ಹಾಸನ: ಜಿಲ್ಲೆಯ ಟಿಕೆಟ್ ಫೈಟ್ ಅದ್ಯಾಕೋ ಸದ್ಯಕ್ಕೆ ಮುಗಿಯೋ ಲಕ್ಷಣಗಳು ಕಾಣುತ್ತಿಲ್ಲ. ಹೆಚ್‍ಡಿಕೆ ನಾ ಕೊಡೆ ಅಂತಿದ್ರೆ, ರೇವಣ್ಣ (HD Revanna) ನಾಬಿಡೆ ಎನ್ನುತ್ತಿದ್ದಾರೆ. ಹೆಚ್‍ಡಿಕೆ ಹಲವು ಬಾರಿ ಹಾಸನಕ್ಕೆ ಸಾಮಾನ್ಯ ಕಾರ್ಯಕರ್ತನ ಹಾಕ್ತೇನೆ ಅಂತ ಹೇಳಿದ್ರು ಕೂಡ ಭವಾನಿ ರೇವಣ್ಣ (Bhavani Revanna) ಅಬ್ಬರದ ಪ್ರಚಾರ ಮಾಡಿದರು. ಬಳಿಕ ರೇವಣ್ಣ ಸ್ವಲ್ಪ ದಿನಗಳ ಬಳಿಕ ಟಿಕೆಟ್ ಕೊಟ್ರೆ ನಾನೇ ಪ್ರೀತಂಗೌಡ (Preetham Gowda) ವಿರುದ್ಧ ಅಖಾಡಕ್ಕಿಳಿಯೋದಾಗಿ ಹೇಳಿದ್ರು.
Advertisement
ರೇವಣ್ಣ ಹೇಳಿಕೆಯಿಂದ ಸ್ವರೂಪ್ (Swaroop) ಬೆಂಬಲಿಗರು ಹಾಗೂ ರೇವಣ್ಣ ಬೆಂಬಲಿಗರ ನಡುವೆ ಗೊಂದಲ ಉಂಟಾಗಿತ್ತು. ನಂತರ ಮತ್ತೆ ಹೆಚ್‍ಡಿಕೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡೋದಾಗಿ ಪುನರ್ ಉಚ್ಚರಿಸಿದ್ರು. ಈ ನಡುವೆ ರಾಜೇಗೌಡ ಜೆಡಿಎಸ್ ನನ್ನ ಕೆಲಸವನ್ನ ಗುರುತಿಸಿ ನನಗೆ ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡ್ತೇನೆ ಅಂತ ಕಳೆದ ವಾರವಷ್ಟೇ ರೇವಣ್ಣ ಭೇಟಿ ಬಳಿಕ ಹೇಳಿದ್ರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಸ್ವರೂಪ್ ಮಾಜಿ ಸಿಎಂ ಹೆಚ್‍ಡಿಕೆಯನ್ನ ಭೇಟಿ ಮಾಡಿದ್ರು. ಈ ವೇಳೆ ಹೆಚ್‍ಡಿಕೆ ನಾನು ಯಾರ ಒತ್ತಡಕ್ಕೂ ಮಣಿಯೋದಿಲ್ಲ ಸ್ವರೂಪ್‍ಗೆ ಟಿಕೆಟ್ ನೀಡ್ತೇನೆ ಎಂದ್ರಿದ್ರು. ಇದರಿಂದ ರೇವಣ್ಣ ಕೆರಳಿ ಕೆಂಡವಾಗಿದ್ದಾರೆ. ಸ್ವರೂಪ್ ಅಂದ್ರೆ ಯಾರು.. ಆತ ನನಗೆ ಗೊತ್ತೇ ಇಲ್ಲ ಅಂತ ಮೊನ್ನೆ ಹೇಳಿದ್ರು. ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ್ರೆ ಹೆಚ್‍ಡಿಕೆಗೂ ರೇವಣ್ಣ ನಡುವೆ ಫೈಟ್ ಉಂಟಾಗಿದೆ ಎಂದು ಸ್ಪಷ್ಟವಾಗುತ್ತಿದೆ.
Advertisement
Advertisement
ಕುಮಾರಸ್ವಾಮಿ ವಾದವೇನು?: ಈಗಾಗಲೇ ಸ್ವರೂಪ್‍ಗೆ ಟಿಕೆಟ್ ಕೊಡೋದಾಗಿ ಹೇಳಿದ್ದೇನೆ. ಬದಲಾವಣೆ ಮಾಡಿದ್ರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತೆ. ಕಾರ್ಯಕರ್ತರಿಗೆ ಟಿಕೆಟ್ ಘೋಷಿಸಿ ಮತ್ತೆ ಕುಟುಂಬಕ್ಕೆ ಕೊಟ್ರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಜೆಡಿಎಸ್ ಮೇಲೆ ಕುಟುಂಬ ರಾಜಕೀಯ ಅನ್ನೋ ಹಣೆಪಟ್ಟಿ ಇದೆ. ಭವಾನಿಗೆ ಟಿಕೆಟ್ ಕೊಟ್ಟರೆ ಮತ್ತೊಮ್ಮೆ ಕುಟುಂಬ ರಾಜಕೀಯ ಹಣೆಪಟ್ಟಿ ಬರುತ್ತೆ. ಭವಾನಿಗೆ ಟಿಕೆಟ್ ಕೊಟ್ಟರೆ ಬಿಜೆಪಿ-ಕಾಂಗ್ರೆಸ್‍ಗೆ ಚುನಾವಣೆ ಅಸ್ತ್ರ ಆಗುತ್ತೆ ಅನ್ನೋ ಭೀತಿ ಇದೆ.
Advertisement
ರೇವಣ್ಣ ವಾದವೇನು?: ಭವಾನಿ 3-4 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆಗಾಗಿ ದುಡಿದಿದ್ದರಿಂದ ಭವಾನಿಗೆ ಟಿಕೆಟ್ ಕೊಡಬೇಕು. ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಗೆಲ್ಲಲ್ಲ, ಪ್ರೀತಂಗೌಡ ವಿರುದ್ಧವಾಗಿ ಭವಾನಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ನಮ್ಮ ಕುಟುಂಬದ ವಿರುದ್ಧ ಪ್ರೀತಂಗೌಡ ಬಾಯಿಗೆ ಬಂದ ಹಾಗೆ ಮಾತಾಡಿದ್ದಾನೆ. ಅವನಿಗೆ ಪಾಠ ಕಲಿಸಲು ಭವಾನಿಗೆ ಟಿಕೆಟ್ ಕೊಡಲೇಬೇಕು. ಸ್ವರೂಪ್‍ಗೆ ವರ್ಚಸ್ ಇಲ್ಲ.. ಕ್ಷೇತ್ರದಲ್ಲಿ ಪ್ರಭಾವ ಇಲ್ಲ. ಹೀಗಾಗಿ ಭವಾನಿ ಸೂಕ್ತ ಅಭ್ಯರ್ಥಿ. ಎಲ್ಲಾ ಪಕ್ಷದಲ್ಲಿ ಕುಟುಂಬ ರಾಜಕೀಯ ಇದೆ. ಜೆಡಿಎಸ್‍ಗೆ ಮಾತ್ರ ಈ ಹಣೆಪಟ್ಟಿ ಬೇಡ. ಗೆಲುವಿನ ಆಧಾರದ ಮೇಲೆ ಭವಾನಿಗೆ ಟಿಕೆಟ್ ಕೊಡಬೇಕು ಎಂದು ರೇವಣ್ಣ ವಾದವಾಗಿದೆ.