Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ? – ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ? – ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ

Bengaluru City

ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ? – ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ

Public TV
Last updated: April 27, 2023 11:33 am
Public TV
Share
4 Min Read
Narendra Modi 4
SHARE

– ಕಾರ್ಯಕರ್ತರ ಪ್ರಶ್ನೆಗಳಿಗೆ ಮೋದಿ ಉತ್ತರ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆ ಬಿಜೆಪಿ (BJP) ಪಕ್ಷದ ಬರೋಬ್ಬರಿ 50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ವರ್ಚುವಲ್ ಸಭೆ ನಡೆಸಿದ್ದಾರೆ. ಈ ಮೂಲಕ ತಮ್ಮ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಲು ಬಿಜೆಪಿ ಪ್ಲಾನ್ ಮಾಡಿದೆ.

50 ಲಕ್ಷ ಕಾರ್ಯಕರ್ತರ ಸಮ್ಮುಖದಲ್ಲಿ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಮೋದಿ, ಕರ್ನಾಟಕದಲ್ಲಿ ಲೋಕತಂತ್ರದ ಉತ್ಸವ ನಡೆಯುತ್ತಿದೆ. ಬಿಜೆಪಿ ಸದಾ ಚುನಾವಣೆಗಳನ್ನು ಲೋಕ ತಂತ್ರದ ಮಹೋತ್ಸವದಂತೆ ಆಚರಿಸುತ್ತದೆ. ರಾಜ್ಯದ ಸಮೃದ್ಧ ಪರಂಪರೆಯ ಪ್ರತಿನಿಧಿಗಳಾಗಿದ್ದಾರೆ. ನಮ್ಮ ಕಾರ್ಯಕರ್ತರು ಬಿಜೆಪಿಯನ್ನು ದಾಖಲೆಯ ಸ್ಥಾನಗಳಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ನುಡಿದರು.

2 ದಿನಗಳ ನಂತರ ನಾನೂ ಕಾರ್ಯಕರ್ತರ ನಡುವೆ ರಾಜ್ಯದ ಜನರ ದರ್ಶನಕ್ಕೆ, ಆಶೀರ್ವಾದಕ್ಕೆ ಬರುತ್ತಿದ್ದೇನೆ. ರಾಜ್ಯದಲ್ಲಿ ಎಲ್ಲೇ ಹೋದರೂ ಅಲ್ಲಿನ ಜನ ಹೃದಯ ಪೂರ್ವಕ ಆಶೀರ್ವಾದ ಮಾಡಿದ್ದಾರೆ. ಕರ್ನಾಟಕದ ಜನರ ವಿಶ್ವಾಸ ಬಿಜೆಪಿ ಮೇಲೆ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ರಾಜ್ಯ ಬಿಜೆಪಿ ಘಟಕ ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದು ಹಾಡಿ ಹೊಗಳಿದರು.

Narendra Modi 5

ಕಾರ್ಯಕರ್ತರ ಪ್ರಶ್ನೆಗಳಿಗೆ ಮೋದಿ ಉತ್ತರ:
ಶಿವಮೊಗ್ಗದ ವಿರೂಪಾಕ್ಷಪ್ಪ ಅವರ ಕಾರ್ಯಕರ್ತರಿಗೆ ನಿಮ್ಮ ಸಲಹೆಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ತಲಾ 10 ಮಹಿಳೆಯರು, 20 ಪುರುಷರ ತಂಡ ರಚಿಸಿ ಬೂತ್ ಮಟ್ಟದಲ್ಲಿ ಡಬಲ್ ಎಂಜಿನ್ ಸರ್ಕಾರದ ಸಾಧನೆ ತಿಳಿಸಿ. ಜನರ ಜೊತೆ ಒಡನಾಡಿಯಾಗಿ, ಕಷ್ಟ ಸುಖ ಕೇಳಿ, ಆತ್ಮೀಯವಾಗಿ ಮಾತನಾಡಿಸಿ. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳಿಸಿ. ಅದರ ಫಲ ಸಿಕ್ಕಿದೆಯಾ ಅಂತ ಅಭಿಪ್ರಾಯ ಕೇಳಿ. ಬಿಜೆಪಿಗೆ ಮತ ಹಾಕುವಂತೆ ಪ್ರೇರೇಪಿಸಿ. ವಿರೋಧ ಪಕ್ಷದವರ ಅಜೆಂಡಾ ಅರ್ಥ ಮಾಡಿಕೊಂಡು ಕೆಲಸ ಮಾಡಿ. ಪೂರ್ಣಬಹುಮತ ಬಗ್ಗೆ ಜನರನ್ನು ಮನವರಿಕೆ ಮಾಡಿಸಿ. ಒಂದೇ ಸರ್ಕಾರದ ಮಹತ್ವ ಬಗ್ಗೆ ಅರ್ಥ ಮಾಡಿಸಿ ಎಂದು ಹೇಳಿದರು.

ಮೊಳಕಾಲ್ಮೂರು ಕಾರ್ಯಕರ್ತ ಫಕೀರಪ್ಪ ಅವರ ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಗಳೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಎರಡೂ ಕಡೆ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಕಿಸಾನ್ ಸಮ್ಮಾನ್ ನಿಧಿಯಡಿ ಡಬಲ್ ಎಂಜಿನ್ ಸರ್ಕಾರಗಳಿಂದ ನೆರವು ಸಿಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಆರ್ಥಿಕ ನೆರವು ಕೊಡುತ್ತಿವೆ. ಒಂದು ವೇಳೆ ಇಲ್ಲಿ ಪಕ್ಷದ ಬೇರೆ ಸರ್ಕಾರ ಬಂದರೆ ಸದಾ ಜಗಳ ಆಡುತ್ತದೆ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ತಿಳಿಸಿದರು.

Narendra Modi 1 1

ಟ್ರ‍್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದರೆ ಆ ಟ್ರ್ಯಾಕ್ಟರ್ ಸರಿಯಾಗಿ ಓಡುತ್ತಾ? ಇಲ್ಲ. ಒಂದೇ ತರಹದ ಚಕ್ರ ಇದ್ದರೆ ಮಾತ್ರ ಓಡುತ್ತದೆ. ಹಾಗೇಯೇ ಡಬಲ್ ಎಂಜಿನ್ ಸರ್ಕಾರ ಕೂಡಾ. ವಿಕಾಸದ ವೇಗ ಡಬಲ್ ಎಂಜಿನ್ ಸರ್ಕಾರದಲ್ಲಿ ಹೆಚ್ಚಾಗಿರುತ್ತದೆ ಎಂದು ಬಿಡಿಸಿ ಹೇಳಿದರು.

ಬಿಜೆಪಿ ಯುವ ತಂಡ ರಚನೆಗೆ ಪ್ರಯತ್ನ ಮಾಡುತ್ತಿದೆ. ಕರ್ನಾಟಕಕ್ಕೆ, ಬೆಂಗಳೂರಿಗೆ ವಿಶ್ವದಲ್ಲಿ ಉತ್ತಮ ಹೆಸರಿದೆ. 2014 ರವರೆಗೆ ಏಮ್ಸ್ ಸಂಸ್ಥೆಗಳ ಸಂಖ್ಯೆ 7 ಇದ್ದವು. ನಾವು ಬಂದ ಮೇಲೆ 3 ಪಟ್ಟು ಏಮ್ಸ್ ಸಂಸ್ಥೆಗಳ ನಿರ್ಮಾಣ ಆಗಿದೆ. ಈಗ 20 ಏಮ್ಸ್ ಸಂಸ್ಥೆಗಳು ಇವೆ. ಆಗ ಫಲಾನುಭವಿಗಳ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ನಾವು ಫಲಾನುಭವಿಗಳ ಇಚ್ಚೆಗನುಸಾರ ಮನೆ ಕಟ್ಟಿಸಿಕೊಡುತ್ತಿದ್ದೇವೆ. ನೀರು, ವಿದ್ಯುತ್, ಅಡುಗೆ ಅನಿಲ ಎಲ್ಲವೂ ಸಿಗುತ್ತಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಮೊದಲಿಗಿಂತ ಈಗ ಹೆಚ್ಚು ಸುಧಾರಣೆ ಆಗಿದೆ. ಕಾಂಗ್ರೆಸ್ ಖುದ್ದು ಭ್ರಷ್ಟಾಚಾರಿ ಪಕ್ಷ. 2014ರ ಬಳಿಕ ಭ್ರಷ್ಟಾಚಾರ ನಿಯಂತ್ರಣದಲ್ಲಿ ವೇಗ ವೃದ್ಧಿಸಿದೆ ಎಂದು ಹೇಳಿದರು.

ವಿಜಯನಗರ ಕಾರ್ಯಕರ್ತ ಚಂದ್ರಶೇಖರ್ ಪ್ರಶ್ನೆಗೆ ಉತ್ತರಿಸಿದ ಮೋದಿ, ಇತಿಹಾಸ, ಸಂಸ್ಕೃತಿ, ಆಧ್ಯಾತ್ಮಿಕತೆ, ಆಚಾರ ವಿಚಾರಗಳಲ್ಲಿ ಕರ್ನಾಟಕ ಸಮೃದ್ಧವಾಗಿದೆ. ಕರ್ನಾಟಕದ ಜನ ಭಕ್ತಿಯ ಶಕ್ತಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕೃತಿ ಓದುವ ಪಾಲಿಸುವ ಸಂಸ್ಕೃತಿ ಇಲ್ಲಿದೆ. ಕರ್ನಾಟಕದ ಜನ ತಂತ್ರಜ್ಞಾನದ ಕೋಡಿಂಗ್ ಸಹ ಮಾಡುತ್ತಾರೆ, ಕುವೆಂಪು ಸಾಹಿತ್ಯವನ್ನೂ ಓದುತ್ತಾರೆ ಎಂದರು.

ದಕ್ಷಿಣ ಕನ್ನಡದ ಅರುಣ್ ಸೇಠ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ದೇಶದ ಭವಿಷ್ಯ, ಮುಂದಿನ ಪೀಳಿಗೆಗೆ ಮಾರಕ. ರಾಜನೀತಿಯನ್ನು ಕೆಲವರು ಭ್ರಷ್ಟಾಚಾರದ ಮಾರ್ಗ ಮಾಡಿಕೊಂಡಿದ್ದಾರೆ. ಉಚಿತ ಯೋಜನೆಗಳ ರಾಜಕಾರಣ ಭ್ರಷ್ಟಾಚಾರಕ್ಕೆ ದಾರಿಯಾಗಿದೆ. ಉಚಿತ ಯೋಜನೆಗಳ ಮೂಲಕ ದೇಶ, ಯುವ ಸಮೂಹದ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ಅವರಿಗೆ ಉಚಿತ ಘೋಷಣೆಗಳಿಂದ ಸರ್ಕಾರ ನಡೆಯಲ್ಲ ಎಂದರು.

ಬಿಜೆಪಿ ಈ ರೀತಿ ಶಾರ್ಟ್ ಕಟ್ ದಾರಿಯಲ್ಲಿ ಸಾಗಲ್ಲ. ನಮಗೆ ದೇಶದ ಭವಿಷ್ಯ ಬೇಕು. ನಾವು 5 ವರ್ಷ ಅಷ್ಟೇ ಆಡಳಿತ ಗುರಿ ಇಟ್ಟುಕೊಂಡಿಲ್ಲ. ನಮ್ಮ ಕನಸು ದೇಶದ ಭವಿಷ್ಯ ಉತ್ತಮ, ಸುರಕ್ಷೆಯಾಗಿಡುವುದು. ಮುಂದಿನ 25 ವರ್ಷ ದೇಶದ ಚಿತ್ರಣ ಬದಲಾಗಲಿದೆ ಎಂದು ಕಾಂಗ್ರೆಸ್‌ನ ಉಚಿತ ಯೋಜನೆಗಳಿಗೆ ಮೋದಿ ಕೌಂಟರ್ ನೀಡಿದರು. ಇದನ್ನೂ ಓದಿ: ಮಾವನ ಪರ ಪ್ರಚಾರಕ್ಕೆ ಧುಮುಕಿದ ಸಿದ್ದು ಸೊಸೆ

ಕಳೆದ 25 ವರ್ಷದಲ್ಲೇ ಮೆಡಿಕಲ್, ನರ್ಸಿಂಗ್ ಕಾಲೇಜುಗಳನ್ನು ನಿರ್ಮಿಸಿದ್ದರೆ ನಮಗೆ ಈಗ ವೈದ್ಯರ, ವೈದ್ಯ ಸಿಬ್ಬಂದಿಯ ಕೊರತೆ ಕಾಣಿಸುತ್ತಿರಲಿಲ್ಲ. ಉಚಿತ ಘೋಷಣೆಗಳ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ಎಂದರೆ ಸುಳ್ಳಿನ ಗ್ಯಾರಂಟಿ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗ್ಯಾರಂಟಿ. ಕಾಂಗ್ರೆಸ್ ವಾರಂಟಿ ಈ ಮೊದಲೇ ಮುಗಿದಿದೆ. ವಾರಂಟಿಯೇ ಇಲ್ಲದ ಪಕ್ಷದ ಗ್ಯಾರಂಟಿ ಏನು? ಎಂದು ಲೇವಡಿ ಮಾಡಿದರು.

ಬೆಂಗಳೂರಿನ ಕಾರ್ಯಕರ್ತ ಯೋಗೇಶ್ ಅವರ ಆಜಾದಿ ಕಾ ಅಮೃತ ಕಾಲ ಅಂದರೇನು ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿ ಶುರುಮಾಡಿದರು. ನಂತರ 1947 ರಲ್ಲಿ ನಮಗೆ ಸ್ವಾತಂತ್ರ÷್ಯ ಸಿಕ್ಕಿತು. ಅದೇ ಪ್ರೇರಣೆಯಿಂದ ನಾವು ಆಜಾದಿ ಕಾ ಅಮೃತ ಮಹೋತ್ಸವ ಮಾಡುತ್ತಿದ್ದೇವೆ. ಅಭಿವೃದ್ಧಿ ಹೊಂದಿದ ಭಾರತ ರೂಪಿಸುವ ಖಾತ್ರಿ ಕೊಡುತ್ತೇವೆ ಎಂದರು.

ಡಬಲ್ ಎಂಜಿನ್ ಸರ್ಕಾರ ಮತ್ತೆ ಬರಬೇಕು. ಬಹುಮತದ ಸರ್ಕಾರ ಕರ್ನಾಟಕದಲ್ಲಿ ಬರಬೇಕು. ಮುಂದಿನ 5 ವರ್ಷ ಸಶಕ್ತ ಕರ್ನಾಟಕ ಮಾಡುತ್ತೇವೆ. ಆದಿವಾಸಿ, ರೈತರು, ಎಲ್ಲ ದುರ್ಬಲ ವರ್ಗದವರೂ ಸಶಕ್ತರಾಗಬೇಕು. ಕರ್ನಾಟಕದ ವಿಕಾಸ ದೇಶದ ವಿಕಾಸ ಎಂದು ಮೋದಿ ನುಡಿದರು. ಇದನ್ನೂ ಓದಿ: 60 ವರ್ಷದಲ್ಲಿ ಪರಿಶಿಷ್ಟರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ: ಸುಧಾಕರ್ ಕಿಡಿ

TAGGED:Assembly ElectionsbjpDouble Engine Governmentkarnatakanarendra modiಕರ್ನಾಟಕಡಬಲ್ ಎಂಜಿನ್ ಸರ್ಕಾರನರೇಂದ್ರ ಮೋದಿಬಿಜೆಪಿವಿಧಾನಸಭಾ ಚುನಾವಣೆ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Punjab Kings
Cricket

ತವರಲ್ಲಿ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದ್ದ ಚೆನ್ನೈಗೆ ಮುಖಭಂಗ – ಪಂಜಾಬ್‌ಗೆ 5 ವಿಕೆಟ್‌ಗಳ ಜಯ

Public TV
By Public TV
5 hours ago
HE x TIaUAE4IKr
Bengaluru City

ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನ

Public TV
By Public TV
5 hours ago
Earthquake
Latest

ಅಫ್ಘಾನಿಸ್ತಾನದಲ್ಲಿ 5.9 ತೀವ್ರತೆಯ ಭೂಕಂಪ; ದೆಹಲಿ-ಎನ್‌ಸಿಆರ್‌ನಲ್ಲೂ ಕಂಪನದ ಅನುಭವ

Public TV
By Public TV
6 hours ago
AI Image
Latest

ಅಮೆರಿಕದ ಎಫ್-35 ಸೇರಿ ಜೆಟ್, ಕಾಪ್ಟರ್ ಉಡೀಸ್ – ಓರ್ವ ಪೈಲಟ್ ಸೆರೆ ಅಂತಿದೆ ಇರಾನ್

Public TV
By Public TV
6 hours ago
Shwetha
Crime

ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ನರ್ಸ್‌ ಆತ್ಮಹತ್ಯೆ – ನಾಲ್ವರು ಅರೆಸ್ಟ್‌

Public TV
By Public TV
7 hours ago
CRIME
Crime

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಚಾಕು ತೋರಿಸಿ ಮಹಿಳೆಯ ಅತ್ಯಾಚಾರ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?