ಬೆಂಗಳೂರು: ಚುನಾವಣೆಯ (Election) ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ. ಆದರೆ ಈ ರೀತಿಯ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವಂತಹ ಕಾರ್ಯಕ್ರಮ ಬಹುಷಃ ಇನ್ನೂ ಐವತ್ತು ವರ್ಷವಾದರೂ ಯಾರೂ ಆ ಮಟ್ಟಕ್ಕೆ ತಲುಪಲು ಆಗುವುದಿಲ್ಲ. ಅಷ್ಟು ಕೆಲಸವನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಚಿವ ಮುನಿರತ್ನ (Munirathna) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ (Bengaluru) ಅಂಜನಾ ನಗರದಲ್ಲಿರುವ ಎಸ್‌ಟಿ ಸೋಮಶೇಖರ್ (S.T.Somashekar) ಅವರ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪ್ರಧಾನ ಮಂತ್ರಿಗಳು ಶನಿವಾರ 9 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ರೋಡ್ ಶೋ ನಡೆಸಲಿದ್ದಾರೆ. ಅದರಲ್ಲಿ ಬಹಳ ಪ್ರಮುಖವಾಗಿ ಯಶವಂತಪುರ, ರಾಜರಾಜೇಶ್ವರಿ, ಮಹಾಲಕ್ಷ್ಮಿಪುರಂ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನತೆಗೆ ನಮ್ಮ ಮೆಟ್ರೋ ಮೂಲಕ ಪ್ರಧಾನಿ ಮೋದಿಯವರು ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಹೆಚ್.ವಿಶ್ವನಾಥ್
Advertisement
Advertisement
ಶನಿವಾರ ರೋಡ್ ಶೋ (Road Show) ಮಾಡುತ್ತಿರುವ ಭಾಗದಲ್ಲಿ ಮೆಟ್ರೋಗೆ ಅನುಮೋದನೆ ನೀಡುತ್ತಿದ್ದಾರೆ. ಸುಂಕದಕಟ್ಟೆಯಿಂದ ನೈಸ್ ರಿಂಗ್ ರಸ್ತೆವರೆಗೂ 11 ಕಿಲೋಮೀಟರ್ ಈಗಾಗಲೇ ಮೆಟ್ರೋ ಟಿಪಿಆರ್ ಅನುಮೋದನೆಯಾಗಿದೆ. ಇಂದು ಅದೇ ಭಾಗದಲ್ಲಿ ಮೋದಿ ರೋಡ್ ಶೋ ಮಾಡುತ್ತಿದ್ದಾರೆ. ಬಹಳ ಪ್ರಮುಖವಾಗಿ ಬಡವರು, ಮಧ್ಯಮ ವರ್ಗ ಹಾಗೂ ಕಾರ್ಖಾನೆಗಳಿರುವಂತಹ ಪಶ್ಚಿಮ ಭಾಗಕ್ಕೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಇಲ್ಲಿಯವರೆಗೂ ಪೂರ್ವ ಭಾಗಕ್ಕೆ ಅತಿಹೆಚ್ಚು ಮೆಟ್ರೋ ಸೇವೆಗಳಿದ್ದವು. ಈ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಅನುಕೂಲ ಮಾಡಿಕೊಟ್ಟಂತಹ ಮೋದಿಯವರು (Narendra Modi) ಆಗಮಿಸುತ್ತಿರುವುದು ಬಹಳ ಸಂತೋಷದ ವಿಚಾರ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಕಾಳಿಂಗ ಸರ್ಪ – ಸುಧಾಕರ್
Advertisement
ಪ್ರಧಾನ ಮಂತ್ರಿಗಳು ಇವತ್ತು ಬರುತ್ತಿರುವುದರಿಂದ 4 ವಿಧಾನಸಭಾ ಕ್ಷೇತ್ರದ ಎಲ್ಲಾ ಮತದಾರರಿಗೆ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳನ್ನು ನೋಡುವ ಭಾಗ್ಯ ಎಲ್ಲರಿಗೂ ಸಿಕ್ಕಿದೆ. ಈ ರೋಡ್ ಶೋ ಅನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಸಾಮಾನ್ಯವಾಗಿ ಪ್ರಧಾನ ಮಂತ್ರಿಗಳನ್ನು ನೋಡುವುದು ಕಷ್ಟ. ಇವತ್ತು ಸಾಮಾನ್ಯ ವ್ಯಕ್ತಿ ಕೂಡಾ ಪ್ರಧಾನ ಮಂತ್ರಿಯವರನ್ನು ನೋಡಬಹುದು. ನಮ್ಮ ದೇಶ ಬಹಳ ಮುಂದುವರೆಯುತ್ತಿದೆ. ತಾವೆಲ್ಲರೂ ಬಿಜೆಪಿಗೆ (BJP) ಬೆಂಬಲ ಕೊಟ್ಟು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪರಮೇಶ್ವರ್ ಮೇಲೆ ಕಲ್ಲು ತೂರಾಟ ಖಂಡನೀಯ: ಯಡಿಯೂರಪ್ಪ ಕಿಡಿ
Advertisement
ಬಳಿಕ ಮಾತನಾಡಿದ ಎಸ್‌ಟಿ ಸೋಮಶೇಖರ್, ಬೆಂಗಳೂರು ಜನತೆಯ ಪರವಾಗಿ ಪ್ರಧಾನಿ ಮೋದಿಯವರಿಗೆ ಸ್ವಾಗತವನ್ನು ಕೋರುತ್ತೇವೆ. ಶನಿವಾರ 6 ಗಂಟೆ 14 ನಿಮಿಷಕ್ಕೆ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ. ಇದರಲ್ಲಿ 9 ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಅಲ್ಲದೇ ನಾಲ್ಕು ವಿಧಾನ ಸಭಾ ಕ್ಷೇತ್ರಗಳು ಈ ರೋಡ್ ಶೋಗೆ ಬರಲಿದೆ. ಮೋದಿ ಎರಡನೇ ಬಾರಿಗೆ ನಮ್ಮ ಕ್ಷೇತ್ರದ ಕಡೆಗೆ ಬರುತ್ತಿದ್ದಾರೆ. ಶನಿವಾರ ನಡೆಯಲಿರುವ ರೋಡ್ ಶೋದಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ವಿಶ್ವವಿಖ್ಯಾತ ಪ್ರಧಾನಿಯನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಎಲ್ಲರಿಗೂ ದೊರತಿದೆ. ಪ್ರಧಾನಿ ಒಮ್ಮೆ ಬಂದು ಹೋದರೆ ನಾವು ಯಾರೂ ಕೂಡಾ ಪ್ರಚಾರ ಮಾಡದೇ ಹೋದರೂ ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ಅರ್ಧಕ್ಕೆ ರೋಡ್ ಶೋ ಮುಗಿಸಿ ಹೊರಟ ಅಮಿತ್ ಶಾ
ನಂತರ ಮಾನಾಡಿದ ಸಚಿವ ಗೋಪಾಲಯ್ಯ (K.Gopalaiah), ವಿಶ್ವನಾಯಕ ಪ್ರಧಾನಿಯನ್ನು ನಾನು ಸಂತೋಷವಾಗಿ ಸ್ವಾಗತ ಮಾಡುತ್ತೇನೆ. ಪ್ರಧಾನಿ ಒಂದು ಸ್ಥಳಕ್ಕೆ ಬಂದು ಹೋದರೆ ಅಭಿವೃದ್ಧಿ ಮಾಡುತ್ತಾರೆ. ಥರ್ಡ್ ಪೇಸ್ ಮೆಟ್ರೋಗೆ ಮೋದಿ ಅನುಮೋದನೆ ಕೊಟ್ಟಿದ್ದಾರೆ. ಅಲ್ಲದೇ 142 ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಡುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಹೇಳಿಕೊಟ್ಟಂತೆ ಖರ್ಗೆ ಮಾತಾಡಿದ್ದಾರೆ: ಜೆ.ಪಿ ನಡ್ಡಾ