ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಈ ಬಾರಿ ಕಿಚಡಿ ಸರ್ಕಾರ ಬರಲ್ಲ, ಬಿಜೆಪಿ (BJP) ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ (Sudhakar) ತಿರುಗೇಟು ನೀಡಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಭ್ರಷ್ಟಾಚಾರ ಯಾತ್ರೆ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಭಿವೃದ್ಧಿ ಮಾಡಿದ್ರೆ 128 ಸ್ಥಾನದಿಂದ 78 ಸ್ಥಾನಕ್ಕೆ ಯಾಕೆ ಬಂದ್ರು? 17 ಮಂತ್ರಿಗಳು ಯಾಕೆ ಸೋತರು? ಲೋಪದೋಷ ಆಗಿರೋದಕ್ಕೆ ಅಲ್ವಾ? ಸಿಎಂ ಆದವರೇ ಸ್ವತಃ ಸೋತರಲ್ಲ. ಯಾಕೆ ಸೋತ್ರು? ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಮಾಡಿದ್ರಾ? ನಮ್ಮ ವಿಜಯ ಸಂಕಲ್ಪ ಯಾತ್ರೆಗೆ ಜನ ಉತ್ಸಾಹದಿಂದ ಬರುತ್ತಿದ್ದಾರೆ. ಬಿಜೆಪಿ ಸೋಲಿಸಲು ಕಾಂಗ್ರೆಸ್‌ನಿಂದ (Congress) ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟ ಕೇಸ್ – ಎರಡೂವರೆ ತಿಂಗಳ ಬಳಿಕ ಶಾರೀಕ್ ಡಿಸ್ಚಾರ್ಜ್
Advertisement
Advertisement
ಜನ ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ತೀರ್ಮಾನ ಮಾಡಿದ್ದಾರೆ. ಕೇಂದ್ರದಲ್ಲಿ ಇರುವ ಸರ್ಕಾರವೇ ರಾಜ್ಯದಲ್ಲೇ ಅಧಿಕಾರಕ್ಕೆ ಬರಬೇಕು. ಸಣ್ಣ ಮಕ್ಕಳಿಗೂ ಈ ವಿಚಾರ ಗೊತ್ತಿದೆ. ಇಲ್ಲಿ ಯಾರೂ ದಡ್ಡರಲ್ಲ. ಕಾಂಗ್ರೆಸ್ ಇನ್ನೂ 15 ವರ್ಷ ಆದರೂ ಅಧಿಕಾರಕ್ಕೆ ಬರಲ್ಲ ಅಂತ ಜನರಿಗೆ ಗೊತ್ತಿದೆ. ಜನ ಈ ಬಾರಿ ಕಿಚಡಿ ಸರ್ಕಾರ ಅತಂತ್ರ ಸರ್ಕಾರ ಬಯಸುವುದಿಲ್ಲ. ಈಗಾಗಲೇ ಸಮ್ಮಿಶ್ರ ಸರ್ಕಾರ ಬಂದ್ರೆ ಏನು ಅನಾಹುತ ಆಗುತ್ತೆ ಎನ್ನುವ ಅರಿವಿದೆ. ಸಿಂಗಲ್ ಪಾರ್ಟಿ ಬಿಜೆಪಿಗೆ ಈ ಬಾರಿ ಜನ ಬಹುಮತ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಆಯುರ್ವೇದ ಪಥ್ಯ; 22 ಕೆಜಿ ತೂಕ ಕಡಿಮೆ ಮಾಡಿಕೊಂಡ ಕೇಂದ್ರ ಸಚಿವ