ಶಿವಮೊಗ್ಗ: ಶಿಕಾರಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ವೈ ವಿಜಯೇಂದ್ರ (vijayendra) ಅವರ ನಾಮಪತ್ರ (Nomination) ಸಲ್ಲಿಕೆಗೆ ಸಾಥ್ ನೀಡಿರುವ ಅವರ ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರು ಬುಧವಾರ ತಮ್ಮ ಹಳೆಯ ಅಂಬಾಸಿಡರ್ (Ambassador Car) ಕಾರು ಹತ್ತಿ ತೆರಳಿದ್ದಾರೆ.
Advertisement
ಯಡಿಯೂರಪ್ಪ ಅವರ ಇಷ್ಟವಾದ ಲಕ್ಕಿ ಕಾರಿನಲ್ಲಿ ಹೊರಟಿದ್ದು, ಅವರಿಗೆ ಹೆಚ್ಚು ಇಷ್ಟವಾಯಿತು ಎಂದು ಅವರ ಮತ್ತೋರ್ವ ಪುತ್ರ, ಸಂಸದ ಬಿ.ವೈ ರಾಘವೇಂದ್ರ (B.Y Raghavendra) ಹೇಳಿದ್ದಾರೆ. ಈ ಬಗ್ಗೆ ಅವರು ಟ್ವಿಟ್ಟರ್‌ನಲ್ಲಿ ಬಿ.ಎಸ್ ಯಡಿಯೂರಪ್ಪ ನೆಚ್ಚಿನ ಅಂಬಾಸಿಡರ್ ಕಾರ್ ಸಿಕೆಆರ್ 45ರಲ್ಲಿ ಬಿಜೆಪಿ ಕಚೇರಿಗೆ ಪ್ರಯಾಣ ಬೆಳೆಸಿದರು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇದು ನನ್ನ ಕೊನೇ ಚುನಾವಣೆ, 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ – ನಾಮಪತ್ರ ಸಲ್ಲಿಸಿ ಸಿದ್ದು ಮನವಿ
Advertisement
Advertisement
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಹುಚ್ಚರಾಯಸ್ವಾಮಿಗೆ ಹಾಗೂ ರಾಯರ ಮಠದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದೇನೆ. ಯಡಿಯೂರಪ್ಪ ಅವರಿಗೆ ಅಂಬಾಸಿಡರ್ ಕಾರಿನ ಮೇಲೆ ಬಹಳ ಪ್ರೀತಿ ಇದೆ. ಈ ಹಿಂದೆ ಈ ಕಾರನ್ನು ಅವರು ಬಳಸುತ್ತಿದ್ದರು. ಅಂಬಾಸಿಡರ್ ಕಾರಿನ ಸಿಕೆಆರ್ 45 ಕ್ರಮ ಸಂಖ್ಯೆಯ ಮೇಲೆ ಅವರಿಗೆ ವಿಶೇಷ ಪ್ರೀತಿ ಇದೆ ಎಂದಿದ್ದಾರೆ.
Advertisement
ಬಿಜೆಪಿ ಅಭ್ಯರ್ಥಿಯಾದ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಜಿ. ಮಲ್ಲೇಶ್ ಅವರು ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ (Congress) ಟಿಕೆಟ್ ವಂಚಿತ ನಟರಾಜ್ ಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಬರೊಬ್ಬರಿ 5 ಕೋಟಿ ಮೌಲ್ಯದ ದಾಖಲೆ ಇಲ್ಲದ ಚಿನ್ನಾಭರಣ ವಶಕ್ಕೆ