OTP ಕೊಟ್ರೆ ರೇಷ್ಮೆ ಸೀರೆ ಗಿಫ್ಟ್ – ಮಹಿಳಾ ಮತದಾರರ ಓಲೈಕೆಗೆ ಹೊಸ ತಂತ್ರ

Public TV
2 Min Read
Malleshwaram Saree 3

ಬೆಂಗಳೂರು: ನಗರದಲ್ಲಿ ಚುನಾವಣಾ (Election) ಅಖಾಡವಂತೂ ಕುಕ್ಕರ್, ತಟ್ಟೆ, ಲೋಟ ಗಿಫ್ಟ್‌ಗಳಿಂದ ಸಖತ್ ಸದ್ದು ಮಾಡ್ತಿದೆ. ಹೊಸ ವಿಷಯ ಏನಪ್ಪ ಅಂದ್ರೆ, ಈ ಗಿಫ್ಟ್‌ಗಳನ್ನ ಸರಿಯಾಗಿ ತಲುಪಿಸೋಕೆ ಸಖತ್ ಟೆಕ್ನಾಲಜಿ ಉಪಯೋಗಿಸ್ತಾ ಇದ್ದಾರೆ. ಮತದಾರರು ಓಟಿಪಿ (OTP) ಕೊಟ್ರೆ ಸ್ಪಾಟ್ ಗಿಫ್ಟ್ ಸಿಕ್ತಿದೆ. ಬೆಂಗಳೂರಿನ ಪ್ರಭಾವಿ ಸಚಿವರ ಕ್ಷೇತ್ರದಲ್ಲಿ ಈ ಕೆಲಸ ನಡೆಯುತ್ತಿದೆ.

Malleshwaram Saree

ಚುನಾವಣಾ ಅಖಾಡದಲ್ಲಿ ಜನಪ್ರತಿನಿಧಿಗಳು ಮತದಾರರಿಗೆ ಉಡುಗೊರೆಯ ಸುರಿಮಳೆ ಸುರಿಸುತ್ತಿದ್ದಾರೆ. ಈ ಗಿಫ್ಟ್ಗಳನ್ನ ತಲುಪಿಸೋಕೆ ಈಗ ಟಕ್ನಾಲಜಿ ಮೊರೆಹೋಗಿದ್ದಾರೆ. ಈ ಹಿಂದೆ ಟೋಕನ್ ಕೂಪನ್‌ಗಳನ್ನ ಕೊಟ್ಟು ಗುಟ್ಟಾಗಿ ಗಿಫ್ಟ್ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಇದೀಗ ಲೇಟೆಸ್ಟ್ ತಂತ್ರಜ್ಞಾನ ಬಳಸಿಕೊಂಡಿದ್ದು, ಒಟಿಪಿ ಕೊಟ್ರೆ ಸ್ಪಾಟ್ ಗಿಫ್ಟ್ ಕೊಡಲಾಗುತ್ತಿದೆ.

Malleshwaram Saree 2

ಹೌದು. ಮಲ್ಲೇಶ್ವರಂನಲ್ಲಿ ಸಚಿವ ಅಶ್ವಥ್ ನಾರಾಯಣ (Ashwath Narayan) ಕ್ಷೇತ್ರದಲ್ಲಿ ಮತದಾರರಿಗೆ ಭರ್ಜರಿ ಕಲರ್ ಫುಲ್ ರೇಷ್ಮೆ ಸೀರೆಗಳನ್ನ ಕೊಡಲಾಗುತ್ತಿದೆ. ಕ್ಷೇತ್ರದ ಮತದಾರರಿಗೆ ಒಟಿಪಿ ಬರುತ್ತೆ. ಆಮೇಲೆ ಮನೆ-ಮನೆ ಬಾಗಿಲಿಗೇ ಸೀರೆ ಪ್ಯಾಕೇಟ್ ಹಿಡ್ಕೊಂಡು ರ‍್ತಾರೆ. ಒಟಿಪಿ ತೋರಿಸಿದ ಮಹಿಳಾ ಮತದಾರರಿಗೆ ಸೀರೆಯನ್ನು (Saree) ನೀಡಲಾಗುತ್ತಿದೆ ಅಂತಾ ಎಎಪಿ ಪಕ್ಷ ಆರೋಪಿಸಿದ್ದು ಸಾಕ್ಷಿ ಸಮೇತ ಇದನ್ನು ಬಟಾಬಯಲು ಮಾಡಿದೆ. ಇದನ್ನೂ ಓದಿ: ಜಪಾನ್-ದಕ್ಷಿಣ ಕೊರಿಯಾ ಜಲಮಾರ್ಗದಲ್ಲಿ ಮುಳುಗಿದ ಹಡಗು; 8 ಮಂದಿ ಸಾವು

Malleshwaram Saree 4

ರೇಷ್ಮೆ ಸೀರೆ ಒಟಿಪಿ ಪುರಾಣ ಇಷ್ಟಕ್ಕೆ ಮುಗಿಯಲಿಲ್ಲ. ಒಂದು ಮನೆಯಲ್ಲಿ ಎರಡು ಮೂರು ಜನ ಇದ್ರೆ ಸೇಮ್ ಕಲರ್ ಸೀರೆ ಬಂದಿದ್ರೆ ಎಕ್ಸ್‌ಚೇಂಜ್‌ ಆಫರ್ ಸಹ ಮಾಡಿಕೊಳ್ಳಬಹುದಾಗಿದೆ. ಅಭಿವೃದ್ಧಿ ಮೂಲಕ ಮತಯಾಚನೆ ಮಾಡಬೇಕಾದವರು ಈ ರೀತಿ ಆಮಿಷವೊಡ್ಡಿ ಕೆಲಸ ಮಾಡೋದು ಸರಿಯಲ್ಲ ಅಂತಾ ಎಎಪಿ (AAP) ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ – ಬಿಬಿಸಿಯನ್ನು ಸಮರ್ಥಿಸಿಕೊಂಡ ಅಮೆರಿಕ

Malleshwaram Saree 5

`ಸಚಿವರಾಗಿದ್ದುಕೊಂಡು ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಅನ್ನೋ ಆತ್ಮವಿಶ್ವಾಸದಿಂದ ಮತಯಾಚನೆ ಮಾಡಬೇಕಾಗಿತ್ತು. ಆದರೆ ಈ ರೀತಿ ಮತದಾರರಿಗೆ ಉಡುಗೊರೆ ಕೊಟ್ಟು ಮತಭೇಟೆಗಿಳಿರೋದು ಪ್ರಜಾಪ್ರಭುತ್ವದ ದುರಂತ. ಪಕ್ಷಗಳ ವ್ಯತ್ಯಾಸವಿಲ್ಲದೇ ಎಲ್ಲಾ ನಾಯಕರು ಇದೇ ವರ್ತನೆ ತೋರುತ್ತಿದ್ದಾರೆ ಎಂದು ಆಪ್ ಮುಖಂಡರಾದ ಸುಮನ ಕಿಡಿ ಕಾರಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *