ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕನಕಪುರ (Kanakapur) ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದೆ.
ಡಿಕೆ ಶಿವಕುಮಾರ್ ಕಾಂಗ್ರೆಸ್‌ನಿಂದ (Congress) ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರವನ್ನು ಸಲ್ಲಿಸಿದ್ದರು. ಆದರೆ ಆದಾಯ ತೆರಿಗೆ ನೋಟಿಸ್ ಹಿನ್ನೆಲೆ ಅವರ ನಾಮಪತ್ರ ತಿರಸ್ಕೃತವಾಗುತ್ತದೆ ಎಂಬ ಭೀತಿಯಿತ್ತು. ಹೀಗಾಗಿ ಅವರ ಸಹೋದ ಡಿಕೆ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದರು. ಇದೀಗ ಡಿಕೆಶಿ ನಾಮಪತ್ರ ಸ್ವೀಕೃತವಾಗಿದ್ದು, ದೊಡ್ಡ ತಲೆನೋವು ಕಳೆದಂತಾಗಿದೆ.
Advertisement
Advertisement
ಕೆಪಿಸಿಸಿ ಅಧ್ಯಕ್ಷರ ನಾಮಪತ್ರವನ್ನು ಚುನಾವಣಾಧಿಕಾರಿ ಸಂತೋಷ್ ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ. ಅಫಿಡವಿಟ್ ಸೇರಿ ಇನ್ನಿತರ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ. ಡಿಕೆಶಿ 4 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದು, ಎಲ್ಲಾ ನಾಮಪತ್ರಗಳನ್ನೂ ಸ್ವೀಕೃತಗೊಳಿಸಲಾಗಿದೆ. ಇದನ್ನೂ ಓದಿ: ಚುನಾವಣಾ ಕಣಕ್ಕಿಳಿಯಲು ನಕಲಿ ಜಾತಿ ಪ್ರಮಾಣ ಪತ್ರ – ಸರ್ಟಿಫಿಕೇಟ್ ರದ್ದು ಪಡಿಸಿದ ಡಿಸಿ
Advertisement
Advertisement
ಡಿಕೆಶಿಯ ನಾಮಪತ್ರ ಸ್ವೀಕೃತಗೊಂಡ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ನಾಮಪತ್ರ ಹಿಂದಕ್ಕೆ ಪಡೆಯಲಿದ್ದು ಯಾವಗಾ ಹಿಂದಕ್ಕೆ ಪಡೆಯುತ್ತಾರೆ ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಶನಿವಾರದ ಒಳಗಡೆ ಸರ್ಕಾರಿ ಬಂಗಲೆ ತೊರೆಯಲಿದ್ದಾರೆ ರಾಹುಲ್ ಗಾಂಧಿ