– ಸಿದ್ದರಾಮಯ್ಯಗೇಕೆ 2 ಕ್ಷೇತ್ರದ ಸ್ಪರ್ಧೆ? ನೀಮಗೇಕಿಲ್ಲಾ 2 ಕ್ಷೇತ್ರದಲ್ಲಿ ಸ್ಪರ್ಧೆ : ಡಿಕೆಶಿ ಬೆಂಬಲಿಗರ ಪ್ರಶ್ನೆ
– ಸಿದ್ದು ಸ್ಪರ್ಧೆಗೆ ಡಿಕೆಶಿ ಬೆಂಬಲಿಗರ ಟಿಟ್ ಫಾರ್ ಟ್ಯಾಟ್ ಶುರು ಮಾಡಿದ್ರಾ?
ಬೆಂಗಳೂರು: ಸಿದ್ದರಾಮಯ್ಯ (Siddaramaiah) 2 ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಡಿಕೆಶಿ ಬೆಂಬಲಿಗರ ಕಣ್ಣು ಕೆಂಪಾಗಿಸಿದೆ. ಸಿದ್ದರಾಮಯ್ಯ ಅವರಂತೆ ನೀವು 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ತಾಕೀತು ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ಅಭ್ಯರ್ಥಿ ಎಂದುಕೊಂಡು ಎರಡು ಕ್ಷೇತ್ರದ ಸ್ಪರ್ಧೆ ಮಾಡುವುದಾದರೆ ನೀವು ಎರಡು ಕ್ಷೇತ್ರದ ಸ್ಪರ್ಧೆ ಮಾಡಿ, ನೀವು ಸಿಎಂ ಅಭ್ಯರ್ಥಿ. ಅವರ ಸ್ಪರ್ಧೆ ಕೋಲಾರ ಜಿಲ್ಲೆಗೆ ಸಹಾಯವಾಗುವುದಾದರೆ ನಿಮ್ಮ ಸ್ಪರ್ಧೆ ಮಂಡ್ಯ ಜಿಲ್ಲೆಗೆ ಸಹಾಯವಾಗಲಿದೆ. ಮಂಡ್ಯಕ್ಕೂ (Mandya) ಬನ್ನಿ. ಕನಪುರದಲ್ಲೂ ನಿಲ್ಲಿ. ಇದು ಡಿಕೆಶಿ ಬೆಂಬಲಿಗರ ಹೊಸ ವರಸೆ ಎನ್ನಲಾಗಿದೆ. ಕುಮಾರಸ್ವಾಮಿಗೂ ಕೌಂಟರ್ ಮಾಡಿದಂತಾಯ್ತು. ಪಕ್ಷಕ್ಕೂ ಶಕ್ತಿ ತುಂಬಿದಂತಾಯಿತು. ಮಂಡ್ಯ ಅಖಾಡಕ್ಕೆ ಬಂದೇ ಬಿಡಿ ಎಂದು ಸಿದ್ದರಾಮಯ್ಯ ಡಬಲ್ ಟಿಕೆಟ್ ಕ್ಲೈಮಿಂಗ್ ಬೆನ್ನಲ್ಲೆ ಡಿಕೆಶಿ ಬೆಂಬಲಿಗರು ಡಬಲ್ ಟಿಕೆಟ್ ದಾಳ ಉರುಳಿಸುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
Advertisement
Advertisement
ಡಿಕೆಶಿ ಡಬಲ್ ರೈಡ್ ಮಾಡ್ತಾರಾ? ಡಬಲ್ ರೈಡ್ ಮಾಡಿದ್ರೇನೆ ಸಿದ್ದರಾಮಯ್ಯಗೆ ಸರಿಸಮನಾಗಿ ತೊಡೆ ತಟ್ಟೋಕೆ ಸಾಧ್ಯವಾಗೋದಾ. ಸಿದ್ದರಾಮಯ್ಯ ನಡೆ ನಂತರ ಸಿದ್ದರಾಮಯ್ಯಗೆ ಚುನಾವಣೆ ಸ್ಪರ್ಧೆಯಲ್ಲೂ ಪೈಪೋಟಿ ಕೊಡುತ್ತೆ ಎಂದು ಡಿಕೆಶಿ ಆಪ್ತರು ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಪೂರ್ಣ ಬಹುಮತ : ಎಬಿಪಿ ಸಿ- ವೋಟರ್ ಸಮೀಕ್ಷೆ
Advertisement
Advertisement
ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ ಜಿಲ್ಲೆಯಲ್ಲಿ ಪಕ್ಷದ ಗೆಲುವಿಗೆ ಸಹಾಯವಾಗಲಿದೆ. ಆದ್ದರಿಂದ ಸ್ಪರ್ಧೆ ಮಾಡಿ ಆಗ ಸಿದ್ದರಾಮಯ್ಯಗೆ ಸರಿಸಮಾನ ಪೈಪೋಟಿ ನೀಡಿದಂತಾಗುತ್ತದೆ ಅನ್ನೋದೆ ಡಿಕೆಶಿ ಬೆಂಬಲಿಗರ ವಾದ ಎನ್ನಲಾಗಿದೆ. ಕನಕಪುರ (Kanakapura) ಒಂದೇ ಕ್ಷೇತ್ರಕ್ಕೆ ಸೀಮಿತ ಆಗ್ತಾರಾ ಇಲ್ಲ, ಬೆಂಬಲಿಗರ ಮಾತು ಕೇಳಿ ಎರಡು ಕ್ಷೇತ್ರದ ಸ್ಪರ್ಧೆಗೆ ಸೈ ಎಂದು ಸಿದ್ದರಾಮಯ್ಯಗೆ ಸೆಡ್ಡು ಹೊಡಿತಾರ ಕೆಪಿಸಿಸಿ ಅಧ್ಯಕ್ಷ ಅನ್ನೋದೆ ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ಬಿಜೆಪಿಗೆ ಎರಡನೇ ಗೆಲುವಿನ ಕೊಡುಗೆ ನೀಡಲಿದೆಯೇ ಮೂಡಬಿದ್ರೆ ಕ್ಷೇತ್ರ?