ರಾಮನಗರ: ನಮ್ಮ ಜೊತೆ ಮೋದಿ (Narendra Modi) ಇದ್ದಾರೆ, ಅದೇ ರೀತಿ ಕಾಂಗ್ರೆಸ್ ಜೊತೆ ಭ್ರಷ್ಟರಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದರು.
ಚನ್ನಪಟ್ಟಣದಲ್ಲಿ ನಡೆದ ಬಿಜೆಪಿ (BJP) ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು (Congress) ಪದೇ ಪದೇ ಮೋದಿಯವರನ್ನೇ ಯಾಕೆ ಕರೆಸ್ತೀರಿ ಅಂತಾ ಕೇಳ್ತಾರೆ. ಅದಕ್ಕೆ ನಾವು ಅವರಿಗೆ ಉತ್ತರ, ನಮ್ಮ ಜೊತೆ ಮೋದಿ ಇದ್ದಾರೆ ಎಂದಿದ್ದೇವೆ. ಆದರೆ ನಿಮ್ಮ ಜೊತೆ ಯಾರಿದ್ದಾರೆ? ನಿಮ್ಮ ಜೊತೆ ಭ್ರಷ್ಟಾಚಾರಿಗಳು ಮಾತ್ರ ಇದ್ದಾರೆ. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಜೆಡಿಎಸ್‌ಗೆ ಕೊಡುವ ಒಂದೊಂದು ವೋಟ್ ಕೂಡಾ ಕಾಂಗ್ರೆಸ್ ಖಾತೆಗೆ ಸೇರುತ್ತೆ: ಮೋದಿ
Advertisement
Advertisement
ಸಿದ್ದರಾಮಯ್ಯ ಮೇಲೆ 65 ಕೇಸ್ ಇದೆ. ಆದರೆ ಬೊಮ್ಮಾಯಿ ಮೇಲೆ ಒಂದೇ ಒಂದು ಕೇಸ್ ಇಲ್ಲ. ಆದರೂ ಬೊಮ್ಮಾಯಿ ಮೇಲೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ದೇಶ ಲೂಟಿ ಮಾಡಿದ್ದಾರೆ. ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ರಾಹುಲ್ ಗಾಂಧಿ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಲಿಗೆ ಬೀಳಲು ಬಂದ ನಾಯಕರಿಗೆ ಬುದ್ಧಿ ಹೇಳಿದ ಮೋದಿ