ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಬೆಂಗಳೂರನ್ನು ಗೆಲ್ಲಲ್ಲೇಬೇಕು. ಈ ಕಾರಣಕ್ಕೆ ಪ್ರಧಾನಿ ಮೋದಿ (PM Narendra Modi) ವರ್ಚಸ್ಸನ್ನು ಬಳಸಿಕೊಂಡು ಬಿಜೆಪಿ ರೋಡ್ ಶೋ (Road Show) ಆಯೋಜಿಸಿದೆ.
ಬಹುಮತಕ್ಕೆ ಬೇಕಾಗಿರುವ 113 ಸೀಟ್ ಗಳಿಸಬೇಕಾದರೆ ಬಿಜೆಪಿ ಬೆಂಗಳೂರಿನಲ್ಲಿ (Bengaluru) ಹೆಚ್ಚಿನ ಸಂಖ್ಯೆಯ ಸ್ಥಾನ ಗೆಲ್ಲಬೇಕು. ಈ ಹಿಂದೆಯೇ ಅಮಿತ್ ಶಾ (Amit Shah) ಸರಣಿ ಸಭೆ ನಡೆಸಿ ಬೆಂಗಳೂರು ಗೆಲ್ಲಲು ನಾಯಕರಿಗೆ ಟಾಸ್ಕ್ ನೀಡಿ ಪಕ್ಷ ಸಂಘಟನೆ ನಡೆಸಿ ಪ್ರಚಾರ ನಡೆಸಲು ಸೂಚಿಸಿದ್ದರು. ಇದನ್ನೂ ಓದಿ: ಮೋದಿಯನ್ನು ನೋಡಿ ದೇವರನ್ನೇ ನೋಡಿದಷ್ಟು ಖುಷಿ ಆಯ್ತು ಅಂದ ಬೆಂಗ್ಳೂರು ಮಹಿಳೆ
Advertisement
Advertisement
ಈಗ ಚುನಾವಣೆಯ (Election) ಕೊನೆಯ ಹಂತಕ್ಕೆ ಬಂದಿದ್ದು ಮೋದಿ ಮತಯಾಚನೆ ಮಾಡಲಿದ್ದಾರೆ. ಬೆಂಗಳೂರು ನಗರದ 28, ಗ್ರಾಮಾಂತರ ಜಿಲ್ಲೆಯಲ್ಲಿ 4 ಕ್ಷೇತ್ರಗಳಿವೆ. 2008ರ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
ಹಿಂದಿನ ಚುನಾವಣೆಯಲ್ಲಿ ಅನುಕಂಪದ ಅಲೆಯಿಂದ ಗೆದ್ದಿದ್ದ ಬಿಜೆಪಿ 2012ರಲ್ಲಿ 12 ಸ್ಥಾನಕ್ಕೆ ಕುಸಿದಿತ್ತು. 2018 ಮತ್ತು 2019ರ ಚುನಾವಣೆ ಉಪಚುನಾವಣೆ ಸೇರಿ ಒಟ್ಟು 15 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಈ ಬಾರಿ ಕನಿಷ್ಟ 18-20 ಸ್ಥಾನಗಳನ್ನು ಗೆಲ್ಲಬೇಕೆಂದು ಬಿಜೆಪಿ ಗುರಿಯನ್ನು ಹಾಕಿಕೊಂಡಿದೆ. ಈ ಕಾರಣಕ್ಕೆ ಬೆಂಗಳೂರಿಗರ ಮನಗೆಲ್ಲಲು ಮೋದಿ ಅವರ 40 ಕಿ.ಮೀ ಮೆಗಾ ರೋಡ್ ಶೋವನ್ನು ಬಿಜೆಪಿ ಆಯೋಜಿಸುತ್ತಿದೆ.
Advertisement
ಏಪ್ರಿಲ್ 29ರಂದು ಬೆಂಗಳೂರು ಉತ್ತರದ 9 ಕ್ಷೇತ್ರಗಳಲ್ಲಿ ಮೊದಲ ರೋಡ್ ಶೋ ನಡೆದಿತ್ತು. ಮೇ 6 ರಂದು ದಕ್ಷಿಣ, ಕೇಂದ್ರ ಜಿಲ್ಲೆಗಳ 13 ಕ್ಷೇತ್ರಗಳ ಗುರಿಯನ್ನಾಗಿಸಿ 2ನೇ ರೋಡ್ ಶೋ ನಡೆದಿತ್ತು. ಎರಡು ರೋಡ್ ಶೋ ಭರ್ಜರಿ ಯಶಸ್ಸು ಕಂಡಿತ್ತು. ಅದರಲ್ಲೂ ನಿನ್ನೆಯ ರೋಡ್ ಶೋ ಕರ್ನಾಟಕದ ಮಟ್ಟಿಗೆ ದಾಖಲೆಯಾಗಿದ್ದು 10 ಲಕ್ಷಕ್ಕೂ ಅಧಿಕ ಮಂದಿ ನೇರವಾಗಿ ರೋಡ್ ಶೋ ವೀಕ್ಷಿಸಿದ್ದಾರೆ. ಇಂದು 5 ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ ರೋಡ್ ಶೋ ನಡೆಯಲಿದೆ.
ಬೆಂಗಳೂರಿನಲ್ಲಿ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಜಯಗಳಿಸಿತ್ತು. ಬೆಂಗಳೂರು ಗ್ರಾಮಾಂತರ ಒಂದೇ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. 113 ಟಾರ್ಗೆಟ್ ರೀಚ್ ಆಗಬೇಕಾದರೆ ಬೆಂಗಳೂರಿನಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯ. ಈ ಕಾರಣಕ್ಕೆ ಬಿಜೆಪಿ 20+ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿದೆ.