ಬೆಳಗಾವಿ: ನಮ್ಮ ಲೆಕ್ಕದಲ್ಲಿ ಬಹುಮತದ ಕೊರತೆ ಆಗಲ್ಲ. ಆದರೂ ಜೆಡಿಎಸ್ (JDS) ಬೆಂಬಲ ಕೊಟ್ರೆ ಒಳ್ಳೆಯದಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ತಿಳಿಸಿದರು.
ಮೈತ್ರಿಗೆ ನಾವು ಸಿದ್ಧ ಎಂಬ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಸರ್ಕಾರದ ಆಡಳಿತ ಮಾಡಲು ಒಳ್ಳೆಯದಾಗುತ್ತದೆ. ದೇವೇಗೌಡರದ್ದು (HD Devegowda) ಕುಮಾರಸ್ವಾಮಿಯವರದ್ದು ಸಲಹೆ ಇದ್ದರೆ ಒಳ್ಳೆಯದು. ಬಿಜೆಪಿಯವರು ಆಪರೇಷನ್ ಕಮಲ ಮಾಡುವುದು ಅವರ ಹಗಲುಗನಸಾಗಿದೆ. ಅತಂತ್ರ ಫಲಿತಾಂಶ ನೂರಕ್ಕೆ ನೂರರಷ್ಟು ಬರಲ್ಲ ಎಂದು ಹೇಳಿದರು.
Advertisement
Advertisement
ಬಿಜೆಪಿ (BJP) ವಿರೋಧಿ ಅಲೆ, ಬೆಲೆ ಏರಿಕೆ, 4 ವರ್ಷದಿಂದ ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ. ವಿಶೇಷವಾಗಿ 40 ಪರ್ಸೆಂಟ್ ಸರ್ಕಾದ ಇಡೀ ವಿಶ್ವದಲ್ಲೇ ಫೇಮಸ್ ಆಯ್ತು. ರಾಷ್ಟ್ರೀಯ ವಾಹಿನಿಗಳಲ್ಲೂ ಸಹ 40 ಪರ್ಸೆಂಟ್ ಸರ್ಕಾರ ಅಂತಾ ಹೇಳುತ್ತಾರೆ. ನಮ್ಮ ನಾಯಕರು ಕಲೆಕ್ಟೀವ್ ಆಗಿ ಪ್ರಚಾರ ಮಾಡಿದರು. ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ (Siddaramaiah) ಎಲ್ಲರೂ ತಮ್ಮ ತಮ್ಮ ಭಾಗದಲ್ಲಿ ಒಳ್ಳೆಯ ಪ್ರಚಾರ ಮಾಡಿದರು ಎಂದರು.
Advertisement
Advertisement
ಕಡಿಮೆ ಕ್ಷೇತ್ರ ಬಂದರೂ ಸರ್ಕಾರ ಮಾಡ್ತೀವಿ ಎಂಬ ಆರ್.ಅಶೋಕ್ (R Ashok) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆಪರೇಷನ್ ಕಮಲ ಮಾಡಲು ಆಗಲ್ಲ, ಬಹಳ ಗ್ಯಾಪ್ ಇದೆ. ಸರ್ಕಾರ ಮಾಡಲು 30 ರಿಂದ 40 ಸೀಟ್ ಅವರಿಗೆ ಬೇಕಾಗುತ್ತದೆ. ಆದರೆ ಅದು ಅಸಾಧ್ಯ. ವಿಪಕ್ಷದಲ್ಲಿ ಕುಳಿತು ಒಳ್ಳೆಯ ಸಲಹೆ ನೀಡುವುದು ಸೂಕ್ತ. ಬಿಜೆಪಿ 75 ರಿಂದ 80 ಕ್ಷೇತ್ರ ಮಾತ್ರ ಬರುತ್ತೆ. ಅತಂತ್ರ ಫಲಿತಾಂಶ ನೂರಕ್ಕೆ ನೂರು ಬರಲ್ಲ. ಕಾಂಗ್ರೆಸ್ ಸರ್ಕಾರ ರಚನೆ ಆಗಿಯೇ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ.. ಆದ್ರೆ ಈ ಷರತ್ತು ಅನ್ವಯ – ಹೆಚ್‌ಡಿಕೆ
ಪ್ರಧಾನಿ ಮೋದಿ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ್ದು ಬೇರೆ, ಲೋಕಸಭಾ ಚುನಾವಣೆ ಬೇರೆ. ಜನ ಅಭಿವೃದ್ಧಿ ನೋಡ್ತಾರೆ. ಬೆಲೆ ಏರಿಕೆ ಆಗಲು ಮೋದಿ ಕಾರಣ. ಹೀಗಾಗಿ ಮೋದಿಯವರ ಭಾಷಣ ಕರ್ನಾಟಕ ಜನ ತಿರಸ್ಕಾರ ಮಾಡಿದ್ದಾರೆ ಎಂದು ಟೀಕಿಸಿದರು.
ಬೆಳಗಾವಿ (Belagavi) ನಗರ ವ್ಯಾಪ್ತಿಯಲ್ಲಿ ಕಡಿಮೆ ಮತದಾನ ವಿಚಾರವಾಗಿ ಮಾತನಾಡಿ, ಮುಂಚೆಯಿಂದಲೂ ಸಹ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ ಆಗುತ್ತದೆ. ಬೆಂಗಳೂರು ನಗರದಲ್ಲಿಯೂ ಸಹ ಕಡಿಮೆ ಮತದಾನ ಆಗಿದೆ ಎಂದ ಅವರು, ನಾವು ಮುಂಚೆಯೇ ಹೇಳಿದ್ವಿ 120 ಗೆಲ್ಲುತ್ತೇವೆ ಎಂದಿದ್ದೆವು. ಅದೇ ವರದಿ ಎಕ್ಸಿಟ್ ಪೋಲ್‍ಗಳು ಕೊಟ್ಟಿವೆ. ಬೆಳಗಾವಿ ಜಿಲ್ಲೆಯಲ್ಲಿ 10 ಕ್ಷೇತ್ರ ಗೆಲ್ಲುತ್ತೇವೆ ಎಂದಿದ್ವಿ, 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು – ಭಾರತದ ಭೇಟಿ ಮರೆಯಲಾಗದ ನೆನಪು ಎಂದ ಇಸ್ರೇಲ್ ಅಧಿಕಾರಿ