ಯಾದಗಿರಿ: ಈಗ ಇರುವ ಬಿಜೆಪಿ ಶಾಸಕರಲ್ಲಿ ನಾಲ್ಕಾರು ಜನಕ್ಕೆ ಟಿಕೆಟ್ ಕಟ್ ಆಗಬಹುದು ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ವಿಪರೀತ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರು ಇದನ್ನು ಸಹಜವಾಗಿಯೇ ಹೇಳಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ (N Ravikumar) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು (BS Yediyurappa) ನಾಲ್ಕಾರು ಜನಕ್ಕೆ ಟಿಕೆಟ್ ಕಟ್ ಆಗಬಹುದು ಎಂದು ಹೇಳಿದ್ದಾರೆ. ಇಂಥವರಿಗೇ ಸೀಟ್ ಸಿಗುವುದಿಲ್ಲ ಎಂದು ಹೇಳಿಲ್ಲ. ಕೆಲವರು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಬಹುದು. ಹೀಗಾಗಿ ನಮ್ಮ ರಾಜ್ಯದಲ್ಲಿ ನಾಲ್ಕಾರು ಸೀಟ್ ಸಿಗದೇ ಇರಬಹುದು. ಅದರ ಅರ್ಥ ಅರ್ಧದಷ್ಟು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಅಲ್ಲ. ಈ ಬಗ್ಗೆ ನಮ್ಮ ಶಾಸಕರಿಗೆ ಯಾವುದೇ ಸಂದೇಹ ಬೇಡ. ಜನಾದೇಶ ಹೊಂದಿರುವ ಶಾಸಕರು ಯಾರೂ ಆತಂಕ ಪಡುವುದು ಬೇಡ ಎಂದರು.
Advertisement
Advertisement
ಕೆಲ ನಾಯಕರು ಬಿಜೆಪಿ (BJP) ಬಿಟ್ಟು ಕಾಂಗ್ರೆಸ್ (Congress) ಸೇರುತ್ತಾರೆ ಎಂಬ ಕೈ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾವ ನಾಯಕರು ಸೇರಲಿದ್ದಾರೆ ಎನ್ನುವುದನ್ನು ಕಾಂಗ್ರೆಸ್‌ನವ್ರು ಮೊದಲು ಹೇಳಲಿ. ಸಚಿವ ವಿ. ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತು ಸುಳ್ಳು. ಅವರು ಈಗಾಗಲೇ ಹಲವು ಕಡೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ರೋಡ್ ಶೋ ಮಾಡಿದ್ದಾರೆ. ಎಂದು ತಿಳಿಸಿದರು. ಇದನ್ನೂ ಓದಿ: ಸತತ 2ನೇ ಬಾರಿಗೆ ತ್ರಿಪುರ ಸಿಎಂ ಆಗಿ ಮಣಿಕ್ ಸಹಾ ಪ್ರಮಾಣ ವಚನ ಸ್ವೀಕಾರ
Advertisement
Advertisement
ಸೋಮಣ್ಣ ಅವರು ಪಾರ್ಟಿ ಬಿಡುವ ಪ್ರಶ್ನೆಯೇ ಇಲ್ಲ. ಸೋಮಣ್ಣ (V Somanna) ಮತ್ತು ನಾವು ಸೇರಿ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವುದು ಗ್ಯಾರಂಟಿ. ಕಾಂಗ್ರೆಸ್, ಜೆಡಿಎಸ್ ತೊರೆದು ಕೆಲವು ನಾಯಕರು ಬಿಜೆಪಿಗೆ ಬರಲಿದ್ದಾರೆ. ಯಾರು ಬರುತ್ತಾರೆ ಎನ್ನುವುದನ್ನು ಸಮಯ ಸಂದರ್ಭ ನೋಡಿ ಹೇಳುತ್ತೇನೆ ಎಂದು ಕೈ, ದಳಪತಿಗಳಿಗೆ ಕೌಂಟರ್ ಕೊಟ್ಟರು. ಇದನ್ನೂ ಓದಿ: ಅಂಬೇಡ್ಕರ್ ಮರಣಹೊಂದಿದಾಗಲೂ ಕಾಂಗ್ರೆಸ್ 6*3 ಅಡಿ ಜಾಗ ಕೊಟ್ಟಿರಲಿಲ್ಲ – ಸಿ.ಟಿ ರವಿ ಕಿಡಿ