ಪಕ್ಷ ಬಿಟ್ಟ ಕಾರ್ಯಕರ್ತನಿಗೆ ನಯವಾದ ಬೆದರಿಕೆ ಹಾಕಿ ಮನವೊಲಿಸಿದ ಶಿವನಗೌಡ ನಾಯ್ಕ್

Public TV
1 Min Read
SHIVANAGOUDA NAIK copy

ರಾಯಚೂರು: ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಪಕ್ಷಾಂತರ ಪರ್ವ ನಡೆದಿದೆ. ಪ್ರತಿನಿತ್ಯ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ನಿರಂತರ ನಡೆಯುತ್ತಿದೆ. ಬಿಜೆಪಿ ಬಿಡಲು ಮುಂದಾಗಿರುವ ಕಾರ್ಯಕರ್ತರ ಮನವೊಲಿಸಲು ಶಾಸಕ ಕೆ.ಶಿವನಗೌಡ ನಾಯ್ಕ್ (K.Shivanagouda Naik) ನಯವಾಗಿ ಬೆದರಿಕೆ (Threat) ಹಾಕಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

ಬಿಜೆಪಿ (BJP) ಕಾರ್ಯಕರ್ತ ಶಿವು (Shivu) ಮತ್ತು ಶಾಸಕ ಕೆ.ಶಿವನಗೌಡ ನಾಯ್ಕ್ ನಡುವಿನ 8 ನಿಮಿಷ 56 ಸೆಕೆಂಡ್‌ಗಳ ಸಂಭಾಷಣೆಯ ಆಡಿಯೋ ಜಿಲ್ಲೆಯ ತುಂಬಾ ಹರಿದಾಡುತ್ತಿದೆ. ಇದನ್ನೂ ಓದಿ: ಬಿಜೆಪಿ ನನ್ನ ಬಾಡಿಗೆ ಮನೆ, ಸ್ವಂತ ಮನೆಯಾದ ಕಾಂಗ್ರೆಸ್‌ಗೆ ಮರಳುವೆ- ಗೋಪಾಲಕೃಷ್ಣ 

K SHIVANAGOUDA NAIK copy

ಬಿಜೆಪಿಗೆ ಬರೀ ರಾಜೀನಾಮೆ ಅಷ್ಟೇ ನೀಡಿದ್ದೀಯಾ. ಬೇರೆ ಪಾರ್ಟಿಗೆ ಇನ್ನೂ ಸೇರಿಲ್ಲ. ನಮ್ಮಲ್ಲಿಯೇ ಉಳಿದುಕೊಳ್ಳಿ. ಒಂದು ತಪ್ಪು ಮಾಡಿದ್ದೀರಿ, ಎರಡನೇ ತಪ್ಪು ಮಾಡಬೇಡಿ. ನಿಮಗೆ ಒಳ್ಳೆಯದಾಗುವುದಿಲ್ಲ. ಹಿಂದೆಯೂ ಒಳ್ಳೆಯದಾಗಿಲ್ಲ ಅಂದರೆ ಮುಂದೆಯೂ ನಿಮಗೆ ಒಳ್ಳೆಯದಾಗುವುದಿಲ್ಲ. ಆ ಕೆಲಸ ಮಾಡಬೇಡಿ. ಇಲ್ಲೇ ಇದ್ದು ಏನಾದರೂ ಸರಿ ಮಾಡಿಕೊಂಡು ಹೋಗೋಣ ಎಂದು ಮನವೊಲಿಸಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಸೋಲಿಸಲು ಜಿದ್ದಿಗೆ ಬಿದ್ದಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆಯ ಟೆನ್ಶನ್

ನಾನು ನಿಮಗಾಗಿ ಕಾಯುವುದಾ ಬೇಡವಾ? ನಮ್ಮನ್ನು ಬಿಟ್ಟು ಮುಂದಕ್ಕೆ ಹೋಗ್ತೀರಾ? ನಮ್ಮನ್ನು ಬಿಟ್ಟು ಹೋದ ಬಹಳ ಮಂದಿ ಏನೇನಾಗಿದ್ದಾರೆ ನೋಡಿಕೊಳ್ಳಿ ಎಂದು ನಯವಾಗಿ ಬೆದರಿಕೆ ಹಾಕಿದ್ದಾರೆ. ಎಲ್ಲಾ ಪಕ್ಷಗಳಲ್ಲಿ  ಹೀಗೆ ಇರುತ್ತವೆ. ಆ ತಪ್ಪು ನೀವೂ ಮಾಡಬೇಡಿ ಎಂದು ಶಾಸಕ ಕೆ.ಶಿವನಗೌಡ ನಾಯ್ಕ್ ಕಾರ್ಯಕರ್ತನ ಜೊತೆ ಮಾತನಾಡಿದ್ದಾರೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತ ತಲುಪಿದ ಹಾಸನ ಟಿಕೆಟ್ ದಂಗಲ್ – ಇಂದು ಹೆಚ್‌ಡಿಕೆ, ರೇವಣ್ಣ ಸಂಧಾನ

Share This Article