ಮಂಡ್ಯ: ನಾನು ಮಂಡ್ಯದವಳೇ ಆಗಿದ್ದು, ನಾನೊಬ್ಬಳು ಗೌಡ್ತಿಯಾಗಿರುತ್ತೇನೆ. ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ ಎಂದು ಮಾಜಿ ಸಂಸದೆ ರಮ್ಯಾ (Ramya) ಹೇಳಿದ್ದಾರೆ.
ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಮಂಡ್ಯಕ್ಕೆ ಬರ್ತಾ ಹೋಗ್ತಾ ಇದ್ದೀನಿ. ಸೋಮವಾರವೂ ನಿಮಿಷಾಂಭ ದೇವಸ್ಥಾನಕ್ಕೆ ಬಂದಿದ್ದೆ. ಮಂಡ್ಯದಲ್ಲಿ ನನಗೆ ನೆಂಟರು ಇದ್ದಾರೆ. ಸಾಕಷ್ಟು ಬಾರಿ ನಾನು ಮಂಡ್ಯಗೆ ಬಂದಿದ್ದೇನೆ. ಆದರೆ ಕ್ಯಾಮಾರಾ ಕಣ್ಣಿಗೆ ಎಲ್ಲೂ ಕಾಣಿಸಿಕೊಂಡಿಲ್ಲ ಎಂದರು.
ಮಂಡ್ಯ ಜನರಿಗೆ ನಾನು ಚಿರ ಋಣಿಯಾಗಿದ್ದೇನೆ. ಮಂಡ್ಯ ಜನರ ಸಂಬಂಧ ನನ್ನ ಜೊತೆ ಸದಾ ಇರುತ್ತದೆ. ರಾಜಕೀಯ ಅಂತಾ ಇಲ್ಲ, ಎಲ್ಲಾ ವಿಚಾರದಲ್ಲಿ ಮಂಡ್ಯದಲ್ಲಿ ಇರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹೆಣ್ಮಕ್ಕಳ ಬಟ್ಟೆಯ ಬಗ್ಗೆ ಸಲ್ಮಾನ್ ಮಾತು ವ್ಯಂಗ್ಯವಾಗಿ ಕಾಣುತ್ತಿದೆ- ಚೇತನ್ ಸಿಡಿಮಿಡಿ