ದಾವಣಗೆರೆ: ರಾಜ್ಯ ಬಿಜೆಪಿ (BJP) ನಾಯಕರು ಮಠದ ಅನುದಾನದಲ್ಲಿ, ಗುತ್ತಿಗೆದಾರರ ಬಳಿ ಸೇರಿದಂತೆ ಎಲ್ಲದರಲ್ಲೂ 40% ಕಮಿಷನ್ ಹೊಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಸಿಎಂ ಸ್ಥಾನವನ್ನು ಮಾರಾಟ ಮಾಡ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ವಾಗ್ದಾಳಿ ನಡೆಸಿದರು.
ದಾವಣಗೆರೆಯ (Davanagere) ಎಂಬಿಎ ಕಾಲೇಜಿನ ಆವರಣದಲ್ಲಿ ನಡೆದ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಅವರು, 40% ಸರ್ಕಾರ ಎಂದರೆ ಅದು ರಾಜ್ಯ ಬಿಜೆಪಿ ಸರ್ಕಾರ. ಚಿಕ್ಕ ಮಗುವಿಗೂ ಸಿಎಂ ಬೊಮ್ಮಾಯಿಯವರು (Basavaraj Bommai) ಯಾರೆಂದು ಕೇಳಿದ್ರೇ 40% ಸಿಎಂ, ಪೇ ಸಿಎಂ ಎಂದು ಹೇಳ್ತಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಕಮಿಷನ್ ಬಗ್ಗೆ ಪತ್ರ ಬರೆದ 6 ತಿಂಗಳ ಕಳೆದ್ರು, ಮೋದಿಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಕಿಡಿಕಾರಿದರು.
Advertisement
Advertisement
ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮೋದಿ ಮಾಡಲಿಲ್ಲ. ಸಂತೋಷ್ ಪಾಟೀಲ್ ಅವರದ್ದೇ ಪಕ್ಷದವರಾಗಿದ್ದರೂ, ಅವರು ಆತ್ಮಹತ್ಯೆ ಮಾಡಿಕೊಂಡಾಗ ಯಾರೊಬ್ಬ ಬಿಜೆಪಿ ಮುಖಂಡನು ಅವರ ಮನೆಗೆ ಹೋಗಲಿಲ್ಲ. ಆದರೆ ಸಿದ್ದರಾಮಯ್ಯ, ಡಿಕೆಶಿ ನಾನು ಹೋಗಿ ಸಾಂತ್ವನ ಹೇಳಿದ್ದೇವೆ ಎಂದರು.
Advertisement
ಸಿಎಂ ಬಸವರಾಜ ಬೊಮ್ಮಾಯಿ, ಕಟೀಲ್, ನಡ್ಡಾ ಅವರಿಗೆ ಹಣದ ವ್ಯಾಮೋಹ ಹೆಚ್ಚಿದೆ. ಎಷ್ಟು ಹಣ ಬೇಕು ಹೇಳಿ ಆ ಹಣವನ್ನು ನಾವು ನಿಮಗೆ ಕೊಟ್ಟು ನಿಮ್ಮ ವ್ಯಾಮೋಹವನ್ನು ಪೂರ್ಣಗೊಳಿಸುವೆವು, ಬದಲಾಗಿ ನೀವು ಸಂತೋಷ್ ಪಾಟೀಲ್, ಪ್ರಸಾದ್ ಅವರನ್ನು ಅವರ ಕುಟುಂಬಸ್ಥರಿಗೆ ಕೊಡ್ತಿರಾ ಎಂದು ಪ್ರಶ್ನಿಸಿದರು.
Advertisement
ಸಾಕಷ್ಟು ಬಾರಿ ಪಿಎಂ ಮೋದಿಯವರು ಕರ್ನಾಟಕಕ್ಕೆ ಬಂದ್ರು ಭ್ರಷ್ಟಾಚಾರದ ಬಗ್ಗೆ ತುಟಿಬಿಚ್ಚಿಲ್ಲ, ದಿಂಗಲೇಶ್ವರ ಶ್ರೀಯವರು ಕೂಡ ಕಮಿಷನ್ ಬಗ್ಗೆ ಆರೋಪ ಮಾಡಿದರು. ಶಾಸಕ ಮಾಡಾಳ್ ಮಗನ ಕಚೇರಿಯಲ್ಲಿ 40 ಲಕ್ಷ ಹಣ ಪಡೆಯುವುದು ಜಗತ್ ಜಾಹಿರ್ ಆಗಿದೆ. ಮೈಸೂರು ಸ್ಯಾಂಡಲ್‌ನಲ್ಲಿ ಅಲ್ಪಸ್ವಲ್ಪ ಸುವಾಸನೆ ಇತ್ತು. ಅದನ್ನು ಈ ಬಿಜೆಪಿಯರು ಕಮಿಷನ್ ಪಡೆದು ಹೊಗಲಾಡಿಸಿದರು ಎಂದು ಗುಡುಗಿದರು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟ ಕೇಸ್ – ಎರಡೂವರೆ ತಿಂಗಳ ಬಳಿಕ ಶಾರೀಕ್ ಡಿಸ್ಚಾರ್ಜ್
ಇದೇ ಜಿಲ್ಲೆಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಎಂಟಿಬಿ ನಾಗರಾಜ್ ಹೇಳ್ತಾರೆ ವರ್ಗಾವಣೆಗೆ ಲಕ್ಷಾಂತರ ಹಣ ಕೊಡ್ಬೇಕು ಎಂದು ಹೇಳಿದ್ದಾರೆ. ಪಿಎಸ್ಐ ಸ್ಕ್ಯಾಮ್‌ನಲ್ಲಿ ಎಡಿಜಿಪಿ ಜೈಲಿಗೆ ಕಳಿಸಲಾಗಿದೆ. ಇದು ನಡೆದಿದ್ದು, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸಿಎಂ ಆಗಿದ್ದಾಗ, ಅವರು ಕೂಡ ಇದರಲ್ಲಿ ಭಾಗಿಯಗಿಲ್ವಾ? ಇಂಜಿನಿಯರ್, ಪ್ರೊಫೆಸರ್ ಪೋಸ್ಟ್‌ಗಳು ಇವರು ಮಾರಾಟ ಮಾಡ್ತಿದ್ದು, ಮುಂದಿನ ದಿನಗಳಲ್ಲಿ ಇವರು ಪೌರ ಕಾರ್ಮಿಕ ಪೋಸ್ಟ್ ಕೂಡ ಮಾರಾಟ ಮಾಡ್ತಾರೆ. ನೀವು ರಾಜ್ಯ ಉಳಿಸಿ ಇಲ್ಲವದಾಲ್ಲಿ ಬಿಜೆಪಿಯವರು ಕರ್ನಾಟಕ ವನ್ನು ಮಾರಾಟ ಮಾಡ್ತಾರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಈ ಬಾರಿ ಕಿಚಡಿ ಸರ್ಕಾರ ಬರಲ್ಲ, ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ: ಸುಧಾಕರ್