ಬೆಂಗಳೂರು: ಕರ್ನಾಟಕ ಚುನಾವಣೆಯ (Karnataka Election) ಎಕ್ಸಿಟ್ ಪೋಲ್ ಲೆಕ್ಕಾಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದಾರೆ.
ಈ ಎಕ್ಸಿಟ್ ಪೋಲ್‍ಗಳನ್ನು (Exit Poll) ನಾನು ನಂಬುವುದಿಲ್ಲ. ನಾವು 141 ಸ್ಥಾನಗಳನ್ನು ದಾಟುತ್ತೇವೆ ಎಂಬ ಭರವಸೆ ಇದೆ. ಮಾಧ್ಯಮಗಳ ಲೆಕ್ಕಾಚಾರ ಬೇರೆ, ನಮ್ಮ ಲೆಕ್ಕಾಚಾರ ಬೇರೆ. ಈಗ ಮಾಧ್ಯಮಗಳು ತೋರಿಸುತ್ತಿರುವ ವರದಿಗಳು ಸುಳ್ಳಾಗುತ್ತವೆ. ಕಾಂಗ್ರೆಸ್‍ಗೆ (Congress) ಸ್ಪಷ್ಟ ಬಹುಮತ ಬರಲಿದೆ. ನಮಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಟುಡೇಸ್ ಚಾಣಕ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ
ಈ ಬಾರಿ ಮಂಡ್ಯ, ಮೈಸೂರು ಮತ್ತು ಹಾಸನ ಭಾಗಗಳಲ್ಲೇ ಸುಮಾರು 23 ರಿಂದ 24 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಕೊಡಗಿನಲ್ಲೂ ಎರಡು ಸ್ಥಾನ ಗೆಲ್ಲುವ ಭರವಸೆ ಇದೆ ಇದರಿಂದಾಗಿ ನಮ್ಮ ಸ್ಥಾನಗಳು ಹೆಚ್ಚಲಿವೆ ಎಂದು ಅವರು ಭರವಸೆ ವ್ಯಕ್ತಪಡಿದ್ದಾರೆ. ಇದನ್ನೂ ಓದಿ: ಈ ಬಾರಿ ಬಿಜೆಪಿ 125ರಿಂದ 130 ಸ್ಥಾನಗಳನ್ನು ಗೆಲ್ಲಲಿದೆ: ಯಡಿಯೂರಪ್ಪ ವಿಶ್ವಾಸ