ಬೆಂಗಳೂರು: ರಮ್ಯಾರನ್ನು (Ramya) ಬಿಜೆಪಿಗೆ (BJP) ಕರೆಯುವಷ್ಟು ಬರಗೆಟ್ಟಿಲ್ಲ. ನಮ್ಮ ಪಕ್ಷದಿಂದ ರಮ್ಯಾ ಅವರಿಗೆ ಆಹ್ವಾನ ಕೊಟ್ಟಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ (R.Ashok) ಕೌಂಟರ್ ಕೊಟ್ಟಿದ್ದಾರೆ.
ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು ಎಂಬ ರಮ್ಯಾ ಹೇಳಿಕೆಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಚುನಾವಣೆ (Election) ವೇಳೆ ರಮ್ಯಾ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಹೀರೋ ಆಗಲು ಪ್ರಯತ್ನಿಸುತ್ತಾರೆ. ಇದರಿಂದ ಕಾಂಗ್ರೆಸ್‌ಗೆ (Congress) ಸಹಾಯವಾಗಲಿ ಎಂದು ರಮ್ಯಾ ಈ ರೀತಿ ಮಾತನಾಡಿದ್ದಾರೆ ಎಂದರು. ಇದನ್ನೂ ಓದಿ: ಇಂದು ಕೂಡಲಸಂಗಮಕ್ಕೆ ರಾಹುಲ್ ಗಾಂಧಿ – ಬಸವ ಜಯಂತಿಯಲ್ಲಿ ‘ಕೈ’ ನಾಯಕರು ಭಾಗಿ
Advertisement
Advertisement
ರಮ್ಯಾ ಯಾವತ್ತಿದ್ದರೂ ಕಾಂಗ್ರೆಸ್‌ನವರು. ಇವರಿಗೆ ಯಾವುದೇ ಆಹ್ವಾನ ಕೊಟ್ಟಿಲ್ಲ. ಯಾವ ಸೀಟೂ ಕೊಡುವುದಿಲ್ಲ. ಯಾವ ಮಂತ್ರಿ ಹುದ್ದೆನೂ ಕೊಡುವುದಿಲ್ಲ. ಅವರು ಸಿನಿಮಾದಲ್ಲಿದ್ದಾರೆ. ಅಲ್ಲೇ ಇರಲಿ ಎಂದು ಟಕ್ಕರ್ ಕೊಟ್ಟರು. ಇದನ್ನೂ ಓದಿ: ಚುನಾವಣೆಗೂ ಮುನ್ನ ರಾಜ್ಯಕ್ಕೆ ಮತ್ತೆ ಮೋದಿ
Advertisement
Advertisement
ಲಿಂಗಾಯತ ಸಿಎಂ ಭ್ರಷ್ಟರು ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಸ್ವಾಮೀಜಿಗಳು ಸಹ ಇದನ್ನು ಖಂಡಿಸಿದ್ದಾರೆ. ಇದು ಸಮುದಾಯ ವಿರೋಧಿ ಹೇಳಿಕೆಯಾಗಿದೆ. ಲಿಂಗಾಯತರ ಶಾಪ ಕಾಂಗ್ರೆಸ್‌ಗೆ ತಟ್ಟಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗಡೀಪಾರು ಭೀತಿಯಲ್ಲಿದ್ದ ಚೇತನ್‍ಗೆ ಹೈಕೋರ್ಟ್ ರಿಲೀಫ್