ಚಿಕ್ಕಮಗಳೂರು: ನನ್ನ ಅಜ್ಜಿ ಸಂಕಷ್ಟದಲ್ಲಿದ್ದಾಗ ಜಿಲ್ಲೆಯ ಜನ ನನ್ನ ಅಜ್ಜಿಯ ಕೈ ಹಿಡಿದಿದ್ದರು. ಈಗ ಕಾಂಗ್ರೆಸ್ (Congress) ಕಷ್ಟದ ಸಮಯದಲ್ಲಿದೆ. ರಾಜ್ಯದ ಜನ ಕಾಂಗ್ರೆಸ್ ಕೈ ಹಿಡಿಯಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ (Priyanka Gandhi) ಮನವಿ ಮಾಡಿದರು.
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಮಾವೇಶದಲ್ಲಿ ಕೈ ಅಭ್ಯರ್ಥಿ ಟಿ.ಡಿ.ರಾಜೇಗೌಡ ಪರ ಮತಯಾಚನೆ ಮಾತನಾಡಿದ ಅವರು, ಕಷ್ಟದಲ್ಲಿದ್ದಾಗ ಜಿಲ್ಲೆಯ ಜನ ನನ್ನ ಅಜ್ಜಿಯ ಕೈ ಹಿಡಿದಿದ್ದರು. ಈಗಲೂ ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ನಾನು ಚಿಕ್ಕಮಗಳೂರನ್ನ ಎಂದಿಗೂ ಮರೆಯೋದಿಲ್ಲ ಎಂದರು.
Advertisement
Advertisement
ಮಳೆ ಬರ್ತಿದೆ ಅಂದ್ರೆ ಇದು ಭಗವಂತನ ಆಶೀರ್ವಾದ ಎಂದರು. ರಾಹುಲ್ ಗಾಂಧಿ (Rahul Gandhi) ಮೇಲೆ ಸುಳ್ಳು ಕೇಸ್ ಹಾಕಿ ಲೋಕಸಭೆಯಿಂದ ಹೊರ ಹಾಕಿದ್ದಾರೆ. ಪರಶಿವನ ಆಶೀರ್ವಾದವಿದೆ. ರಾಹುಲ್ ಗಾಂಧಿ ಮತ್ತೆ ಲೋಕಸಭಾ ಸದಸ್ಯರಾಗಿ ಬರುತ್ತಾರೆ. ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತೆ. ಕರ್ನಾಟಕದ ಚುನಾವಣೆ (Karnataka Election) ಸತ್ಯ ಮತ್ತು ಜಯದ ಹೋರಾಟ. ನಮಗೆ ಎಲ್ಲಾ ಕಡೆ ಮೋಸ ಆಗುತ್ತಿದೆ. ನಿಮ್ಮ ಮತವನ್ನು ನೀಡಿ ವಿಶ್ವಾಸ ತುಂಬಿ. ಕರ್ನಾಟಕದಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯವಿದೆ : ಕಟೀಲ್
Advertisement
Advertisement
ಕರ್ನಾಟಕ ಸ್ವಾಭಿಮಾನದ ರಾಜ್ಯ. ಇದು ಕರ್ನಾಟಕದ ಸ್ವಾಭಿಮಾನ ಪರಿಚಯ ಮಾಡುವಂತಹ ಸಮಯ. ಈ ರಾಜ್ಯದ ಪರಿಸ್ಥಿತಿ ಏನೆಂದು ಪ್ರತಿಯೊಬ್ಬರಿಗೂ ಗೊತ್ತಿದೆ. ನಾವು ಈ ಪರಿಸ್ಥಿತಿಯನ್ನು ಬದಲಾವಣೆ ಮಾಡುತ್ತೇವೆ ಎಂದ ಅವರು, ನಾವು ನಿಮ್ಮಿಂದ ಲೂಟಿ ಮಾಡುವುದಿಲ್ಲ. ನಾವು ನಿಮ್ಮ ಹಣವನ್ನ ನಿಮಗೆ ವಾಪಸ್ಸು ನೀಡುತ್ತೇವೆ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ. ಕರ್ನಾಟಕವನ್ನ ಅಭಿವೃದ್ಧಿಪಡಿಸುವ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಬೇಕು ಎಂದರು.
ಬಾಳೆಹೊನ್ನೂರು ಮಠಕ್ಕೂ ಭೇಟಿ ನೀಡಿದ್ದ ಪ್ರಿಯಾಂಕಾ, ಮಠದ ಆವರಣದಲ್ಲಿರುವ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ರಂಭಾಪುರಿ ಶ್ರೀಗಳು ಮಠದಲ್ಲಿ ಇರದ ಕಾರಣ ಶ್ರೀಗಳ ಆಶೀರ್ವಾದ ಪಡೆಯಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ