ಮೈಸೂರು: ಇತ್ತೀಚಿನ ಕೆಲ ದಿನಗಳವರೆಗೂ ಮೈಸೂರನ್ನು (Mysuru) ನಿವೃತ್ತರ ಸ್ವರ್ಗ ಎಂದು ಕರೆಯಲಾಗುತ್ತಿತ್ತು. ಈಗ ಆ ಮಾತು ಬದಲಾಗಿದೆ ಬಿಡಿ. ಇಂತಹ ಮೈಸೂರಿನಲ್ಲಿ ಅದರಲ್ಲೂ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಹಲವು ನಿವೃತ್ತ ಅಧಿಕಾರಿಗಳಲ್ಲಿ ಒಬ್ಬರೇ ಒಬ್ಬರಿಗೆ ಮಾತ್ರ ಜಯ ಸಿಕ್ಕಿದೆ. ಉಳಿದಂತೆ ಎಲ್ಲರೂ ಸೋತಿದ್ದಾರೆ.
ಹಲವು ನಿವೃತ್ತ ಅಧಿಕಾರಿಗಳು ಚುನಾವಣಾ ರಾಜಕೀಯಕ್ಕೆ ಬಂದಿದ್ದಾರೆ. ಆದರೆ ಮತದಾರ ಕೈ ಹಿಡಿದಿದ್ದು ಡಿ.ಟಿ ಜಯಕುಮಾರ್ ಅವರನ್ನ ಮಾತ್ರ. ಪೋಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಡಿ.ಟಿ ಜಯಕುಮಾರ್ (TD Jayakumar) ಎಸ್‌ಐ ಹುದ್ದೆಗೆ ರಾಜೀನಾಮೆ ನೀಡಿ, 1978 ರಲ್ಲಿ ಪ್ರಥಮ ಬಾರಿಗೆ ನಂಜನಗೂಡಿನಿಂದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ನಂತರ 1985 ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಇದನ್ನೂ ಓದಿ: ಭಾರತದಲ್ಲಿ ಮುಸ್ಲಿಮರನ್ನ ಟಾರ್ಗೆಟ್ ಮಾಡಿ ಹಿಂಸಾಚಾರ – ಇಸ್ಲಾಮಿಕ್ ರಾಷ್ಟ್ರಗಳ ಆರೋಪಕ್ಕೆ ಭಾರತ ಕಿಡಿ
Advertisement
Advertisement
1989 ರಲ್ಲಿ ಕಾಂಗ್ರೆಸ್‌ನ ಎಂ.ಮಹದೇವ್ ಎದುರು ಸೋತರು. 1994 ರಲ್ಲಿ ಜನತಾದಳ ಟಿಕೆಟ್ ಮೇಲೆ ಜಯಕುಮಾರ್ 2ನೇ ಬಾರಿಗೆ ಗೆದ್ದು, ತೋಟಗಾರಿಕೆ ಸಚಿವರಾದರು. 1999 ರಲ್ಲಿ ಮತ್ತೆ ಎಂ. ಮಹದೇವ್ ಅವರ ಎದುರು ಸ್ಪರ್ಧಿಸಿ ಸೋತರು. 2004 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ 3ನೇ ಬಾರಿಗೆ ಗೆದ್ದ ಜಯಕುಮಾರ್ ಅವರು ಧರಂಸಿಂಗ್, ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿ, ಉಡುಪಿ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಇದನ್ನೂ ಓದಿ: ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ – ಪರಾರಿಯಾಗಿದ್ದ ಆರೋಪಿ ಅರೆಸ್ಟ್
Advertisement
Advertisement
1989 ರಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ಮೈಸೂರು ರಾಜ್ಯದ ನಿವೃತ್ತ ಐಜಿಪಿ (ಈಗಿನ ಐಜಿಪಿ ಮತ್ತು ಡಿಜಿಪಿ ಹುದ್ದೆಗೆ ಸರಿಸಮಾನಾದ ಹುದ್ದೆ) ಹೆಚ್. ವೀರಭದ್ರಯ್ಯ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, 3ನೇ ಸ್ಥಾನ ಗಳಿಸಿದ್ದರು. ಇದಾದ ನಂತರ ವೀರಭದ್ರಯ್ಯ ಅವರ ಅಳಿಯ ಹಾಗೂ ನಿವೃತ್ತ ಡಿಜಿಪಿ ಎಲ್. ರೇವಣಸಿದ್ದಯ್ಯ (L. Revannasiddaiah) ಅವರು 2004 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಗಿನ ಜೆಡಿಎಸ್ ಅಭ್ಯರ್ಥಿ ಸಿದ್ದರಾಮಯ್ಯ ಎದುರು ಸೋತರು. ನಂತರ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿದ್ದರಿಂದ ತಮಗೆ ಚಾಮುಂಡೇಶ್ವರಿಯಲ್ಲಿ ಟಿಕೆಟ್ ಸಿಗಲಾರದು ಎಂದು ಭಾವಿಸಿದ ರೇವಣಸಿದ್ದಯ್ಯ ಬಿಜೆಪಿ ಸೇರಿದರು. 2008 ರಲ್ಲಿ ಹೊಸದಾಗಿ ರಚಿತವಾದ ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದರು. ಸಿದ್ದರಾಮಯ್ಯ ಅವರು ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರಿಂದ ರೇವಣ್ಣಸಿದ್ದಯ್ಯಗೆ ಸೋಲಾಯಿತು.
ನಿವೃತ್ತ ಎಡಿಜಿಪಿ ಡಾ. ಸುಭಾಷ್ ಭರಣಿ 2008ರ ಚುನಾವಣೆಯಲ್ಲಿ ಟಿ. ನರಸೀಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನ ಡಾ.ಹೆಚ್.ಸಿ ಮಹದೇವಪ್ಪ ಅವರ ಎದುರು ಸೋತರು. ನಂತರ 2009 ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿ, ಬಿಜೆಪಿಯ ಜಿ.ಎನ್. ನಂಜುಂಡಸ್ವಾಮಿ ಎದುರು ಸೋತರು.
ಮೈಸೂರು ದೇವರಾಜ ಉಪವಿಭಾಗದ ಎಸಿಪಿಯಾಗಿದ್ದ ಚೆಲುವರಾಜು ಸ್ವಯಂ ನಿವೃತ್ತಿ ಪಡೆದು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಎದುರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೂ ಚುನಾವಣೆಗೂ ಮೊದಲೇ ಪ್ರಚಾರದಿಂದ ನಾಪತ್ತೆಯಾಗಿ ಸುದ್ದಿಯಾದರು. ನಿವೃತ್ತ ಅಧಿಕಾರಿ ಎಚ್.ವಿ. ಕೃಷ್ಣಸ್ವಾಮಿ 2008 ರಲ್ಲಿ ವರುಣದಲ್ಲಿ ಜೆಡಿಎಸ್, 2013 ರಲ್ಲಿ ಎಚ್ ಡಿ. ಕೋಟೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸೋತರು.
ಈವರೆಗೆ ಲೋಕಸಭಾ ಚುನಾವಣೆಗೆ ನಿವೃತ್ತ ಅಧಿಕಾರಿಗಳು ಸ್ಪರ್ಧಿಸಿರಲಿಲ್ಲ. ಆದರೆ 2014ರಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಅದೇ ರೀತಿ ಬ್ಯಾಂಕಿನ ನಿವೃತ್ತ ಅಧಿಕಾರಿ ಎಂ.ಪಿ ಪದ್ಮಮ್ಮ ಅವರು ಎಎಪಿ ಅಭ್ಯರ್ಥಿಯಾಗಿದ್ದರು.