ಮೋದಿ ರೋಡ್ ಶೋ- ಮದುಮಗ ಆಯ್ತು, ಈಗ ಮದುವೆಗೆ ಹೋಗಲು ಕಷ್ಟಪಟ್ಟ ವಧು

Public TV
1 Min Read
marriage bengaluru election

ಬೆಂಗಳೂರು: ಪ್ರಧಾನಿ ಮೋದಿ (Narendra Modi) ರೋಡ್ ಶೋನಿಂದಾಗಿ (Road Show) ಮದುವೆಗೆ ತೆರಳಲು ಮದು ಮಗಳು ಸಂಕಷ್ಟಕ್ಕೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸುಂಕದ ಕಟ್ಟೆ ಸಮೀಪದ ಮುದ್ದಣ್ಣ ಚೌಟ್ರಿಯಲ್ಲಿ ಶನಿವಾರ ಆರತಕ್ಷತೆ ನಿಗದಿಯಾಗಿತ್ತು. ಜೊತೆಗೆ ನಾಳೆ ಬೆಳಿಗ್ಗೆ ಮದುವೆ ಇರುವ ಕಾರಣದಿಂದ ವಧು ರಾಮನಗರದಿಂದ ಬೆಂಗಳೂರಿನ ಸುಕಂದ ಕಟ್ಟೆಗೆ ತೆರಳುತ್ತಿದ್ದಳು. ಈ ವೇಳೆ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಪೊಲೀಸರು ಕಾರು ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮದುಮಗಳು ಬೈಕ್‍ನಲ್ಲಿ ಹೊರಟರು. ಈ ವೇಳೆ ಮದುಮಗಳ ಜೊತೆಗೆ ಕಳಸ ಹಿಡಿದು ಕುಳಿತ ಮದುಮಗಳ ಚಿಕ್ಕಮ್ಮ ಸಂಬಂಧಿ ಜೊತೆಗಿದ್ದರು.

ಸ್ಕೂಟರ್‌ನಲ್ಲಿ ಮದುಮಗಳು, ಚಾಲಕ ಹಾಗೂ ಕಲಶ ಹಿಡಿದು ಕುಳಿತಿದ್ದ ಮಹಿಳೆಯನ್ನು ನೋಡಿದ ಪೊಲೀಸರು ಕಲಶವನ್ನು ಸ್ಕ್ಯಾನ್‌ ಮಾಡಿ ಪರಿಶೀಲನೆ ಮಾಡಿದ್ದಾರೆ. ನಂತರ, ಮಾಧ್ಯಮಗಳ ಕ್ಯಾಮರಾಗಳು ಬಂದು ಮದುಮಗಳು ಹಾಗೂ ಅವರನ್ನು ಅಡಗಟ್ಟಿದ ಪೊಲೀಸರ ನಡುವೆ ನಡೆಯುತ್ತಿದ್ದ ವಾಗ್ವಾದವನ್ನು ಸೆರೆಹಿಡಿಯಲು ಮುಂದಾಗುತ್ತಿದ್ದಂತೆ, ಪೊಲೀಸರು ಮದುಮಗಳು ಕಲ್ಯಾಣ ಮಂಟಪದತ್ತ ತೆರಳಲು ಅವಕಾಶ ಮಾಡಿಕೊಟ್ಟರು. ಇದನ್ನೂ ಓದಿ: ಮೋದಿ ರೋಡ್‌ಶೋ – ಕಾಡಿ ಬೇಡಿ ಕೊನೆಗೂ ಮದುವೆಗೆ ಹೋಗಲು ಅನುಮತಿ ಪಡೆದ ಮದುಮಗ

Marriage

ಮಧ್ಯಾಹ್ನ ಮೋದಿ ರೋಡ್‌ ಶೋ ಹಿನ್ನೆಲೆಯಲ್ಲಿ ಮದುಮಗನಿಗೆ ಅನುಮತಿ ನೀಡದ ವಾತಾವರಣ ಸೃಷ್ಟಿಯಾಗಿತ್ತು. ಮಾಗಡಿ ರೋಡ್ ನಲ್ಲಿರೋ ಅಕ್ಷಯ್ ಕಲ್ಯಾಣ ಮಂಟಪದಲ್ಲಿ ಏಪ್ರಿಲ್‌ 29, 30 ರಂದು ಮದುವೆ ನಿಗದಿಯಾಗಿದ್ದು, ಮದುವೆಗೆ ತೆರಳಲು ಮಧುಮಗನಿಗೆ ಅನುಮತಿ ನಿರಾಕರಿಸಲಾಗಿತ್ತು. ಕೊನೆಗೆ ಇವತ್ತು ನನ್ನ ಮದುವೆಯಿದೆ, ನಾನು ಹೋಗಲೇಬೇಕು ಬಿಡಿ ಎಂದು ವರ ಕೇಳಿಕೊಂಡಿದ್ದ. ನಂತರ ಪೊಲೀಸರು ಮಧುಮಗ ಮತ್ತು ಅವನ ಕುಟುಂಬಸ್ಥರನ್ನು ಕಳುಹಿಸಿಕೊಟ್ಟಿದ್ದರು. ಇದನ್ನೂ ಓದಿ: ಹೂವಿನಲ್ಲಿ ಕಲ್ಲು ಬಂದಿಲ್ಲ, ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ : ಪರಮೇಶ್ವರ್

Share This Article