಮ ಪ್ರಧಾನಿ ಆತ್ಮನಿರ್ಭರತೆ ಬಗ್ಗೆ ಹೇಳಿದ್ದರು. ಅದಕ್ಕೆ ಪೂರಕವಾದ ಶಸ್ತ್ರಾಸ್ತ್ರಗಳನ್ನು ನಮ್ಮಲ್ಲಿಯೇ ತಯಾರು ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ: ಮುನಿರತ್ನ
ಹಿಂದೆ ಭಾರತಕ್ಕೆ ಯಾರೂ ಗೌರವ ಕೊಡುತ್ತಿರಲಿಲ್ಲ. ಭಾರತೀಯರ ಮಾತನ್ನು ಯಾರೂ ಕೇಳುತ್ತಿರಲಿಲ್ಲ. ಇವತ್ತು ಭಾರತದ ಗೌರವ ಮತ್ತು ಘನತೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ. ಭಾರತಕ್ಕೆ ಗೌರವ ಕೂಡಾ ದೊರಕುತ್ತಿದೆ. ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ವಿಶ್ವದಲ್ಲಿ ಗೌರವವಿದೆ. ರಷ್ಯಾ, ಉಕ್ರೇನ್ ಕದನದಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬರುವ ಕೆಲಸವನ್ನು ಮಾಡಲಾಗಿದೆ. ಸುಡಾನ್ ಕದನದಲ್ಲಿ ಸಿಲುಕಿದ್ದವರನ್ನು ಆಪರೇಷನ್ ಕಾವೇರಿ ಹೆಸರಲ್ಲಿ ರಕ್ಷಣೆ ಮಾಡಲಾಗುತ್ತಿದೆ. ಆದ್ದರಿಂದ ಬಿಜೆಪಿಗೆ ಪ್ರಚಂಡ ಬಹುಮತ ಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಂಬೇಡ್ಕರ್‌ರನ್ನ ರಾಕ್ಷಸ, ರಾಷ್ಟ್ರದ್ರೋಹಿ ಅಂತ ಟೀಕಿಸಿತ್ತು ಕಾಂಗ್ರೆಸ್ – ಮೋದಿ