ಯಾದಗಿರಿ: ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೇಳಿರುವುದು ನೂರಕ್ಕೆ ನೂರು ಸತ್ಯ. ಬಿಜೆಪಿ (BJP) ಸಂಪೂರ್ಣ ಬಹುಮತ ಬರುವುದರಲ್ಲಿ ಸಂಶಯವಿಲ್ಲ. ನಾವೇ ಅಧಿಕಾರಕ್ಕೆ ಬಂದು ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಹೇಳಿದರು.
ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಮತ್ತೊಮ್ಮೆ ನಾನೇ ಸಿಎಂ ಎಂಬ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಕೇಂದ್ರ ಹಾಗೂ ರಾಜ್ಯದ ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು ನಮ್ಮ ಕೈ ಹಿಡಿಯುತ್ತವೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸೌಲಭ್ಯ ಪಡೆದ ನೇರವಾದ ಲಾಭಾರ್ಥಿಗಳಿದ್ದಾರೆ. ಸರ್ಕಾರದ ಯೋಜನೆಗಳಲ್ಲಿ ಲಾಭ ಪಡೆದಿರುವಂತ ವ್ಯಕ್ತಿಗಳು ನಮ್ಮ ಜೊತೆಗಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಇದರಿಂದಾಗಿ ಬೊಮ್ಮಾಯಿ ಅವರೇ ಮತ್ತೊಮ್ಮೆ ಸಿಎಂ ಆಗುತ್ತಾರೆ ಎಂದು ಹೇಳಿದರು.
Advertisement
Advertisement
ಕಲಬುರಗಿಯಿಂದ ಬರುವಾಗ ಜೆಡಿಎಸ್‌ನ ಸಾಕಷ್ಟು ಫೋಸ್ಟರ್‌ಗಳನ್ನು ನೋಡಿದೆ. ಜೆಡಿಎಸ್‌ನ ಪಂಚರತ್ನ ಯಾತ್ರೆಗೆ ಪಂಕ್ಚರ್ ಯಾತ್ರೆ ಎಂದು ಗೊತ್ತಾಯ್ತು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ (JDS) ನಾಣ್ಯ ಚಲಾವಣೆ ಆಗ್ತಾಯಿಲ್ಲ, ಇಲ್ಲಿ ಬಂದಿದಿಯಾ ಅಂತ ನಮ್ ಕಾರ್ಯಕರ್ತರನ್ನ ಕೇಳಿದೆ. ಚುನಾವಣೆ ಬರ್ತಾಯಿದ್ದ ಹಾಗೆ ಜೆಡಿಎಸ್‌ನವರು ಕಾಣ್ತಾ ಇದ್ದಾರೆ. ಇವರಿಗೆ ಪಂಚ ವರ್ಷ ಇರಲಿಲ್ಲ, ಹೀಗಾಗಿ ಜೆಟಿಎಸ್‌ನವ್ರು ಪಂಚ ವರ್ಷದ ಕೊನೆಯಲ್ಲಿ ಪಂಚರತ್ನ ಅಂತ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
ರಾಹುಲ್ ಗಾಂಧಿಗೆ ಶಿಕ್ಷೆ ಪ್ರಕಟ ಸ್ವಾಗತ: ಪ್ರಧಾನಿ ಮೋದಿಗೆ (Narendra Modi) ನಿಂದನೆ ಆರೋಪದಲ್ಲಿ ರಾಹುಲ್ ಗಾಂಧಿಗೆ (Rahul Gandhi) ಸೂರತ್ ಕೋರ್ಟ್ ಕೊಟ್ಟಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ರಾಹುಲ್ ಗಾಂಧಿ ಇಂದಿನ ಕೇಸ್ ಸೇರಿ ಎರಡು ಪ್ರಕರಣಗಳಲ್ಲಿ ಬೇಲ್ ಮೇಲೆ ಹೊರಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರದ ಆರೋಪದಲ್ಲಿ ಕೇಸ್ ನಡೆಯುತ್ತಿದೆ. ಅದರಲ್ಲೂ ಬೇಲ್ ತೆಗೆದುಕೊಂಡಿದ್ದಾರೆ. ಈಗ ಮೋದಿ ಅವರ ವಿರುದ್ಧ ಹಗುರವಾಗಿ, ಅವಮಾನವಾಗುವಂತೆ ಮಾತನಾಡಿದ್ದಕ್ಕೆ ಸೂರತ್ ಕೋರ್ಟ್ ಶಿಕ್ಷೆ ಕೊಟ್ಟಿದೆ. ಅಲ್ಲೂ ಕೂಡಾ ಬೇಲ್ ತೆಗೆದುಕೊಂಡಿದ್ದಾರೆ. ಈ ದೇಶದ ಪ್ರಧಾನಿ ಆಗಬೇಕೆಂದು ಕನಸು ಕಂಡಿರುವ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಗೆ ಯಾವ ರೀತಿ ಮಾತಾಡಬೇಕು? ಹೇಗೆ ವರ್ತನೆ ಮಾಡಬೇಕು? ಎನ್ನುವುದನ್ನು ಈಗಲಾದರೂ ಕಲಿಬೇಕು. ಆದರೆ ರಾಹುಲ್ ಗಾಂಧಿ ಅವ್ರು ಅದನ್ನ ಮತ್ತೆ ಮತ್ತೆ ಪುನರಾವರ್ತನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ಮೋದಿ ಅವರ ಕುರಿತಾಗಿ ವೈಯಕ್ತಿಕ ಟೀಕೆಗಳನ್ನು ಮಾಡುವುದು ಕಾಂಗ್ರೆಸ್ ಪಾರ್ಟಿಗೆ ಹೊಸದಲ್ಲ. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ಸೋನಿಯಾ ಗಾಂಧಿ, ರವಿಶಂಕರ್ ಅಯ್ಯರ್ ಅವಾಚ್ಯ ಶಬ್ದದಿಂದ ನಿಂದಿಸಿದ್ದರು. ಅದೇ ಚಾಳಿ ಮುಂದುವರಿಸಿ ವೈಯಕ್ತಿಕ ಟೀಕೆ ಮಾಡುತ್ತಿದ್ದ ರಾಹುಲ್ ಗಾಂಧಿ 2019ರಲ್ಲಿ ಮಾತನಾಡಿದ್ದ ಪ್ರಕರಣಕ್ಕೆ ಕೋರ್ಟ್ ಗುರುವಾರ ಶಿಕ್ಷೆ ಕೊಟ್ಟಿದೆ. ಈಗಲಾದ್ರೂ ಪಶ್ಚಾತ್ತಾಪ ಪಟ್ಟು, ಸಾರ್ವಜನಿಕ ಜೀವನದಲ್ಲಿ ಇರಬೇಕಾದ ಸಭ್ಯತೆಯನ್ನ ಕಲಿಯಬೇಕು ಎಂದರು. ಇದನ್ನೂ ಓದಿ: ಮುಸ್ಲಿಂ ಅಭ್ಯರ್ಥಿ ಹಾಕದಿದ್ರೆ ನೋಟಾಗೆ ಮತ – ನಾಯಕರಿಗೆ ಮಹಿಳೆಯರಿಂದ ವಾರ್ನಿಂಗ್
ರಾಹುಲ್ ಗಾಂಧಿ ಈ ರೀತಿ ಹೇಳಿಕೆ ಕೊಡುವುದರಿಂದ ಮೋದಿ ಅವರ ಬಗ್ಗೆ ಕೆಟ್ಟದಾಗಿ ಮಾತಾಡುವುದರಿಂದ, ಜನ ಅವರ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಕಡಿಮೆ ಆಗುವುದಿಲ್ಲ. ಅದು ಮತ್ತಷ್ಟು ಗಟ್ಟಿಯಾಗುತ್ತಾ ಹೋಗುತ್ತದೆ. ಮೋದಿ ಅವರ ಮಾತಿನಲ್ಲೇ ಹೇಳುವುದಾದರೇ ನಮ್ಮ ಕಮಲ ಅರಳುವುದು ಕಾಂಗ್ರೆಸ್‌ನವರು ಎರಚುವ ಕೆಸರಿನಲ್ಲಿ ಎಂದು ಹೇಳಿದರು. ಆದ್ದರಿಂದ ಅವರು ಮೋದಿ ಅವರ ಮೇಲೆ ಎಷ್ಟೇ ಕೆಟ್ಟ ಶಬ್ದಗಳನ್ನ ಬಳಸಿದ್ರೂ, ಜನರ ಪ್ರೀತಿ ವಿಶ್ವಾಸ ಅಷ್ಟೇ ಗಟ್ಟಿಯಾಗುತ್ತಾ ಹೋಗುತ್ತದೆ. ಹೀಗಾಗಿ ಕೋರ್ಟ್ ಕೊಟ್ಟಿರುವ ತೀರ್ಪನ್ನ ಸ್ವಾಗತಿಸುತ್ತೇನೆ. ಇನ್ಮೇಲಾದ್ರೂ ರಾಹುಲ್ ಗಾಂಧಿ ಅವ್ರು ತಮ್ಮ ಸ್ಥಾನಕ್ಕೆ ತಕ್ಕಂತೆ ಇರಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಆಟವಾಡುತ್ತಾ ಉಂಗುರ ನುಂಗಿದ 8 ತಿಂಗಳ ಮಗು ಸಾವು