ಬೆಂಗಳೂರು: ಲಿಂಗಾಯತ ಪಂಚಮಸಾಲಿ ಹೋರಾಟವು ಅನೇಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದೆ. ಈ ಹೋರಾಟಕ್ಕೆ ಮೊದಲ ಜಯವನ್ನು ತಂದುಕೊಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಜಯ ಮೃತ್ಯಂಜಯ ಸ್ವಾಮೀಜಿ (Basava Jaya Mruthyunjaya Swamiji) ಸಂತೋಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು (Basavaraj Bommai) ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ (Reservation) ದೊರಕಿರುವುದು ಈ ನಾಡಿನ ಜನತೆಯಲ್ಲಿ ಮತ್ತು ನಮ್ಮ ಸಮುದಾಯದ ಎಲ್ಲಾ ಬಂಧುಗಳಲ್ಲಿ ಒಂದು ಹರ್ಷ ಮತ್ತು ಸಂತೋಷವನ್ನು ಉಂಟುಮಾಡಿದೆ. ಎಲ್ಲಾ ಲಿಂಗಾಯತ ಪಂಚಮಸಾಲಿ, ದೀಕ್ಷ ಲಿಂಗಾಯತರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ಕಲ್ಪಿಸಬೇಕು. ಎಲ್ಲಾ ಲಿಂಗಾಯತ ಒಳಪಂಗಡಗಳನ್ನು ಒಬಿಸಿ (OBC) ಮೀಸಲಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ನಾವೆಲ್ಲರೂ ಕೂಡಿ ಕಳೆದ ಎರಡೂವರೆ ವರ್ಷಗಳ ಕಾಲ ಐತಿಹಾಸಿಕವಾದ ಚಳುವಳಿಯನ್ನು ಮಾಡಿದ್ದೇವೆ ಎಂದರು. ಇದನ್ನೂ ಓದಿ: ಬೇಲೂರಿನ ರಥೋತ್ಸವದ ವೇಳೆ ಕುರಾನ್ ಪಠಣ ಮಾಡಬೇಕೆಂದು ಎಲ್ಲೂ ಇಲ್ಲ: ರಾಜ್ಯ ಪುರಾತತ್ವ ಇಲಾಖೆ
Advertisement
Advertisement
ಈ ನಿರಂತರ ಹೋರಾಟ ಮತ್ತು ಪಾದಯಾತ್ರೆಯ ಪರಿಣಾಮ ಪ್ರಧಾನ ಮಂತ್ರಿಗಳು ನಮ್ಮ ಹಕ್ಕನ್ನು ಮತ್ತು ನೋವನ್ನು ಕೇಳಿ ಬಸವರಾಜ ಬೊಮ್ಮಾಯಿಯವರಿಗೆ ನಿರ್ದೇಶನ ಮಾಡಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಚಳುವಳಿಗೆ ನ್ಯಾಯವನ್ನು ದೊರಕಿಸಿ ಕೊಟ್ಟಿದ್ದಾರೆ. ನಮಗಾಗಿ ಪ್ರತ್ಯೇಕ 2ಡಿ ಗ್ರೂಪನ್ನು ನಿರ್ಮಾಣ ಮಾಡಿದ್ದಾರೆ. ಈ ಮೀಸಲಾತಿ ಕಾರಣದಿಂದಾಗಿ ದಲಿತ ಸಮುದಾಯದ ಮೀಸಲಾತಿಯೂ ಹೆಚ್ಚಳವಾಗಿದೆ. ಅಲ್ಲದೇ ಅನೇಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಡಲು ನಮ್ಮ ಹೋರಾಟ ಸಾಕ್ಷಿಯಾಗಿದೆ. ಇದನ್ನೂ ಓದಿ: ಧಮ್ ಇದ್ರೆ ಡಿಕೆಶಿ ಮೀಸಲಾತಿ ನಿರ್ಧಾರವನ್ನು ವಾಪಸ್ ಪಡೆಯಲಿ – ಯತ್ನಾಳ್ ಸವಾಲ್
Advertisement
ಮಾರ್ಚ್ 24ನೇ ತಾರೀಕು ಸಚಿವ ಸಂಪುಟ ಸಭೆಯಾದ ಬಳಿಕ, ನಮಗೆ ರಾಜ್ಯದ ಆದೇಶ ಪತ್ರ ಬಂದ ಮೇಲೆಯೇ ಈ ಹೋರಾಟಕ್ಕೆ ವಿರಾಮವನ್ನು ನೀಡುತ್ತೇವೆ ಎಂದು ಹೇಳಿದ್ದೆವು. ಅದರ ಜವಾಬ್ದಾರಿಯನ್ನು ಹೋರಾಟ ಸಮಿತಿಯ ಅಧ್ಯಕ್ಷರಾಗಿರುವ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ವಹಿಸಿದ್ದರು. ಈ ಹಿನ್ನೆಯಲ್ಲಿ 27ನೇ ತಾರೀಕಿಗೆ ಕರ್ನಾಟಕ ಸರ್ಕಾರ ನಮಗೆ ರಾಜ್ಯದ ಆದೇಶ ಪತ್ರವನ್ನು ನೀಡಿದೆ. ಈ ಮೂಲಕವಾಗಿ ಐತಿಹಾಸಿಕವಾದ ಲಿಂಗಾಯತ ಪಂಚಮಸಾಲಿ ಹೋರಾಟಕ್ಕೆ ಮೊದಲ ಜಯವನ್ನು ತಂದುಕೊಡುವ ಕೆಲಸವನ್ನು ಮುಖ್ಯಂತ್ರಿಗಳು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: 4ನೇ ಬಾರಿ ಗೆಲ್ತಾರಾ ಸುಧಾಕರ್? – ಬ್ರೇಕ್ ಹಾಕಲು ಜೆಡಿಎಸ್, ಕಾಂಗ್ರೆಸ್ ಪೈಪೋಟಿ
Advertisement
12ನೇ ಶತಮಾನದಲ್ಲಿ ಬಸವಣ್ಣನವರು ದುಡಿಯುವವರಿಗಾಗಿ ಧಾರ್ಮಿಕ ಸ್ವತಂತ್ರವನ್ನು ನೀಡಿದ್ದರು. ಅದೇ ರೀತಿ ಮೋದಿ (Narendra Modi) ಹಾಗೂ ಅಮಿತ್ ಶಾ (Amit Shah) ಅವರ ಮಧ್ಯಪ್ರವೇಶದಿಂದ ಈ ಹೋರಾಟ ಮೊದಲ ಜಯವನ್ನು ಸಾಧಿಸಿದೆ. ಈ ಜಯವನ್ನು ನೀಡಲು ಕಾರಣಕರ್ತರಾದ ಪ್ರಧಾನಮಂತ್ರಿಗಳು, ಅಮಿತ್ ಶಾ, ಮುಖ್ಯಮಂತ್ರಿಗಳಿಗೆ, ಕೇಂದ್ರ ಸರ್ಕಾರ ಹಾಗೂ ನಮ್ಮ ನಡುವೆ ಸೇತುವೆಯಾಗಿ ಕೆಲಸ ಮಾಡಿದಂತಹ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ರಾಕೇಶ್‌ನನ್ನು ಶಾಸಕನಾಗಿ ಕಾಣಲು ಬಯಸಿದ್ದ ಸಿದ್ದು – ಆದರೆ ವಿಧಿ ನಿಯಮವೇ ಬೇರೆ ಇತ್ತು!
ಏಪ್ರಿಲ್ 1ರಂದು ವಿಧಾನಸೌಧದ ಮುಂಭಾಗದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆ ಮೂಲಕವಾಗಿ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಈ ಮೀಸಲಾತಿಯ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ದೇವೇಗೌಡರ ಮಕ್ಕಳು ಜಗಳ ಆಡ್ತಾರೆ ಅಂದರೆ ನೀವು ಸುಳ್ಳಾಗ್ತೀರಾ: ಸಿ.ಎಂ ಇಬ್ರಾಹಿಂ
ಅಧಿಕಾರಕ್ಕೆ ಬಂದ ಬಳಿಕ ಮೀಸಲಾತಿಯನ್ನು ಕಿತ್ತು ಹಾಕುತ್ತೇವೆ ಎಂಬ ಕಾಂಗ್ರೆಸ್ (Congress) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಈ ರೀತಿಯಾದ ಹೇಳಿಕೆಯನ್ನು ನೀಡಿರುವುದು ತಪ್ಪು. ಇಂದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ನ್ಯಾಯ ದೊರಕಿದೆ. ಈ ರೀತಿಯಾದ ಹೇಳಿಕೆ ಸರಿಯಲ್ಲ ಎಂದರು. ಇದನ್ನೂ ಓದಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟಾ, ಬಂಟ-ಬಿಲ್ಲವ ಫೈಟಾ?