ಚಿಕ್ಕಮಗಳೂರು: ಸಿ.ಟಿ.ರವಿ (C.T.Ravi) ಸೋಲಿಗೆ ಅವರ ನಾಲಿಗೆಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ (S.L.Bhojegowda) ವ್ಯಾಖ್ಯಾನಿಸಿದ್ದು, ಸೋಲಿಸಿದ ಬಳಿಕ ಸಿ.ಟಿ.ರವಿ ಬುದ್ಧಿವಂತ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ನಗರದ ಹೊಸಮನೆ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಬಹಳ ದೊಡ್ಡ ಮಟ್ಟದಲ್ಲಿ ಬೆಳೆದಿದ್ದರು. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗ ಅವರಿಗೆ ಲಭಿಸಿತ್ತು. ಆದರೆ ಅವರ ನಾಲಿಗೆಯೇ ಅವರನ್ನು ಸೋಲಿಸಿದೆ. ರಾಜಕೀಯದಲ್ಲಿ ಟೀಕೆ ಮಾಡುವುದು ತಪ್ಪಲ್ಲ. ಆದರೆ ಅದಕ್ಕೊಂದು ಇತಿಮಿತಿ ಇರುತ್ತದೆ ಮತ್ತು ಇರಬೇಕು. ರಾಜಕೀಯವಾಗಿ ರಾಜಕೀಯ ಅಸ್ತ್ರದ ಟೀಕೆ ಮಾಡಿದರೆ ಸರಿ. ಆದರೆ ಅದು ವೈಯಕ್ತಿಕ ಟೀಕೆಯಾಗಬಾರದು. ಅದು ಸರಿಯೂ ಅಲ್ಲ. ಸಿ.ಟಿ.ರವಿ ಸದನದ ಒಳಗೆ-ಹೊರಗೆ ಎರಡೂ ಕಡೆ ರಾಜಕೀಯ ಟೀಕೆಯನ್ನು ಬಿಟ್ಟು ವೈಯಕ್ತಿಕ ಟೀಕೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ
Advertisement
Advertisement
ಟೀಕೆ ಮಾಡುವಾಗ ಅವರ ವ್ಯಕ್ತಿತ್ವ ಮತ್ತು ರಾಜಕೀಯ ಮುತ್ಸದ್ದಿತನದ ಬಗ್ಗೆ ಯೋಚನೆ ಮಾಡಬೇಕು. ಯೋಚಿಸಿ ಮಾತನಾಡಬೇಕು. ಯಾರನ್ನೋ ಮೆಚ್ಚಿಸುವ ಸಲುವಾಗಿ, ಕ್ಷಣಿಕ ಸುಖಕ್ಕೆ ಅಥವಾ ಕಾರ್ಯಕರ್ತರನ್ನು ಮೆಚ್ಚಿಸುವುದಕ್ಕೆ ವೈಯಕ್ತಿಕ ಟೀಕೆ ಸರಿಯಲ್ಲ. ದೇವೇಗೌಡರಿಗೆ (H.D.Deve Gowda) ಸಾಬರಾಗಿ ಹುಟ್ಟಲಿ ಎನ್ನುವುದು, ಸಿದ್ದರಾಮಯ್ಯಗೆ (Siddaramaiah) ಸಿದ್ರಾಮುಲ್ಲಾ ಖಾನ್ ಎನ್ನುವುದು. ಸಿ.ಟಿ.ರವಿ ಯಾರನ್ನು ಬಿಟ್ಟಿದ್ದಾರೆ. ಯಾರನ್ನೂ ಬಿಟ್ಟಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೌನ್ ಬನೇಗಾ ರಾಜ್ಯದ ಮುಖ್ಯಮಂತ್ರಿ? ಹೈಕಮಾಂಡ್ ಲೆಕ್ಕಾಚಾರ ಏನು?
Advertisement
Advertisement
ಟೀಕೆ ಮಾಡುವಾಗಲು ರಾಜಕೀಯ ಸ್ಟ್ಯಾಂಡರ್ಡ್‌ನಲ್ಲಿ ಟೀಕೆ ಮಾಡಬೇಕು. ಕುಲದ ಕುತ್ತಿಗೆ ಉದ್ದ. ಅಷ್ಟು ಸುಲಭ ಇಲ್ಲ. “ಬ್ಲಡ್ ಇಸ್ ಥಿಕ್ಕರ್ ದೆನ್ ವಾಟರ್”. ಕುಲದ ಬಗ್ಗೆ ಮಾತನಾಡಿದರೆ ನಮ್ಮ ಕುಲದ ಬಗ್ಗೆ ಮಾತನಾಡುತ್ತಾನೆ. ಇವನಿಗೆ ಎಷ್ಟು ಹಮ್ಮಿರಬೇಕು ಎಂದು ಹಮ್ಮಿನ ಬಗ್ಗೆ ಯೋಚಿಸುತ್ತಾರೆ. ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ. ದುರಾಡಳಿತ, ದುರಂಹಂಕಾರ ಎಲ್ಲವೂ ಸೇರಿ ಸಿ.ಟಿ.ರವಿಯನ್ನು ಸೋಲಿಸಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಮೇ 18 ರಂದು ಪ್ರಮಾಣ ವಚನ?
ಇದೇ ವೇಳೆ ಭೋಜೇಗೌಡರ ಮನೆ ಮುಂದೆ ಜೆಡಿಎಸ್ (JDS) ಕಾರ್ಯಕರ್ತರು ಸಿ.ಟಿ.ರವಿ ಸೋಲಿನಲ್ಲಿ ಮಾಸ್ಟರ್ ಮೈಂಡ್ ಆಗಿದ್ದ ಎಸ್.ಎಲ್.ಭೋಜೇಗೌಡರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಅವರ ಮನೆ ಮುಂದೆ ಟ್ರ‍್ಯಾಕ್ಟರ್ ಮೇಲೆ ನಿಲ್ಲಿಸಿ ಬಕೆಟ್‌ನಲ್ಲಿ ಹಾಲನ್ನು ಸುರಿದು ಹಾಲಿನ ಅಭಿಷೇಕ ಮಾಡಿದ್ದಾರೆ. ಇದನ್ನೂ ಓದಿ: ಉಡುಪಿ ಬೈಂದೂರಿನಲ್ಲಿ ಗೆದ್ದ ಬರಿಗಾಲ ಸಂತ – ಜಿದ್ದಾಜಿದ್ದಿ ಹೇಗಿತ್ತು?
20 ವರ್ಷಗಳಿಂದ ಸೋಲಿಲ್ಲದ ಸರದಾರನಂತೆ ಇದ್ದ ಸಿ.ಟಿ.ರವಿಗೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಇದ್ದರೂ ಕೂಡ ಎಸ್.ಎಲ್.ಭೋಜೇಗೌಡ ನೇರವಾಗಿ ಅಖಾಡಕ್ಕಿಳಿದು ಜೆಡಿಎಸ್‌ಗೆ ಮತ ಹಾಕಬೇಡಿ, ಕಾಂಗ್ರೆಸ್ಸಿಗೆ ಹಾಕಿ ಎಂದು ಸಮರ ಸಾರಿದ್ದರು. ಅದರ ಫಲವಾಗಿ ಈ ಬಾರಿ ಸಿ.ಟಿ.ರವಿ ಕೇವಲ ಐದು ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ. ಇದನ್ನೂ ಓದಿ: ಮತ್ತೆ ಎದ್ದು ಓಡುತ್ತೇನೆ, ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ – ನಿಖಿಲ್