ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election) ಹತ್ತಿರ ಬರುತ್ತಿದ್ದಂತೆ ನಟಿ ರಮ್ಯಾ (Ramya) ರಾಜ್ಯ ರಾಜಕೀಯ ಎಂಟ್ರಿಯಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಹೌದು, ಈ ಬಗ್ಗೆ ಎಐಸಿಸಿ (AICC) ಸಭೆಯಲ್ಲಿ ಚರ್ಚೆ ನಡೆದಿದ್ದು ಮೂರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಿಂದ ಕಣಕ್ಕೆ ಇಳಿಸುವ ಬಗ್ಗೆ ಕಾಂಗ್ರೆಸ್ (Congress) ಪ್ಲ್ಯಾನ್ ಮಾಡಿದ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಮೋದಿ ಫೋಟೋ ಸ್ಟೇಟಸ್ ಹಾಕಿದ್ದ ಯವಕನಿಗೆ ಹಲ್ಲೆ – ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್
Advertisement
Advertisement
ಕಂದಾಯ ಸಚಿವ ಆರ್. ಅಶೋಕ್ (R Ashok) ವಿರುದ್ಧ ಪದ್ಮನಾಭನಗರ (Padmanabhanagar) ಕ್ಷೇತ್ರದಿಂದ ಕಣಕ್ಕೆ ಇಳಿಸುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಪದ್ಮನಾಭನಗರ ಮೊದಲ ಆದ್ಯತೆಯಾಗಿದ್ದರೆ ಮಂಡ್ಯ (Mandya) ಎರಡನೇ ಆದ್ಯತೆಯಾಗಿದೆ. ಚನ್ನಪಟ್ಟಣ ಮೂರನೇ ಆದ್ಯತೆಯಾಗಿದೆ. ಒಂದು ವೇಳೆ ಚನ್ನಪಟ್ಟಣದಲ್ಲಿ ಕಣಕ್ಕೆ ಇಳಿದರೆ ಕುಮಾರಸ್ವಾಮಿ (Kumaraswamy) ನೇರ ಎದುರಾಳಿಯಾಗಲಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಮಿಷನ್ ಬೆಂಗಳೂರು ಟಾಸ್ಕ್‌ಗೆ ಜೀವ – ಮೋದಿ ಮೆಟ್ರೋ ಅಜೆಂಡಾ ಏನು?
Advertisement
ಚುನಾವಣಾ ಸಮಿತಿ ಸಭೆಯಲ್ಲಿ ರಮ್ಯಾ ರಾಜ್ಯ ರಾಜಕಾರಣಕ್ಕೆ ವಾಪಸ್ ಬರಲು ಸಕಾಲ ಎಂದು ಕೆಲ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಮ್ಯಾ ಜೊತೆಯೂ ಒಂದು ಸುತ್ತಿನ ಮಾತುಕತೆ ನಡೆದಿದೆ. ಸೋಮವಾರ ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರು ಪದ್ಮನಾಭನಗರ ಕ್ಷೇತ್ರದ ವಿಚಾರವಾಗಿ ಸಭೆ ಕರೆದಿದ್ದಾರೆ. ನಟಿ ರಮ್ಯಾ ಆ ಸಭೆಯಲ್ಲಿ ಭಾಗವಹಿಸುತ್ತಾರಾ? ಇಲ್ಲವೋ ಎನ್ನವುದು ತಿಳಿದು ಬಂದಿಲ್ಲ.