ಯಾದಗಿರಿ: ಪರಮೇಶ್ವರ್ (G.Parameshwar) ಮೇಲೆ ಕಲ್ಲು ತೂರಾಟ ಪ್ರಕರಣ ಖಂಡನೀಯ. ಈ ರೀತಿಯ ಘಟನೆ ಎಲ್ಲೂ ನಡೆಯಬಾರದು. ಘಟನೆಗೆ ಕಾರಣ ಏನು ಎಂಬುದನ್ನು ತನಿಖೆ ಮಾಡಿಸಿ ಯಾರು ಈ ರೀತಿ ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಕಿಡಿಕಾರಿದರು.
ಯಾದಗಿರಿಯ (Yadgir) ಹುಣಸಗಿಯಲ್ಲಿ ಸುರಪುರ ಬಿಜೆಪಿ ಅಭ್ಯರ್ಥಿ ರಾಜೂಗೌಡ (Raju Gowda) ಪರ ರೋಡ್ ಶೋ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ (BJP) ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು, ಈ ಬಾರಿ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಅಲ್ಲದೇ ಮಾಜಿ ಡಿಸಿಎಂ ಪರಮೇಶ್ವರ್ ಮೇಲೆ ಕಲ್ಲು ತೂರಾಟ ಖಂಡನೀಯವಾಗಿದ್ದು, ಕಲ್ಲು ತೂರಾಟ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಹೇಳಿಕೊಟ್ಟಂತೆ ಖರ್ಗೆ ಮಾತಾಡಿದ್ದಾರೆ: ಜೆ.ಪಿ ನಡ್ಡಾ
Advertisement
Advertisement
ಬಿಜೆಪಿಯಲ್ಲಿ ಲಿಂಗಾಯತರನ್ನು ಸಿಎಂ ಮಾಡುವುದಿಲ್ಲ ಎಂಬ ಜಗದೀಶ್ ಶೆಟ್ಟರ್ (Jagadish Shettar) ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದಕ್ಕೆ ಜಗದೀಶ್ ಶೆಟ್ಟರ್ ಯಾಕೆ ತಲೆ ಕೆಡಿಸಿಕೊಳ್ಳುತ್ತಾರೆ. ಅವರು ಈಗ ಕಾಂಗ್ರೆಸ್‌ನಲ್ಲಿದ್ದಾರೆ. ನಮಗೆ ಏನು ಮಾಡಬೇಕು, ಯಾರನ್ನು ಸಿಎಂ ಮಾಡಬೇಕು ಎಂಬುದು ಗೊತ್ತಿದೆ. ನಾವು ಬಹುಮತ ಪಡೆದು, ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ- ಸಿದ್ದರಾಮಯ್ಯ
Advertisement
Advertisement
40% ಸರ್ಕಾರಕ್ಕೆ 40 ಸೀಟ್ ಕೊಡಬೇಕು ಎನ್ನುವ ರಾಹುಲ್ ಗಾಂಧಿ (Rahul Gandhi) ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕಪ್ ಮಾಡಿಸಬೇಕು. ಸೋನಿಯಾ ಗಾಂಧಿ ವಿಷಕನ್ಯೆ ಎಂಬ ಯತ್ನಾಳ್ (Basanagouda Patil Yatnal) ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಯಾರೂ ಈ ರೀತಿಯ ಹೇಳಿಕೆಗಳನ್ನು ಕೊಡಬಾರದು ಎಂದರು. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಹೆಚ್.ವಿಶ್ವನಾಥ್
ಶನಿವಾರ ರಾಜ್ಯದಲ್ಲಿ ಪ್ರಧಾನಿ ಮೋದಿಯವರ (Narendra Modi) ಪ್ರವಾಸ ನಡೆಯುತ್ತಿದೆ. ಅಮಿತ್ ಶಾ (Amit Shah) ಕೂಡಾ ಬರುತ್ತಿದ್ದಾರೆ. ಇದರ ಪರಿಣಾಮ ನಾವು ಈ ಬಾರಿ 140ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ. ಯಾರ ಹಂಗಿಲ್ಲದೆ ಸ್ವತಂತ್ರ ಸರ್ಕಾರ ಮಾಡೋದು ಖಚಿತ. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ವಾತಾವರಣ ನಮ್ಮ ನಿರೀಕ್ಷೆಗೂ ಮೀರಿ ನಮ್ಮ ಪರವಾಗಿದೆ. ಯುವಕರು, ಮಹಿಳೆಯರು ಎಲ್ಲರೂ ನಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರ ಸುರಪುರದಲ್ಲೂ ನಮ್ಮ ಅಭ್ಯರ್ಥಿ ರಾಜೂಗೌಡ 40ರಿಂದ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಎಲ್ಲಾ ಕಡೆಯೂ ಜನ ನಮಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸನ್ ಸ್ಟ್ರೋಕ್ – ಪ್ರಚಾರಕ್ಕೆ ತೆರಳುವಾಗ ದಿಢೀರನೆ ಕುಸಿದು ಬಿದ್ದ ಸಿದ್ದರಾಮಯ್ಯ