ಉಡುಪಿ: ಜಿಲ್ಲೆಯ 5 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ (BJP) ಪಕ್ಷ ಉಡುಪಿಯಲ್ಲಿ (Udupi) ಭರ್ಜರಿ ಜಯ ಗಳಿಸಿದ್ದು, 5 ಕ್ಷೇತ್ರಗಳಲ್ಲಿಯೂ ಗೆಲುವಿನ ನಗೆ ಬೀರಿದೆ.
ಬೈಂದೂರು: ಬಿಜೆಪಿ ಅಭ್ಯರ್ಥಿ ಗುರುರಾಜ್ ಶೆಟ್ಟಿ ಈ ಬಾರಿ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಗೋಪಾಲ್ ಪೂಜಾರಿ, ಜೆಡಿಎಸ್‌ನಿಂದ ಮನ್ಸೂರ್ ಇಬ್ರಾಹಿಂ ಹಾಗೂ ಆಪ್ ಪಕ್ಷದಿಂದ ರಮಾನಂದ ಪ್ರಭು ಸ್ಪರ್ಧಿಸಿ ಗುರುರಾಜ್ ಶೆಟ್ಟಿ ವಿರುದ್ಧ ಸೋತಿದ್ದಾರೆ.
Advertisement
ಕುಂದಾಪುರ: ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಜಯಗಳಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನೇಶ್ ಹೆಗಡೆ ಮೊಳಹಳ್ಳಿ ಹಾಗೂ ಜೆಡಿಎಸ್ ಪಕ್ಷದಿಂದ ರಮೇಶ್ ಸ್ಪರ್ಧಿಸಿದ್ದರು.
Advertisement
Advertisement
ಉಡುಪಿ: ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಈ ಬಾರಿ ಉಡುಪಿ ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರಸಾದ್ ಕಾಂಚನ್, ಜೆಡಿಎಸ್‌ನಿಂದ ದಕ್ಷತ್ ಆರ್ ಶೆಟ್ಟಿ ಹಾಗೂ ಆಪ್‌ನಿಂದ ಪ್ರಭಾಕರ್ ಪೂಜಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಬಿಜೆಪಿಗೆ ಶಾಕ್ – ಕಾಂಗ್ರೆಸ್‍ಗೆ 4 ಕ್ಷೇತ್ರಗಳಲ್ಲಿ ಜಯ
Advertisement
ಕಾಪು: ಬಿಜೆಪಿಯಿಂದ ಸ್ಪರ್ಧಿಸಿದ್ದ ಗುರ್ಮೆ ಸುರೇಶ್ ಶೆಟ್ಟಿ ಕಾಪು ಕ್ಷೇತ್ರದಲ್ಲಿ ವಿಜಯ ಸಾಧಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಸೋತಿದ್ದಾರೆ. ಜೆಡಿಎಸ್‌ನಿಂದ ಸಬೀನಾ ಸಮದ್ ಹಾಗೂ ಆಪ್‌ನಿಂದ ಎಸ್‌ಆರ್ ಲೋಬೋ ಸ್ಪರ್ಧಿಸಿದ್ದರು.
ಕಾರ್ಕಳ: ಈ ಬಾರಿಯೂ ಕಾರ್ಕಳ ಕ್ಷೇತ್ರದಿಂದ ವಿ ಸುನಿಲ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಉದಯ್ ಶೆಟ್ಟಿ ಮುನಿಯಾಲು ಕಡಿಮೆ ಮತಗಳ ಅಂತರದಿಂದ ಸೋತಿದ್ದಾರೆ. ಆಪ್ ಪಕ್ಷದಿಂದ ಡೇನಿಯಲ್ ರಂಜಾರ್, ಜೆಡಿಎಸ್‌ನಿಂದ ಶ್ರೀಕಾಂತ್ ಪೂಜಾರಿ ಕುಚ್ಚೂರು ಹಾಗೂ ಪಕ್ಷೇತ್ರವಾಗಿ ಸ್ಪರ್ಧಿಸಿದ್ದ ಪ್ರಮೋದ್ ಮುತಾಲಿಕ್ ಸೋತಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 136, ಬಿಜೆಪಿ 64, ಜೆಡಿಎಸ್ 20 ಮುನ್ನಡೆ LIVE Updates