ಧಾರವಾಡ: ರಾಜಕೀಯದ ನಂತರ ಜಗದೀಶ್ ಶೆಟ್ಟರ್ (Jagadish Shettar) ಕಾರ್ಯಕರ್ತರ ಜೊತೆ ಸೇರಿ ಬಿಜೆಪಿ (BJP) ಪಕ್ಷ ಇನ್ನಷ್ಟು ಬಲಪಡಿಸುವ ಕೆಲಸ ಮಾಡುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರ ರಾಜೀನಾಮೆ (Resignation) ಪಕ್ಷಕ್ಕೆ ಬಹಳ ದುಃಖದ ಸಂಗತಿ. ಹಾಗೆಂದು ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ್ (Arvind Bellad) ಹೇಳಿದ್ದಾರೆ.
ಧಾರವಾಡದಲ್ಲಿ (Dharwad) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿಯ ಹಿರಿಯ ನಾಯಕರಾಗಿದ್ದರು. ವಕೀಲರಾಗಿದ್ದ ಅವರಿಗೆ ಬಿಜೆಪಿ ಪಕ್ಷ ಕರೆದು ಟಿಕೆಟ್ ನೀಡಿ, ಶಾಸಕರನ್ನಾಗಿ ಮಾಡಿತ್ತು. ಜೊತೆಗೆ ಮುಖ್ಯಮಂತ್ರಿಯನ್ನಾಗಿಯೂ ಮಾಡಿತ್ತು. ಆದರೆ ಅವರು ಬಿಜೆಪಿ ತೊರೆದು ಕಾಂಗ್ರೆಸ್ (Congress) ಪಕ್ಷ ಸೇರುತ್ತಿರುವುದರಿಂದ ನಮಗೆ ಬಹಳ ನೋವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಕ್ಕರೆ ನಾಡು ಮೀಸಲು ಕ್ಷೇತ್ರದಲ್ಲಿ ಕೈ, ಕಮಲ, ತೆನೆ ಪೈಪೋಟಿ
Advertisement
Advertisement
ನರೇಂದ್ರ ಮೋದಿಯವರ (Narendra Modi) ಸರ್ಕಾರ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎನ್ನುವ ರೀತಿಯಲ್ಲಿ ಹೊರಟಿದೆ. ಜಗದೀಶ ಶೆಟ್ಟರ್ ಸಾಮಾನ್ಯ ಕಾರ್ಯಕರ್ತನಾಗಿ ಜೀವನ ಆರಂಭ ಮಾಡಿದರು. ಅಂತಹ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು ಬಿಜೆಪಿ. ಎಲ್ಲಾ ಸ್ಥಾನಮಾನಗಳನ್ನು ಅಲಂಕರಿಸಿ ಈಗ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇದು ನಮ್ಮೆಲ್ಲಾ ಕಾರ್ಯಕರ್ತರಿಗೆ ಬಹಳ ನೋವು ತಂದಿದೆ ಎಂದರು. ಇದನ್ನೂ ಓದಿ: ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆದ್ರೂ ಖಾಲಿ ಸ್ಥಾನ ತುಂಬಲು ಪ್ರಯತ್ನಿಸುತ್ತೇವೆ: ಬೊಮ್ಮಾಯಿ
Advertisement
ಬಿಜೆಪಿ ಪಕ್ಷ ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹಿರಿಯರೊಬ್ಬರು ಮನೆ ತೊರೆದಿದ್ದಕ್ಕೆ ಬೇಜಾರಾಗಿದೆ. ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತೇವೆ ಎಂದರೂ ಶೆಟ್ಟರ್ ಕೇಳಲಿಲ್ಲ. ಲಿಂಗಾಯತರನ್ನು ಸಿಎಂ ಮಾಡಿದ್ದೇ ಬಿಜೆಪಿ ಪಕ್ಷ. ಬಿಜೆಪಿ 67 ಸೀಟುಗಳನ್ನು ಲಿಂಗಾಯತರಿಗೆ ಕೊಟ್ಟಿದೆ. ಲಿಂಗಾಯತರಿಗೆ ಮಾನ್ಯತೆ ಕೊಟ್ಟಿದ್ದು ಯಾವ ಪಕ್ಷ ಎಂಬುದು ಜನರಿಗೆ ಗೊತ್ತಿದೆ. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇ ಆದಲ್ಲಿ ಅವರನ್ನು ಮೂಲೆಗುಂಪು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಜನರ ಹಣ ಕದ್ದಿದೆ: ರಾಗಾ ಆರೋಪ
Advertisement
ನಮ್ಮ ಪಕ್ಷದ ವರಿಷ್ಠರು ಶೆಟ್ಟರ್ ಅವರೊಂದಿಗೆ ಚರ್ಚೆ ಮಾಡಿದ್ದರು. ಈ ಬಾರಿ ಬಿಜೆಪಿ ಸರ್ಕಾರದಲ್ಲಿ ಕಿರಿಯ ವಯಸ್ಸಿನವರು ಮುಖ್ಯಮಂತ್ರಿಯಾಗಲಿದ್ದಾರೆ. ಅವರ ಸಚಿವ ಸಂಪುಟದಲ್ಲಿ ನೀವು ಸಚಿವರಾಗಿರುವುದು ಅಷ್ಟೊಂದು ಸರಿಯಲ್ಲ ಎಂದು ಹೇಳಿದ್ದರು. ಆದರೂ ಶೆಟ್ಟರ್ ಸಮ್ಮತಿ ಸೂಚಿಸಲಿಲ್ಲ ಎಂದರು. ಇದನ್ನೂ ಓದಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ
ಈ ಬಾರಿ ಚಿಕ್ಕ ವಯಸ್ಸಿನವರು ಬಿಜೆಪಿಯಲ್ಲಿ ಸಿಎಂ ಆಗಬಹುದು. ಲಿಂಗಾಯತ ಸಮುದಾಯದ ಚಿಕ್ಕ ವಯಸ್ಸಿನವರೇ ಸಿಎಂ ಆಗಲಿದ್ದಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟಿರುವ ಅವರು, ಈ ಬಾರಿ ಬೊಮ್ಮಾಯಿ ಸಿಎಂ ಆಗಿ ಮುಂದುವರೆಯುವುದಿಲ್ಲ. ಬದಲಿಗೆ ಲಿಂಗಾಯತ ಸಮುದಾಯದ ಚಿಕ್ಕ ವಯಸ್ಸಿನವರೇ ಸಿಎಂ ಆಗಲಿದ್ದಾರೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!