ಕೋಲಾರ: ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರ (Kolara) ವಿಧಾನಸಭಾ ಕ್ಷೇತ್ರದ ರಾಜಕೀಯ (Politics) ಚಟುವಟಿಕೆಗಳು ರಂಗೇರುತ್ತಿದೆ. ವಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತಮ್ಮ ಚುನಾವಣಾ ತಂತ್ರಗಾರಿಕೆಗಾಗಿ ವಾರ್ ರೂಂ ತೆರೆದಿದ್ದಾರೆ.
ಟೇಕಲ್ ರಸ್ತೆಯ ಸಮೃದ್ಧಿ ಬಡಾವಣೆಯಲ್ಲಿರುವ ಸುಸಜ್ಜಿತ ಮಳಿಗೆಯಲ್ಲಿ ವಾರ್ ರೂ ತೆರೆಯಲಾಗಿದೆ. ವಾರ್ ರೂಮ್ನಲ್ಲಿ ಕ್ಷೇತ್ರದ ಚುನಾವಣಾ ಕೆಲಸ, ಪ್ರಚಾರದ ಯೋಜನೆ ರೂಪಿಸಲಾಗುತ್ತದೆ. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Prashnath Kishore) ಅವರ ತಂಡದಲ್ಲಿ ಕೆಲಸ ಮಾಡಿದ್ದ ಪರಿಣಿತರೇ ಈ ಪೋಲ್ ಹೌಸ್ ಏಜೆನ್ಸಿ ನಿರ್ಮಿಸಿದ್ದು, ಈ ವಾರ್ ರೂಂ ನಿರ್ವಹಣೆ ಮಾಡಲಿದೆ.
Advertisement
Advertisement
ಕೋಲಾರ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಈ ಸಂಸ್ಥೆ ಮುಂದಿನ ಮೂರು ತಿಂಗಳು ಈ ವಾರ್ ರೂಂನಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನೂ ಓದಿ: ಟ್ರಾಫಿಕ್ ದಂಡ 50% ರಿಯಾಯ್ತಿ 5 ತಿಂಗಳು ಅವಧಿ ವಿಸ್ತರಣೆ ಮಾಡಿ – ಜೆಡಿಎಸ್ ಸದಸ್ಯ ಮಂಜೇಗೌಡ ಒತ್ತಾಯ
Advertisement
ಈ ವಾರ್ ರೂಂನಲ್ಲಿ 20 ರಿಂದ 40 ಜನರ ತಂಡ ಕೆಲಸ ಮಾಡಲಿದ್ದು, ವಿವಿಧ ರೀತಿಯ ಸಮೀಕ್ಷೆಗಳನ್ನು ಮಾಡಲಿದೆ. ಅಲ್ಲದೇ ಸಿದ್ದರಾಮಯ್ಯ ಬ್ರ್ಯಾಂಡಿಂಗ್, ಇಮೇಜ್ ಬಿಲ್ಡ್ ಮಾಡಲಿದೆ. ಕೋಲಾರ ಕ್ಷೇತ್ರದಲ್ಲಿ ಈ ತಂಡ ತಿರುಗಾಟ ಮಾಡಿ ಕಾಂಗ್ರೆಸ್ ನಾಯಕರು ಸೇರಿದಂತೆ ವಿರೋಧ ಪಕ್ಷಗಳ ಮುಖಂಡರ ಮೇಲೂ ಇದು ನಿಗಾ ಇಡಲಿದೆ.
Advertisement
ವಿಶೇಷವಾಗಿ ಡಿಜಿಟಲ್ ಮೂಲಕ ತಂತ್ರಗಾರಿಕೆ ಹೆಣೆಯಲಿದ್ದು ಸರ್ವೇ, ಮಾಧ್ಯಮ ನಿರ್ವಹಣೆ, ಸಾಮಾಜಿಕ ಜಾಲತಾಣದ ಮೂಲಕ ಸಿದ್ದರಾಮಯ್ಯ ಸರ್ಕಾರದ ಯೋಜನೆಗೆಳನ್ನು ಪ್ರಚಾರ ಮಾಡಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k