ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆಯವರು ಚುನಾವಣಾ ಆಯೋಗ (Election Commision) ಕ್ಕೆ ದೂರು ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ (Shobha Karandlaje), ಇಂದು ಎಲೆಕ್ಷನ್ ಕಮಿಷನ್‍ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದೇವೆ. ಕರ್ನಾಟಕದ ಸಾರ್ವಭೌಮತ್ವದ ವಿರುದ್ಧ ಮಾತಾಡಿದ್ದಾರೆ. ದೇಶದ ಏಕತೆ ಅಂತ ಮಾತಾಡ್ತೀವಿ ಎಂದರು.
ಜೆಎನ್‍ಯು (JNU) ನಲ್ಲಿ ತುಕಡೆ ಗ್ಯಾಂಗ್ ದೇಶ ವಿಭಜನೆ ಬಗ್ಗೆ ಮಾತಾಡ್ತಿದ್ರು ಆ ಭಾಷೆಯನ್ನ ಇಲ್ಲಿ ಬಳಸಿದ್ದಾರೆ. ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಅಂತ ನಾವೆಲ್ಲಾ ಬಾಳ್ತಿದ್ದೀವಿ. ಯಾವ ದೇಶ ಒಗ್ಗಟ್ಟಾಗಿ ಇರಬೇಕು ಅಂತ ಸಾರ್ವಭೌಮತ್ವದ ಹಾಗೂ ದೇಶದ ಭದ್ರತೆ ಬಗ್ಗೆ ಜನರಲ್ ತಿಮ್ಮಯ್ಯ ಮಾತನಾಡಿದ್ರು. ಆದರೆ ಅದನ್ನ ಹೊಡೆಯುವ ಕೆಲಸ ಮಾಡಿದ್ರಿ ಎಂದು ಹೇಳಿದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ – ಹುಬ್ಬಳ್ಳಿಯಲ್ಲಿ ಅಬ್ಬರದ ಪ್ರಚಾರ
ಹಿಂದೆ ಇದೇ ರೀತಿ ಮಾತಾಡಿ ಕಾಶ್ಮೀರ ದೂರ ಮಾಡಿದ್ರಿ. ಕಾಶ್ಮೀರ ಭಾರತದಿಂದ ದೂರ ಉಳಿಯಿತು. ಕಾಶ್ಮೀರದಲ್ಲಿ ಬೇರೆಯ ಧ್ವಜ ಇತ್ತು. ಮೊನ್ನೆ 370 ತಂದ ಬಳಿಕ ಕಾಶ್ಮೀರ ಭಾರತದ ಭಾಗ ಆಯ್ತು. ಸೋನಿಯಾ ಅವರ ನಿರ್ಧಾರ ಏನು ಅಂತ ತಕ್ಷಣ ಹೇಳಬೇಕು. ಇದನ್ನ ದೇಶ ನೋಡ್ತಿದೆ. ಭಾರತದ ವಿರುದ್ಧ ಮಾತನಾಡುವ ಕೆಲಸ ಸೋನಿಯಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎಲೆಕ್ಷನ್ ಕಮಿಷನ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಡಿ. ನಾವು ಯಾವುದೇ ಕಾರಣಕ್ಕೂ ಇದನ್ನ ಸಹಿಸಲ್ಲ. ಕುವೆಂಪು ಅವರು ಹೇಳುವಂತೆ ಜಯ ಭಾರತ ಜನನಿಯ ತನುಜಾತೆ ಅಂತ ಹೇಳಿದ್ದಾರೆ. ಅದರಂತೆ ನಾವು ನಡೆದುಕೊಳ್ತಿದ್ದೇವೆ. ಅಂತಹ ಒಗ್ಗಟ್ಟಿಗೆ ದಕ್ಕೆ ತರುವ ಕೆಲಸ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.