ಬೆಳಗಾವಿ: ಚುನಾವಣೆ (Election) ಪ್ರಚಾರಕ್ಕೆಂದೇ ಹೊಸ ವಾಹನ ತಂದಿದ್ದು, ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.
ನಗರದಲ್ಲಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾಮಪತ್ರ ಸಲ್ಲಿಕೆ ದಿನ ರಾಹು ಕಾಲ ಇದ್ರೇ ಮಾಡಿಯೇ ಮಾಡುತ್ತೇವೆ. ಏಪ್ರಿಲ್ 11 ರಿಂದ 20ರವರೆಗೆ ನಾಮಪತ್ರ ಸಲ್ಲಿಕೆ ದಿನವಾಗಿದೆ. ದಿನವೂ ರಾಹುಕಾಲ ಇರುತ್ತೆ, ಆ ಸಮಯದಲ್ಲಿ ನಾಮಪತ್ರ ಸಲ್ಲಿಸುತ್ತೇವೆ. ಚುನಾವಣೆ ಪ್ರಚಾರಕ್ಕೆ ಎಂದೇ ಹೊಸ ವಾಹನ ತಂದಿದ್ದೇವೆ. ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡುತ್ತೇವೆ. ಎರಡ್ಮೂರು ದಿನಗಳಲ್ಲಿ ಸ್ಮಶಾನದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪಕ್ಷ ಬಿಟ್ಟ ಕಾರ್ಯಕರ್ತನಿಗೆ ನಯವಾದ ಬೆದರಿಕೆ ಹಾಕಿ ಮನವೊಲಿಸಿದ ಶಿವನಗೌಡ ನಾಯ್ಕ್
Advertisement
Advertisement
ನಾವು ಮಾಡುವುದು ಸಂಪ್ರದಾಯ ವಿರೋಧಿ ಆಗಲ್ಲ, ನಮ್ಮ ವಿಚಾರ ಅದು. ಈ ಕೆಲಸ ಇವತ್ತು ಮಾಡುತ್ತಿಲ್ಲ. ಕಳೆದ ಮೂವತ್ತು ವರ್ಷಗಳಿಂದಲೂ ಮಾಡುತ್ತಿದ್ದೇವೆ. ನಾವು ಹೋಗುತ್ತಿರುವ ದಾರಿಯನ್ನು ಬುದ್ದ, ಬಸವಣ್ಣ, ಅಂಬೇಡ್ಕರ್ ತೋರಿಸಿದ್ದಾರೆ. ನಮ್ಮ ಆಯ್ಕೆ ನಮಗೆ ಬಿಡಿ, ಹೀಗೆ ಮಾಡಿ ಅಂದ್ರೇ ಆಗುವುದಿಲ್ಲ. ಈ ಸಲ ಯಮಕನಮರಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಇಲ್ಲವಾದ್ರೇ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಾರೆ. ಅತಿಹೆಚ್ಚು ಅಂತರದಿಂದ ಗೆಲ್ಲಿಸಬೇಕೆಂಬುದು ನಮ್ಮ ಸ್ಲೋಗನ್ ಎಂದರು. ಇದನ್ನೂ ಓದಿ: ಇಸ್ರೋ ಸಾಧನೆ – ಮರುಬಳಕೆ ಮಾಡಬಹುದಾದ ರಾಕೆಟ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ