ರಾಮನಗರ: ಹಳೇ ಮೈಸೂರು (Old Mysuru) ಭಾಗದಲ್ಲಿ ಬಿಜೆಪಿ (BJP) ಹೆಚ್ಚು ಸ್ಥಾನ ಗೆಲ್ಲಲು ಪ್ಲ್ಯಾನ್ ಮಾಡಿದ್ದು ಏ.30ರಂದು ಚನ್ನಪಟ್ಟಣಕ್ಕೆ(Channapatna) ಪ್ರಧಾನಿ ಮೋದಿ (PM Narendra Modi) ಆಗಮಿಸಲಿದ್ದಾರೆ.
ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ 30 ಎಕರೆಯಲ್ಲಿ ಜಾಗದಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದು ಸುಮಾರು 10ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
Advertisement
ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಂತೆ ಸಮಾವೇಶ ನಡೆಯಲಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಅವಳಿ ಸಹೋದರಿಯರ ವಿಶೇಷ ಸಾಧನೆ – ಇಬ್ಬರು ಸಹೋದರಿಯರಿಗೂ ಸಮಾನ ಅಂಕ
Advertisement
Advertisement
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಯೋಗೇಶ್ವರ್, ಕೋಲಾರದಲ್ಲಿ (Kolara) ಸಮಾವೇಶ ಮುಗಿಸಿ ಮಧ್ಯಾಹ್ನ 2 ಗಂಟೆಗೆ ಚನ್ನಪಟ್ಟಣಕ್ಕೆ ಮೋದಿ ಆಗಮಿಸಲಿದ್ದಾರೆ. ಚನ್ನಪಟ್ಟಣದಲ್ಲಿ ಸಮಾವೇಶಕ್ಕೆ ಅವಕಾಶ ಕೊಟ್ಟಿದ್ದು ಖುಷಿ ತಂದಿದೆ. ರಾಮನಗರ ರಾಜಕೀಯ ಇತಿಹಾಸದಲ್ಲಿ ಇದೊಂದು ಅದ್ಬುತ ಕಾರ್ಯಕ್ರಮ ಆಗಲಿದೆ ಎಂದು ತಿಳಿಸಿದರು.
Advertisement
ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಆರ್.ಅಶೋಕ್ ಮತ್ತು ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಅವರನ್ನು ನಿಲ್ಲಿಸಿದೆ.
ಏಪ್ರಿಲ್ ಕೊನೆಯ ವಾರದಿಂದ ಮೇ 7ರವರೆಗಿನ ಅವಧಿಯಲ್ಲಿ ಸುಮಾರು ಏಳು ದಿನಗಳ ಕಾಲ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗುವ ಸಾಧ್ಯತೆಯಿದೆ. ಸುಮಾರು 20ಕ್ಕೂ ಹೆಚ್ಚು ಸಮಾವೇಶವನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಕೆಲ ಹಿರಿಯ ನಾಯಕರು ಕಾಂಗ್ರೆಸ್ ಸೇರ್ಪಡೆ, ಕೆಲವು ಕಡೆ ಟಿಕೆಟ್ ನಿರಾಕರಿಸಿದ್ದರಿಂದ ಕೆಲ ಕ್ಷೇತ್ರಗಳನ್ನು ಭಾರೀ ಸವಾಲು ಎದುರಿಸುತ್ತಿರುವ ಕಾರಣ ಬಿಜೆಪಿ ಈ ಬಾರಿ ಮೋದಿ ಕಾರ್ಯಕ್ರಮ ಹೆಚ್ಚು ಆಯೋಜಿಸಲು ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಒಟ್ಟು 224 ಕ್ಷೇತ್ರಗಳಿರುವುದರಿಂದ ಪ್ರತಿ 12-14 ಕ್ಷೇತ್ರಗಳಿಗೆ ಒಂದರಂತೆ ಬೃಹತ್ ಸಮಾವೇಶ (Modi Rally) ನಡೆಸಲು ಸಿದ್ಧತೆ ನಡೆದಿದೆ. ರಾಜ್ಯವನ್ನು 6 ಭಾಗವನ್ನಾಗಿ ವಿಂಗಡಿಸಿರುವ ಬಿಜೆಪಿ ಪ್ರದೇಶವಾರು, ಕಾಂಗ್ರೆಸ್ (Congress), ಜೆಡಿಎಸ್ (JDS) ಭದ್ರಕೋಟೆಯಲ್ಲಿ ಹೆಚ್ಚು ಸಮಾವೇಶ ಆಯೋಜಿಸಲಿದೆ. ಪ್ರತಿ ಭಾಗದಲ್ಲಿ ಕನಿಷ್ಠ 3 ಕಾರ್ಯಕ್ರಮ ಆಯೋಜಿಸುವ ಸಾಧ್ಯತೆಯಿದೆ.