ಉಡುಪಿ: ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ಇಡೀ ಕರ್ನಾಟಕದಲ್ಲಿ ಬಿಜೆಪಿ (BJP) ಪರವಾದ ಅಲೆ ನಿರ್ಮಾಣವಾಗಿದೆ. ಪ.ಜಾತಿ (SC), ಪ.ಪಂ (ST) ಮತ್ತು ಹಿಂದುಳಿದ ವರ್ಗದವರು (Backward Class) ಒಟ್ಟಾಗಿ ಬಿಜೆಪಿಯನ್ನು ಸ್ಪಷ್ಟವಾಗಿ ಗೆಲ್ಲಿಸುತ್ತಾರೆ. ಈ ಬಾರಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojari) ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಎಲ್ಲಾ ಯೋಜನೆ ಮತ್ತು ಯೋಚನೆಗಳನ್ನು ಮಾಡಿ ವಿಜಯ ಸಂಕಲ್ಪ ಯಾತ್ರೆ, ಬೂತ್ ಮಟ್ಟದ ಕಾರ್ಯಕ್ರಮ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಕ್ತಿ ಕೇಂದ್ರದ ಮಟ್ಟದಲ್ಲಿ ಕಾರ್ಯಕರ್ತರ ಜೋಡಣೆ ಕಾರ್ಯಕ್ರಮಗಳನ್ನು ಮುಗಿಸಿರುವುದರಿಂದ ನಿಶ್ಚಯವಾಗಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ರಾಜೀನಾಮೆ
Advertisement
Advertisement
ಸಾಮಾನ್ಯವಾಗಿ ಮತದಾನದ ಪೂರ್ವ ಸಮೀಕ್ಷೆಗಳೇ ಅಂತಿಮವಲ್ಲ. ಮುಂಬರುವ ದಿನಗಳಲ್ಲಿ ಸಮೀಕ್ಷೆಯನ್ನು ಮೀರಿ ಸ್ಪಷ್ಟ ಬಹುಮತ ಪಡೆಯುತ್ತೇವೆ. ಪ.ಜಾತಿ, ಪ.ಪಂಗಡದವರಿಗೆ ಮೀಸಲಾತಿಯನ್ನು ಹೆಚ್ಚು ಮಾಡಿದ್ದೇವೆ. ದೇವರಾಜ್ ಅರಸರ (D.Devaraj Urs) ನಂತರ ಯಾವುದಾದರೂ ಒಂದು ಸರಕಾರ ಮೀಸಲಾತಿಯ (Reservation) ಜೇನುಗೂಡಿಗೆ ಕೈ ಇಟ್ಟು ಎಲ್ಲಾ ಸಮಾಜದವರಿಗೂ ಸಿಹಿಯನ್ನು ಹಂಚಿದ್ದರೇ ಅದು ಬೊಮ್ಮಾಯಿಯವರ (Basavaraj Bommai) ನೇತೃತ್ವದ ಸರ್ಕಾರ ಎಂಬ ಭಾವನೆ ಜನರಿಗೆ ಬಂದಿದೆ ಎಂದರು. ಇದನ್ನೂ ಓದಿ: ತಮ್ಮಯ್ಯ ವಿರುದ್ಧ ತಣ್ಣಗಾಗದ ಆಕ್ರೋಶ – ಕಾಫಿನಾಡಲ್ಲಿ ನಿಂತಿಲ್ಲ ಬಂಡಾಯದ ಕೂಗು
Advertisement
17% ಮೀಸಲಾತಿಯಲ್ಲಿ ಅಲೆಮಾರಿ, ಸ್ಪರ್ಶ ಪ.ಜಾತಿಯವರಿಗೆ ಮೀಸಲಾತಿಯನ್ನು ಹಂಚಲಾಗಿದೆ. ಅದೇ ರೀತಿ ಪ.ಜಾತಿಯವರಿಗೆ ಶೇ.15ರಿಂದ ಶೇ.17ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೇ ಪ.ಪಂಗಡದವರಿಗೆ ಶೇ.3ರಿಂದ ಶೇ.7ಕ್ಕೆ ಏರಿಕೆ ಮಾಡಿರುವುದು ಮತ್ತು ಗುರುತಿಸದೇ ಇರುವ ಅನೇಕ ಸಣ್ಣ ಸಮುದಾಯವನ್ನು ಹೆಕ್ಕಿ ನ್ಯಾಯ ಕೊಟ್ಟಿರುವುದನ್ನು ಜನರು ಗಮನದಲ್ಲಿಟ್ಟುಕೊಂಡಿದ್ದಾರೆ. ಒಕ್ಕಲಿಗ, ಕುಂಬಾರ, ವೀರಶೈವ ಸೇರಿದಂತೆ ನಿಗಮಗಳಿಗೆ ಬೇಡಿಕೆ ಇಟ್ಟಿದ್ದ 19ರಿಂದ 20 ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ನಿಗಮವನ್ನು ಯಡಿಯೂರಪ್ಪ (B.S.Yediyurappa) ಮತ್ತು ಬೊಮ್ಮಾಯಿ ಸರ್ಕಾರ ನೀಡಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್?
Advertisement
ಧರ್ಮದ ಆಧಾರದಲ್ಲಿ ಮೀಸಲಾತಿ ಸ್ಪಷ್ಟತೆ ಇರಲಿಲ್ಲ. ಅನ್ಯಾಯವಾಗಬಾರದೆಂದು ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ಮೀಸಲಿಟ್ಟ ಶೇ.10 ಮೀಸಲಾತಿಯಲ್ಲಿ ಈ ನಾಲ್ಕನ್ನು ಸೇರಿಸಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಅವರಿಗೂ ಅನುಕೂಲವಾಗುತ್ತದೆ. ವಿರೋಧಿಸುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಅವರಿಗೆ ನ್ಯಾಯ ಹೆಚ್ಚು ದೊರಕುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ, ಜನರೇ ಸೋಲಿಸಬೇಕು: ಸತೀಶ್ ಜಾರಕಿಹೊಳಿ
ಅನಾಥ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರು ವರದಿ ಸಲ್ಲಿಸಿದ್ದಾರೆ. ಅದು ಸಚಿವ ಸಂಪುಟ ತೀರ್ಮಾನದಲ್ಲಿ ಅಂಗೀಕಾರಕ್ಕೆ ಬಂದಿದೆ. ಅದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದರು. ಇದನ್ನೂ ಓದಿ: ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ: ಸತೀಶ್ ಜಾರಕಿಹೊಳಿ