ಹಾಸನ: ಹಾಸನದಲ್ಲಿ (Hassan) ಅಭ್ಯರ್ಥಿ ಹೆಸರು ಗೊತ್ತಿಲ್ಲ ಎಂದವರು ಈಗ ಮಗ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ರಾಜಕಾರಣದಲ್ಲಿ ಸಹಜ. ಈಗ ಅಮ್ಮ, ಮಗ, ತಂದೆ ತಾಯಿ ಎಲ್ಲಾ ನೆನಪಿಗೆ ಬರುತ್ತಾರೆ ಎಂದು ಶಾಸಕ ಪ್ರೀತಂ ಗೌಡ (Preetham Gowda) ಭವಾನಿ ರೇವಣ್ಣ (Bhavani Revanna) ಅವರಿಗೆ ಟಾಂಗ್ ನೀಡಿದರು.
ಸ್ವರೂಪ್ (Swaroop) ನನ್ನ ಮಗ. ಅವನನ್ನು ಗೆಲ್ಲಿಸುವುದೇ ನನ್ನ ಗುರಿ ಎಂಬ ಭವಾನಿ ರೇವಣ್ಣ ಹೇಳಿಕೆ ಕುರಿತಾಗಿ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪ್ರೀತಿ ಸ್ವರೂಪ್ ಮೇಲೆ ಇರುವುದು ಗೊತ್ತಾಗಿದೆ. ಇಬ್ಬರು ಹೊಂದಾಣಿಕೆ ಮಾಡಿಕೊಂಡಿರುವುದು ಒಳ್ಳೆಯ ಬೆಳವಣಿಗೆ. 2024ಕ್ಕೆ ಅವರ ಮಗ ಎಂಪಿ (MP) ಕ್ಯಾಂಡಿಡೇಟ್ ಆಗುವುದರಿಂದ ಅವರು ಈ ಎಲ್ಲಾ ಸರ್ಕಸ್ ಮಾಡಬೇಕಾಗುತ್ತದೆ. ಅವರು ಚುನಾವಣಾ ಪ್ರಚಾರ ಮಾಡುತ್ತಿರುವುದು 2023ರ ಅಭ್ಯರ್ಥಿ ಗೆಲ್ಲಲಿ ಎಂದು ಅಲ್ಲಾ. 1947ರಲ್ಲಿ ಇದೆಲ್ಲಾ ಮಾಡಿದರೆ ಜನರಿಗೆ ಅರ್ಥ ಆಗುತ್ತಿರಲಿಲ್ಲ. ಈಗ ಏನೇ ಮಾಡಿದರೂ ಜನರಿಗೆ ಗೊತ್ತಾಗುತ್ತದೆ. ಅವರು ಒಂದಾಗಿರುವುದು ಅವರ ಪಕ್ಷಕ್ಕೆ ಒಳ್ಳೆಯದು. ಹೀಗೆ ಒಂದಾಗಿದ್ದು ಅವರ ಕಾರ್ಯಕರ್ತರಿಗೆ ಸ್ಫೂರ್ತಿ ನೀಡಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೂ ಮಾಡಿಲ್ಲ, ಪಿಎಫ್‌ಐ ಮಾತ್ರ ಅಭಿವೃದ್ಧಿಯಾಯ್ತು: ಅರುಣ್ ಸಿಂಗ್
Advertisement
Advertisement
ಪ್ರೀತಂ ಗೌಡ ಅಭಿವೃದ್ಧಿ ಮಾಡಿದ್ದಾನೆ ಎಂದರೆ ಜನರು ಆಶೀರ್ವದಿಸುತ್ತಾರೆ. ಅದನ್ನು ಈ ಬಾರಿ ಹಾಸನ ಕ್ಷೇತ್ರದ ಮತದಾರರು ತೀರ್ಮಾನ ಮಾಡುತ್ತಾರೆ. ಯಾರು ಹತಾಶರಾಗಿದ್ದಾರೆ ಎನ್ನುವುದನ್ನು ಜನಸಾಮಾನ್ಯರು ನೋಡುತ್ತಿದ್ದಾರೆ. ಬೆಳಗ್ಗೆ 10:30ಕ್ಕೆ ಜೆಡಿಎಸ್ (JDS) ರ‍್ಯಾಲಿ ಶುರುವಾಗಬೇಕಿತ್ತು. ಅದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂದು ಹೇಳಿದ್ದರು. ಗಂಟೆ 12:30 ಆದರೂ ಸಹ ನೂರಾರು ಸಂಖ್ಯೆಯಲ್ಲಿ ಕೂಡಾ ಜನ ಸೇರಲಿಲ್ಲ. ಅದೇ ನಾನು ರ‍್ಯಾಲಿ ಮಾಡುತ್ತಿರುವುದು ಒಂದು ವಾರ್ಡ್. ಜನ ಸಾಮಾನ್ಯರು ಎಷ್ಟು ಬರುತ್ತಿದ್ದಾರೆ ಎಂದು ನೀವೇ ನಿಮ್ಮ ಕಣ್ಣಾರೆ ನೋಡಿ ಎಂದರು. ಇದನ್ನೂ ಓದಿ: ಜಗದೀಶ್ ಶೆಟ್ಟರ್ 100ಕ್ಕೆ ನೂರರಷ್ಟು ಗೆಲ್ತಾರೆ – ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
Advertisement
ಜೆಡಿಎಸ್‌ನವರು ಇಡೀ ನಗರದಲ್ಲಿ ರ‍್ಯಾಲಿ ಮಾಡುತ್ತೇವೆ ಎಂದು ಹೇಳಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಚುನಾವಣೆಯಲ್ಲಿ (Election) ಜನ ಯಾರ ಪರ ಇದ್ದಾರೆ ಎನ್ನುವುದು ಮುಖ್ಯ. ಪ್ರಧಾನಿ ನರೇಂದ್ರ ಮೋದಿ, ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಾಸಕನಾದ ನನಗೂ ಒಂದೇ ವೋಟು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಒಂದೇ ವೋಟು ಇರೋದು. ಜನ ಯಾರ ಪರ ನಿಲ್ಲತ್ತಾರೋ ಅವರು ಜನಪ್ರತಿನಿಧಿಯಾಗುತ್ತಾರೆ. ಯಾರೋ ಒಬ್ಬರು ಹೇಳಿದ ತಕ್ಷಣ ಅದು ಆಗುವುದಿಲ್ಲ. ಜನ ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡೋಣ ಎಂದು ಹೆಳಿದರು. ಇದನ್ನೂ ಓದಿ: ಅಮಿತ್ ಶಾ, ವಿ.ಸೋಮಣ್ಣ ವಿರುದ್ಧ ಪೊಲೀಸರಿಗೆ ‘ಕೈ’ ನಾಯಕರ ದೂರು
Advertisement
ಪ್ರೀತಂ ಗೌಡ ಅವರನ್ನು ಹಾಸನ ಬಿಟ್ಟು ಓಡಿಸುತ್ತೇವೆ ಎಂದು ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ (Prajwal Revanna) ಅವರ ಬೈಟ್ ನೋಡಿ. ಈ ವಿಷಯ ನನಗೂ ಗೊತ್ತಿರಲಿಲ್ಲ. ಗ್ರಾಮಕ್ಕೆ ಹೋದಾಗ ಎಂಪಿಯವರು ಉದ್ವೇಗದಿಂದ ಈ ರೀತಿಯಾಗಿ ಮಾತನಾಡಿದ್ದಾರೆ ಎಂದು ಒಬ್ಬ ಸೀನಿಯರ್ ಸಿಟಿಜನ್ ಹೇಳಿದರು. ಅವರು ಹಾಗೆ ಹೇಳಿಲ್ಲ ಎಂದರೆ ಸಂತೋಷ. ನಾನು ಯಾವುದೇ ಕಾರಣಕ್ಕೂ ಅವರ ರೀತಿ ರಾಜಕೀಯದಲ್ಲಿ ವಿಚಲಿತನಾಗುವುದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ? – ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ
ದೇವೇಗೌಡರಿಗೆ (H.D.Deve Gowda) ಹಾಗೂ ರೇವಣ್ಣನಿಗೆ ಪ್ರೀತಂ ಗೌಡ ಅಗೌರವ ತೋರಿದ್ದಾರೆ ಎಂಬ ಭವಾನಿ ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರ ಬಗ್ಗೆ ಪ್ರೀತಂ ಗೌಡಗೆ ಇರುವ ಕನಿಷ್ಠ ಗೌರವ ಕೂಡಾ ಅವರ ಮನೆಯವರಿಗೆ ಇಲ್ಲ. ಅವರನ್ನು ಹಾಸನದಲ್ಲಿ ನಿಲ್ಲಿಸಿ ಗೆಲ್ಲಿಸಬೇಕು ಎನ್ನುವುದು ಕಾರ್ಯಕರ್ತರ ಅಭಿಲಾಷೆ ಆಗಿತ್ತು. ಆದರೆ ಅವರ ಸ್ವಾರ್ಥಕ್ಕೆ, ಮಗನನ್ನು ಅಭ್ಯರ್ಥಿಯನ್ನಾಗಿ ಮಾಡಲು ತುಮಕೂರಿಗೆ (Tumkur) ಕಳಿಸಿದರು. ಇದು ಅವರ ಕುಟುಂಬದಲ್ಲೇ ವ್ಯಕ್ತವಾಗಿರುವ ಮಾತು. ಅವರನ್ನು ತುಮಕೂರಿಗೆ ಕಳಿಸುವ ಔಚಿತ್ಯ ಏನಿತ್ತು ಎಂದು ಅವರೇ ಯೋಚನೆ ಮಾಡಲಿ. ದೇವೇಗೌಡರ ಬಗ್ಗೆ ಹಾಸನದ ಜನ ಏನು ಗೌರವ ಇಟ್ಟಿದ್ದಾರೋ ಅದರ ಅರ್ಧಭಾಗ ಅವರ ಕುಟುಂಬ ಇಟ್ಟುಕೊಂಡರೆ ಸಾಕು. ಅವರು ರಾಜಕಾರಣದ ಲಾಭ ಬಿಟ್ಟು ಗೌರವ ಇಟ್ಟುಕೊಳ್ಳಲಿ. ಆಗ ದೇವೇಗೌಡರಿಗೆ ಒಂದು ನೆಮ್ಮದಿ. ಇಷ್ಟು ಸುದೀರ್ಘ ರಾಜಕಾರಣ ಮಾಡಿದ ಗೌಡರನ್ನು ತುಮಕೂರಿಗೆ ಕಳಿಸಿ ಸೋಲಿಸಿದ್ದನ್ನು ಯಾರೂ ಮರೆತಿಲ್ಲ. ನಾನು ವಿರೋಧ ಪಕ್ಷದಲ್ಲಿ ಇದ್ದರೂ ಆ ವ್ಯಕ್ತಿ ಬಗ್ಗೆ ಗೌರವ ಇಟ್ಟುಕೊಂಡಿದ್ದೇನೆ. ದೇವೇಗೌಡರ ಬಗ್ಗೆ ಅವರಿಗಿಂತ ಹೆಚ್ಚಿನ ಗೌರವ ಹೊಂದಿದ್ದೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾವನ ಪರ ಪ್ರಚಾರಕ್ಕೆ ಧುಮುಕಿದ ಸಿದ್ದು ಸೊಸೆ
ಪ್ರೀತಂಗೌಡರನ್ನು ಸೋಲಿಸಿ ಎಂಬ ದೇವೇಗೌಡರ ಹೇಳಿಕೆ ವಿಚಾರವಾಗಿ ಉತ್ತರಿಸಿದ ಅವರು, ಅವರು ವಿರೋಧ ಪಕ್ಷದ ರಾಷ್ಟ್ರೀಯ ನಾಯಕರು. ಅವರು ಪ್ರೀತಂಗೌಡರನ್ನ ಗೆಲ್ಲಿಸಿ ಎನ್ನಲು ಆಗುತ್ತಾ? ಅವರು ಅವರ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ಎಂದಿದ್ದಾರೆ. ಅಮಿತ್ ಶಾ (Amit Shah) ಅವರು ಪ್ರೀತಂಗೌಡ ಅವರನ್ನು ಗೆಲ್ಲಿಸಿ ಎಂದರು. ಅವರು ಬೇರೆಯವರನ್ನ ಗೆಲ್ಲಿಸಿ ಎನ್ನಲು ಆಗುತ್ತಾ? ಇಲ್ಲಿ ಏನು ಅಭಿವೃದ್ಧಿ ಆಗಿದೆ, ಎಷ್ಟು ಜನ ಬೆಂಬಲ ಇದೆ ಎಂದು ನೀವೆ ನೋಡಿ. ಯಾರೊ ಬಂದು ಪ್ರೀತಂಗೌಡ ಅವರನ್ನು ಓಡಿಸಿ ಎಂದ ಕೂಡಲೇ ಓಡಿಸೋಕೆ ಜನರು ದಡ್ಡರಲ್ಲ. ಜನರ ಕಷ್ಟ ಹಾಗೂ ಸುಖಕ್ಕೆ ನಾನು ಮನೆ ಮಗನಾಗಿ ಕೆಲಸ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಚುನಾವಣೆಗೆ ಅಣಿಗೊಳಿಸಲು ಮೋದಿ ರಣತಂತ್ರ – 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ