ಬೆಂಗಳೂರು: ಕಲ್ಯಾಣ ಕರ್ನಾಟಕವನ್ನು (Kalyana Karnataka) ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಬಾರಿ ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಅಖಾಡಕ್ಕೆ ಇಳಿದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ (Mallikarjun Kharge) ಸೋಲಿನ ರುಚಿ ತೋರಿಸಿರುವ ಪ್ರಧಾನಿ ಮೋದಿ ಈಗ ಎಐಸಿಸಿ ಅಧ್ಯಕ್ಷರಾದ ಹಿನ್ನೆಲೆ ಅವರ ತವರಲ್ಲೇ ಕಮಲ ಅರಳಿಸಲು ಪ್ಲ್ಯಾನ್ ಮಾಡಿದ್ದಾರೆ.
ಕರಾವಳಿ, ಮಧ್ಯ ಕರ್ನಾಟಕದಲ್ಲಿ ಬಿಜೆಪಿ (BJP) ಹೆಚ್ಚು ಸ್ಥಾನ ಪಡೆದರೂ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಬುಟ್ಟಿಗೆ ಕ್ಷೇತ್ರಗಳು ಹೆಚ್ಚು ಬರುತ್ತಿಲ್ಲ. ಬಿಜೆಪಿ ಹೆಚ್ಚು ಸ್ಥಾನ ಪಡೆದಾಗಲೂ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಹೆಚ್ಚು ಸ್ಥಾನ ಪಡೆದಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ವಿಫಲವಾಗಿತ್ತು. ಇದನ್ನೂ ಓದಿ: ಯಾದಗಿರಿ, ಕಲಬುರಗಿಗೆ ಮೋದಿ – ಎಲ್ಲಿ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ?
Advertisement
Advertisement
ಕಲ್ಯಾಣ ಕರ್ನಾಟಕದಲ್ಲಿ 18 ಸ್ಥಾನಗಳನ್ನ ಗೆದ್ದು ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಆದರೆ ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‍ಗಿಂತ ಐದಾರು ಸೀಟ್ ಹೆಚ್ಚು ಗೆಲ್ಲಬೇಕೆಂಬ ಹೈಕಮಾಂಡ್ ಟಾಸ್ಕ್ ನೀಡಿದೆ. ಮುಂಬೈ ಕರ್ನಾಟಕದ ರೀತಿ ಕಲ್ಯಾಣ ಕರ್ನಾಟಕದಲ್ಲೂ ಗೆದ್ದರೆ ಸ್ವತಂತ್ರ ಅಧಿಕಾರದ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.
Advertisement
ಯಡಿಯೂರಪ್ಪ (Yediyurappa) ನಾಯಕತ್ವ ಇದ್ದರೂ ಈ ಭಾಗದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಈಗ ಯಡಿಯೂರಪ್ಪ ನಾಯಕತ್ವದಿಂದ ನಿರ್ಗಮಿಸಿರುವಾಗ ಪರಿಸ್ಥಿತಿ ಇನ್ನಷ್ಟು ಭಿನ್ನ. ಹಾಗಾಗಿ ಇರುವ ಸೀಟ್ ಉಳಿಸಿಕೊಳ್ಳುವ ಜೊತೆಗೆ ಮತ್ತಷ್ಟು ಸೀಟ್ ಗೆಲ್ಲಲು ಟಾರ್ಗೆಟ್ ಹಾಕಿಕೊಂಡಿದೆ. ಈ ಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಶತಾಯಗತಾಯ ಕಮಲ ಇಲ್ಲಿ ಅರಳಿಸಲೇಬೇಕೆಂದು ಬಿಜೆಪಿ ಪಣತೊಟ್ಟಿದೆ. ಒಟ್ಟು 41 ಕ್ಷೇತ್ರಗಳಲ್ಲಿ 35 ಸ್ಥಾನದಲ್ಲಿ ಕಮಲ ಅರಳಿಸಲು ಈಗಾಗಲೇ ಬ್ಲೂ ಪ್ರಿಂಟ್ ತಯಾರಾಗಿದೆ. ಆ ಬ್ಲ್ಯೂ ಪ್ರಿಂಟ್ ಜಾರಿ ತರಲು ಮೋದಿ ಖುದ್ದು ಅಖಾಡಕ್ಕೆ ಇಳಿದಿದ್ದಾರೆ.
Advertisement
ಲಿಂಗಾಯತ ಸಮುದಾಯದ ಜೊತೆ ಪರಿಶಿಷ್ಟ ಜಾತಿ ಸೆಳೆಯಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ. ಲಂಬಾಣಿ, ಮಾದಿಗ ಹಾಗೂ ಗೊಲ್ಲ ಸಮುದಾಯಕ್ಕೆ ಮೋದಿ ಗಾಳ ಹಾಕಿದ್ದಾರೆ. ಲಂಬಾಣಿ, ಗೊಲ್ಲ ಸಮುದಾಯದ ಸೂರು ವಂಚಿತ 51,900 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಿದ್ದಾರೆ.
ಲಂಬಾಣಿ ಸಮುದಾಯದ ಜೊತೆಗೆ ಮಾದಿಗ ಸಮುದಾಯದ ಮೇಲು ಬಿಜೆಪಿ ಕಣ್ಣಿಟ್ಟಿದ್ದು, ನ್ಯಾ. ಸದಾಶಿವ ಆಯೋಗ ವರದಿ ಜಾರಿಗೆ ತರಲು ಕೇಸರಿ ಪಡೆ ಸಿದ್ದತೆ ನಡೆಸಿದೆ. ಕಲ್ಯಾಣ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ನಿರ್ಣಾಯಕ ಜಾತಿ ಸೆಳೆಯಲು ಸಜ್ಜು ಮಾಡಿದೆ. ಈಗಾಗಲೇ ಕೋಳಿ ಸಮುದಾಯವನ್ನು ಎಸ್‍ಟಿಗೆ ಸೇರಿಸಿರುವ ಬಿಜೆಪಿ ಲಿಂಗಾಯತ, ಕೋಳಿ, ಲಂಬಾಣಿ, ಮಾದಿಗ, ಭೋವಿ ಜೊತೆ ಹಿಂದುಳಿದ ವರ್ಗದ ಮೇಲೂ ಕಣ್ಣಿಟ್ಟಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k