ರಾಯಚೂರು: ಬಿಜೆಪಿಯವರು (BJP) ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ (Manifesto) ಪಂಚರತ್ನ ವಿಷಯಗಳನ್ನು ನಕಲು ಮಾಡಿದ್ದಾರೆ. ನಮ್ಮ ಹಲವು ಯೋಜನೆಗಳನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಆರೋಪಿಸಿದ್ದಾರೆ.
ರಾಯಚೂರಿನಲ್ಲಿ (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಮಾದರಿಯ ನೀರಾವರಿ ಯೋಜನೆ ಸಮ್ಮಿಶ್ರ ಸರ್ಕಾರದ ಯೋಜನೆ. ಈಗ ಅದನ್ನು ಬಿಜೆಪಿಯವರು ನಕಲು ಮಾಡಿದ್ದಾರೆ. ಮೂರು ಸಿಲಿಂಡರ್ ಕೊಡುತ್ತೇವೆ ಎನ್ನುತ್ತಾರೆ. ಅದರಿಂದ ಏನು ಉಪಯೋಗ? ಬಿಜೆಪಿಯವರು ಸಿಲಿಂಡರ್ ರೇಟ್ ನೆನಪಿಸಲು ಕೊಡುತ್ತಾರಾ? ಸರ್ಕಾರ ಇದ್ದಾಗಲೇ ಸಿಲಿಂಡರ್ ಕೊಡಬಹುದಿತ್ತು. ದಸರಾ ದೀಪಾವಳಿ ಗಣೇಶ ಹಬ್ಬಕ್ಕೊಂದು ಸಿಲಿಂಡರ್ ಕೊಡುತ್ತಾರ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ
Advertisement
Advertisement
ಕುಮಾರಸ್ವಾಮಿ ಸಾಲಮನ್ನಾ ಮಾಡಲಿಲ್ಲ ಎಂದು ಕಾಂಗ್ರೆಸ್ (Congress) ನಾಯಕರು ಹೇಳುತ್ತಾರೆ. ಸಿದ್ದರಾಮಯ್ಯ (Siddaramaiah) ಅವರಿಗೆ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನೆನೆಪಿನ ಶಕ್ತಿ ಕಡಿಮೆಯಾಗಿದ್ದರೆ ನಾನೇ ನೆನಪು ಮಾಡುತ್ತೇನೆ. ಎರಡು ಸಾರಿ ಸಾಲಮನ್ನಾ ಮಾಡಿದ್ದು ಜೆಡಿಎಸ್ (JDS) ಸರ್ಕಾರ. 75 ವರ್ಷ ಆಡಳಿತ ಮಾಡಿದವರು ಈಗ ನಿರುದ್ಯೋಗ ಭತ್ಯೆ ಕೊಡುತ್ತೇನೆ ಎನ್ನುತ್ತಿದ್ದಾರೆ. ಎಷ್ಟು ಜನರಿಗೆ ನಿರುದ್ಯೋಗ ಭತ್ಯೆ ಕೊಡುತ್ತೀರಿ? ಅದನ್ನು ನಿಮ್ಮ ಅವಧಿಯಲ್ಲಿ ಯಾಕೆ ಕೊಡಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗರು ವೋಟ್ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ
Advertisement
ಹಲವಾರು ವರ್ಗದ ಜನರಿಗೆ ನೀವು ಇನ್ನೂ ಕೈಒಡ್ಡುವ ಸ್ಥಿತಿಯಲ್ಲಿದ್ದೀರಿ ಎಂದು ಎರಡು ರಾಷ್ಟ್ರೀಯ ಪಕ್ಷಗಳು ಹೇಳುತ್ತಿವೆ. ಜಿಎಸ್‌ಟಿ (GST) ಸಂಗ್ರಹದ ದುಡ್ಡು ಎಲ್ಲಿ? ಯಾವ ಕಂಪನಿಗೆ ಹೋಗುತ್ತಿದೆ? ಬಡವರ ಪರಸ್ಥಿತಿ ಸುಧಾರಣೆಗೆ ಬಂಡವಾಳ ಹಾಕುತ್ತಿದ್ದಿರೋ ಅಥವಾ ನಾಲ್ಕೈದು ಕಂಪನಿಯ ಅಭಿವೃದ್ಧಿಗೆ ಹಾಕ್ತಿರಾ? ಮೂರುವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? ನಮ್ಮ ಆಡಳಿತ ಅವಧಿ ಬಗ್ಗೆ ಚರ್ಚೆ ಮಾಡುವ ನೈತಿಕತೆ ಯಾರೂ ಉಳಿಸಿಕೊಂಡಿಲ್ಲ. ಎರಡೂ ಪಕ್ಷ ಹಣದಲ್ಲಿ ಏನಾದರೂ ಕೊಂಡುಕೊಳ್ಳುತ್ತೇವೆ ಎಂದು ತಿಳಿದಿದ್ದಾರೆ. ನಮ್ಮ ಪಂಚರತ್ನ ಕಾರ್ಯಕ್ರಮಕ್ಕೂ ಇವರ ಕಾರ್ಯಕ್ರಮಕ್ಕೂ ಬಹಳ ವ್ಯತ್ಯಾಸವಿದೆ ಎಂದರು. ಇದನ್ನೂ ಓದಿ: ಅಂಬರೀಶ್ ಅಂತಿಮ ದರ್ಶನ ಪಡೆಯಲು ಬರದಿದ್ದಕ್ಕೆ ರಮ್ಯಾ ಮೊದಲ ಪ್ರತಿಕ್ರಿಯೆ
Advertisement
ಜೆ.ಪಿ.ನಡ್ಡಾ (J.P.Nadda) ಜೆಡಿಎಸ್‌ಗೆ ವೋಟು ಹಾಕಬೇಡಿ 10ರಿಂದ 15 ಸೀಟು ಬರುತ್ತೆ ಅಷ್ಟೇ ಎಂದಿದ್ದಾರೆ. ಬಿಜೆಪಿ ಆ ಸ್ಥಿತಿಗೆ ಬಂದರೂ ಅಚ್ಚರಿಯಿಲ್ಲ. ರಾಜ್ಯದಲ್ಲಿ 50ರಿಂದ 60 ಸಿಟಿಗಾಗಿ ಬಿಜೆಪಿ ಬೆವರಳಿಸುತ್ತೆ ನೋಡುತ್ತಿರಿ. ಉತ್ತರ ಕರ್ನಾಟಕದಲ್ಲಿ ಕನಿಷ್ಠ 30ರಿಂದ 35 ಸ್ಥಾನ ಜೆಡಿಎಸ್ ಪಡೆಯುತ್ತದೆ. ನಾವು ಕಾಂಗ್ರೆಸ್ ಅಥವಾ ಬಿಜೆಪಿ ಬಿ ಟೀಮ್ ಅಲ್ಲ. ನಾವು ಯಾರ ಬಿ ಟೀಮ್ ಅಲ್ಲ. ನಾವು ರಾಜ್ಯದ ಜನರ ಅಭಿವೃದ್ಧಿಯ ಬಿ ಟೀಮ್. ಸಿದ್ದರಾಮಯ್ಯ ಜೆಡಿಎಸ್‌ಗೆ ಸಿದ್ದಾಂತವಿಲ್ಲ ಎನ್ನುತ್ತಾರೆ. ನಮಗೆ ಸಿದ್ಧಾಂತವಿಲ್ಲ ಎನ್ನೋದಾದರೆ 2018ರ ಚುನಾವಣೆ ಬಳಿಕ ಜೆಡಿಎಸ್ ಮನೆಬಾಗಿಲಿಗೆ ಯಾಕೆ ಬಂದಿರೀ? ಸಿದ್ದರಾಮಯ್ಯನವರಿಗೆ ಕೇಳುತ್ತೆವೆ ನಿಮ್ಮದು ಯಾವ ಸಿದ್ದಾಂತವಿದೆ ಹೇಳಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಂಚಮಸಾಲಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ
ಚುನಾವಣೆ ಹತ್ತಿರವಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಈಗ ಜನರ ಬಗ್ಗೆ ಕಾಳಜಿ ತೋರಿಸುತ್ತಿವೆ. ಪ್ರಧಾನಿ, ಗೃಹ ಸಚಿವರು ಇಲ್ಲೇ ಠಿಕಾಣಿ ಹೂಡಿದ್ದಾರೆ. ರಾಜ್ಯ ಬಿಟ್ಟು ಹೋಗಿಲ್ಲ. ಅಧಿಕಾರದಲ್ಲಿದ್ದವರು ದೇಶ, ರಾಜ್ಯದ ವಿಷಯ ಬೇಡ ರಾಯಚೂರು ಜಿಲ್ಲೆ ಜನ ಏನು ಬಯಸಿದ್ದರು ಅದರ ಒಂದು ಕಾರ್ಯಕ್ರಮವನ್ನಾದರೂ ಈಡೇರಿಸಿದ್ದಾರಾ ಎಂದು ಕೇಳಿದರು. ಇದನ್ನೂ ಓದಿ: ಹಿಂದೆ ರಾಮನನ್ನು ಬಂಧಿಸಿಟ್ಟಿತ್ತು, ಈಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಮೋದಿ ಕಿಡಿ
ಸಿಂಧನೂರಿಗೆ ಪ್ರಧಾನಿ ಮೋದಿ (Narendra Modi) ಬರುತ್ತಿದ್ದಾರೆ. ನೀವು ಜನತೆಯ ಕಷ್ಟವನ್ನು ಕೇಳಿದ್ದೀರಾ? ಬರ ಹಾಗೂ ಪ್ರವಾಹ ಬಂದಾಗ ಎಲ್ಲಿದ್ದಿರಿ? ಜನರ ಕಷ್ಟ ಭಾವನೆಗಳಿಗೆ ಕಿಂಚಿತ್ತು ಗೌರವ ಕೊಡದವರು ನೀವು. ಪರಿವಾರ , ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ. ಯಾವ ಪರಿವಾರದ ಬಗ್ಗೆ ನೀವು ಮಾತನಾಡುತ್ತೀರಿ. ಕೊಪ್ಪಳ (Koppal) ವಿಧಾನಸಭಾ ಕ್ಷೇತ್ರದಲ್ಲಿ ಪರಿವಾರಕ್ಕೆ ಟಿಕೆಟ್ ಕೊಟ್ಟಿದ್ದೀರಲ್ಲಾ. ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತೀರಿ. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: Sharad Pawar: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ
ರಾಜ್ಯದಲ್ಲಿ ಯಾವ ನೈತಿಕೆಯಿದೆ ನಿಮಗೆ? ಮೂರುವರೆ ವರ್ಷ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತಾಡಲಿ ಅವರು. ರೈತರು ನೆಮ್ಮದಿಯಿಂದ ಬದುಕಿಲ್ಲ. ವಾಸಿಸಲು ಮನೆಯಿಲ್ಲ. ರಾಜ್ಯದಲ್ಲಿ ಈಗಲೂ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಕೇಂದ್ರದ ವರದಿಯೇ ಹೇಳುತ್ತದೆ. ಅಪೌಷ್ಟಿಕತೆಗೆ ಪರಿಹಾರ ಏನು ಕೊಟ್ಟಿದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಿಎಫ್‌ಐ ಪ್ರಚೋದಿತ, ಮುಸ್ಲಿಂ ಮೂಲಭೂತವಾದಿಗಳು ಕಾಂಗ್ರೆಸ್ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ: ಭಜರಂಗ ದಳ ನಿಷೇಧಕ್ಕೆ ಬಿಸ್ವಾ ಕಿಡಿ