ಮೈಸೂರು: ಹೇ ನಡೀಯಪ್ಪ ನೀನು ನಮಗೆ ತಲೆ ಬಿಸಿಯಾಗಿದೆ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೊರಟ ಪ್ರಸಂಗ ಇಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ.
ಹೌದು. ನಂಜನಗೂಡು ಟಿಕೆಟ್ ಟೆನ್ಷನ್ ನಲ್ಲಿ ಸಿದ್ದರಾಮಯ್ಯ ಇದ್ದಾರೆ ಎನ್ನಲಾಗಿದೆ. ಇಂದು ಬೆಳ್ಳಂಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ (Dr. H C Mahadevappa) ದೌಡಾಯಿಸಿದ್ದಾರೆ. ಕೆಲಕಾಲ ನಂಜನಗೂಡು ಟಿಕೆಟ್ ವಿಚಾರವಾಗಿ ಮಾತುಕತೆ ನಡೆದಿದ್ದು, ನಗರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯ ಹೊರಟಿದ್ದು, ಟೆನ್ಶನ್ ನಲ್ಲಿರುವುದಕ್ಕೆ ಪುಷ್ಠಿ ನೀಡಿತ್ತು. ಇದನ್ನೂ ಓದಿ: ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬರುವುದಕ್ಕಿಂತ ವಿಪಕ್ಷದಲ್ಲಿ ಇರೋದೆ ಒಳ್ಳೆಯದು: ಜಾರಕಿಹೊಳಿ
Advertisement
Advertisement
ಧ್ರುವನಾರಾಯಣ (Dhruvanarayan) ಮಗನಿಗೆ ಟಿಕೆಟ್ ನೀಡಬೇಕೆಂದು ಗಲಾಟೆಯಾದ ವಿಚಾರಕ್ಕೆ ನಂಜನಗೂಡು ಟಿಕೆಟ್ ಆಕಾಂಕ್ಷಿ ಡಾ.ಹೆಚ್‍ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಯಾರಿಗೆ ಜೀವನದ ಮೂಲ್ಯದ ಬಗ್ಗೆ ಮಹತ್ವ ಇಲ್ಲವೋ ಅವರೆಲ್ಲಾ ಈ ರೀತಿ ಮಾತನಾಡುತ್ತಾರೆ. ಅಧಿಕಾರ, ಅಂತಸ್ತಿಗಿಂತಾ ಜೀವ ಮುಖ್ಯ. ಜೀವ ಹೋದ್ರೆ ಮತ್ತೊಂದು ಬಾರಿ ಸಿಕ್ಕಲ್ಲ. ಅಘಾಕಾರಿ ಘಟನೆ ನಡೆದು ಧ್ರುವನಾರಾಯಣ ತೀರಿ ಹೋಗಿದ್ದಾರೆ. ಆ ನೋವು ಎಲ್ಲರಲ್ಲೂ ನನ್ನಲ್ಲೂ ಸೇರಿದಂತೆ ಇದೆ. ಜೀವದ ಮುಂದೆ ಪೊಲಿಟಿಕಲ್ ಪವರ್, ಟಿಕೆಟ್ ಯಾವುದೇ ಇಂಪಾರ್ಟೆಂಟ್ ಅಲ್ಲ ಎಂದ ಹೇಳಿದರು.