ರಾಯಚೂರು: ವರುಣಾ (Varuna Constituency) ದಲ್ಲಿ ಸಿದ್ದರಾಮಯ್ಯ (Siddaramaiah) ನವರ ಕತೆ ಏನಾಗಿದೆ ಅಂದ್ರೆ ನಾಮಿನೇಷನ್ ಆದ ಮೇಲೆ ಮತದಾನದ ದಿನ ಮತ್ತೆ ಕ್ಷೇತ್ರಕ್ಕೆ ಬರ್ತೀನಿ ಅಂದೋರು, ಐದು ದಿನ ಮುಂಚಿತವಾಗಿಯೇ ಬಂದಿದ್ದಾರೆ. 10 ಕೆ.ಜಿ ಅಕ್ಕಿ ಕೊಡ್ತೀನಿ ಅಂತ ಹಾರಾಟ ಮಾಡುತ್ತಿದ್ದರು. ಆದರೆ ಈಗ ಅವರಿಗೆ ಕಷ್ಟವಾಗಿದೆ ಅಂತ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
Advertisement
ರಾಯಚೂರು ಗ್ರಾಮೀಣ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಪರ ಯಾಪಲದಿನ್ನಿಯಲ್ಲಿ ಮತಬೇಟೆ ನಡೆಸಿದ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು. ಸೋಮಣ್ಣ ವರುಣಾದಲ್ಲಿ ಸ್ಪರ್ಧಿಸಿದ್ದಕ್ಕೆ ನಾಮಪತ್ರ ಸಲ್ಲಿಸಿದ ಮರುದಿನವೇ ಸಿದ್ದರಾಮಯ್ಯ ವರುಣಕ್ಕೆ ಬಂದ್ರು. ಸಿಎಂ ಆಕಾಂಕ್ಷಿ ಅಭ್ಯರ್ಥಿ ಕನಿಷ್ಠ 45 ಕ್ಷೇತ್ರ ಗೆಲ್ಲಿಸಬೇಕು. ಅವರೇ ತಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ. ಡಬನ್ ಇಂಜಿನ್ ಸರ್ಕಾರ ಬರುವುದು ಖಚಿತವಾಗಿದೆ. ನಾವು ಯಾವುದೇ ಭಾಗಕ್ಕೆ ಹೋದರೂ ಅಭಿವೃದ್ಧಿ ಬಗ್ಗೆ ಮಾತಾಡುತ್ತಿದ್ದೇವೆ ಎಂದರು.
Advertisement
Advertisement
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾರಿಗೆ ಕಾಗೆ ಬಿದ್ದಿತ್ತು. ಬಜರಂಗದಳ (Bajaranagdal) ನಿಷೇಧ ಮಾಡುತ್ತೇನೆ ಅಂದ ಕೂಡಲೇ ಡಿಕೆ ಶಿವಕುಮಾರ್ ಇದ್ದ ಹೆಲಿಕಾಪ್ಟರ್ ಗೆ ಹದ್ದು ಬಂದು ಬಡಿಯಿತು. ಕಾಂಗ್ರೆಸ್ ಅಂದ್ರೆ ಪ್ರಾಣಿ ಪಕ್ಷಿಗಳಿಗೂ ಇಷ್ಟವಿಲ್ಲ. ಪ್ರಜ್ಞಾವಂತ ಮತದಾರರೇ ನಿಮ್ಮ ಮನಸ್ಸಿನಲ್ಲೂ ಕಾಂಗ್ರೆಸ್ ಇರುವುದಿಲ್ಲ. ಮತ್ತೆ ಕಾಂಗ್ರೆಸ್ ಅವರನ್ನ ಅಧಿಕಾರಕ್ಕೆ ತಂದರೆ ಕೋಟಿ ಕೋಟಿ ಲೂಟಿ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ತಂದ್ರೆ ಗ್ಯಾರೆಂಟಿ ಕೊಡ್ತೀವಿ ಅಂತಿದ್ದಾರೆ. ಸಿದ್ದರಾಮಯ್ಯರನ್ನ ಮೈಸೂರು ಜನರೇ ನಂಬಲ್ಲ. ಚಾಮುಂಡೇಶ್ವರಿ ಜನ ಸೋಲಿಸಿದರು. ಮೈಸೂರು ದಸರಾಗೆ ಫೇಮಸ್ ಆದರೆ ಸಿದ್ದರಾಮಯ್ಯ ಮಹಿಷಾ ದಸರಾ ಅಂತ ನಾನ್ಸೆನ್ಸ್ ಶುರು ಮಾಡಿದ್ದಕ್ಕೆ ತಾಯಿ ಚಾಮುಂಡೇಶ್ವರಿನೇ 35 ಸಾವಿರ ವೋಟುಗಳಿಂದ ಸೋಲಿಸಿದಳು ಎಂದು ಕಿಡಕಾರಿದರು. ಇದನ್ನೂ ಓದಿ: ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ ಭವಿಷ್ಯ ಸುಟ್ಟು ಬೂದಿಯಾಗಲಿದೆ: ಪ್ರಹ್ಲಾದ್ ಜೋಶಿ ಕಿಡಿ
Advertisement
ಬಿಜೆಪಿ (BJP) ಬಂದ್ರೆ ಮಳೆ ಬರುತ್ತೆ, ಭೂಮಿ ಹಸನಾಗುತ್ತೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಬರಗಾಲ ಹೋಗಿ ಮಳೆ ಬಂತು. ಕಾಂಗ್ರೆಸ್‍ನವರು ಅಕ್ಕಿನೂ ಕೊಡಲ್ಲ, 2000 ರೂ. ನೂ ಕೊಡಲ್ಲ. ಆಮ್ ಆದ್ಮಿ ದೆಹಲಿಯಲ್ಲಿ ಹೀಗೆ ಹೇಳಿತ್ತು ಈಗ ಏನೂ ಕೊಡ್ತಿಲ್ಲ. ಕಾಂಗ್ರೆಸ್ ಗೆ ವೋಟು ಹಾಕಿದರೆ ಒಸಾಮಾ ಬಿನ್ ಲಾಡೆನ್, ಮುಲ್ಲಾ ಉಮರ್ ಆಡಳಿತದ ತಾಲಿಬಾನ್ ಸರ್ಕಾರ ಬರುತ್ತೆ. ಶಿವನ ಬೆಟ್ಟವನ್ನ ಡಿಕೆಶಿ (DK Shivakumar) ಏಸು ಬೆಟ್ಟ ಮಾಡಲು ಹೋಗಿದ್ದರು. ಟಿಪ್ಪು ಹುಟ್ಟಿನ ಬಗ್ಗೆ ಸಿದ್ದರಾಮಯ್ಯ ಕುಂಡಲಿ ಬರೆಯುತ್ತಾರೆ, ಆಂಜನೇಯನ ಬಗ್ಗೆ ಪ್ರಶ್ನೆ ಮಾಡುತ್ತಾರೆ ಎಂದರು. ಮುಸ್ಲಿಮರಿಗೆ ಅಕ್ರಮವಾಗಿ ಕೊಟ್ಟ 4% ಮೀಸಲಾತಿ ವಾಪಸ್ ತರುತ್ತೇವೆ ಅಂತಿದ್ದಾರೆ. ಹಿಂದುಳಿದ ಸಮುದಾಯದ ಮೀಸಲಾತಿ ಕಿತ್ತು ಅವರಿಗೆ ಕೊಡ್ತಾರೆ. ಗೊಹತ್ಯೆ ಮಾಡುವವರಿಗೆ ಮೀಸಲಾತಿ ಕೊಡ್ತಾರಂತೆ ಅಂತ ಹರಿಹಾಯ್ದರು.
ಇನ್ನೂ ಸಂತೋಷ್ (B.L Santhosh) ಜೀ ಬಗ್ಗೆ ಸುಳ್ಳು ಸುದ್ದಿ ಮಾಡಿ ಕಾಂಗ್ರೆಸ್‍ನವರು ಪ್ರಚಾರ ಮಾಡುತ್ತಿದ್ದಾರೆ. ವೀರಶೈವರ ಬಗ್ಗೆ ಹಗರವಾಗಿ ಮಾತನಾಡಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ವಾಟ್ಸಪ್ ನಲ್ಲಿ ಹರಿಬಿಡುತ್ತಿದ್ದಾರೆ. ಸಂತೋಷ್ ಅವರ ಬಗ್ಗೆ ಕಾಂಗ್ರೆಸ್‍ಗೆ ನಡುಕ ಶುರುವಾಗಿದೆ. ವೀರಶೈವ ಸೇರಿ ಎಲ್ಲಾ ಸಮುದಾಯ ಉಳಿಯಲು ಬಿಜೆಪಿ ಸರ್ಕಾರ ಬರಬೇಕು ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.