ಚಿಕ್ಕೋಡಿ: ಕಾಂಗ್ರೆಸ್ (Congress) ಪಕ್ಷದ ರಾಜಕೀಯ ಸಭೆಯಲ್ಲಿ ಮಕ್ಕಳ ದುರ್ಬಳಕೆ ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರಿಂದ ಸಭೆಯಲ್ಲಿ ಮಕ್ಕಳ (Children) ಬಳಕೆ ಮಾಡಿಕೊಳ್ಳಲಾಗಿದೆ. ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಬಳಸಿಕೊಂಡು ಮಕ್ಕಳಿಗೆ ಕಾಂಗ್ರೆಸ್ ಶಾಲು (Shawl) ಹೊದಿಸಲಾಗಿದೆ. ಏನೂ ಅರಿಯದ ಮಕ್ಕಳ ಕೊರಳಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿದ ಪೋಟೋ ಎಲ್ಲೆಡೆ ವೈರಲ್ (Viral) ಆಗಿದೆ. ಇದನ್ನೂ ಓದಿ: ಹೆರಿಟೇಜ್, ಡೂಡ್ಲ, ಆರೋಕ್ಯ ಹಾಲಿನ ಬ್ರಾಂಡ್‍ಗಳು ನಂದಿನಿಯ ಅಕ್ಕತಂಗಿಯರಾ?: ಪ್ರತಾಪ್ ಸಿಂಹ
Advertisement
Advertisement
ಉಗಾರ ಖುರ್ದ ಪಟ್ಟಣದಲ್ಲಿ ಹಾಲು ಮತದ ಸಮಾಜದ ವತಿಯಿಂದ ರಾಜು ಕಾಗೆಯವರಿಗೆ (Raju Kage) ಬೆಂಬಲ ಸೂಚಿಸುವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಪೋಟೋ ವೈರಲ್ ಆದರೂ ಸಹ ಕಂಡು ಕಾಣದಂತೆ ಚುಣಾವಣಾ ಆಯೋಗ ಹಾಗೂ ತಾಲೂಕು ಆಡಳಿತ ಕುಳಿತಿದೆ. ಚುನಾವಣೆ ಪ್ರಚಾರದಲ್ಲಿ ಮಕ್ಕಳ ಬಳಕೆ ಮಾಡಿಕೊಳ್ಳದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆದೇಶವಿದ್ದರೂ ಮಕ್ಕಳ ಬಳಕೆ ಮಾಡಲಾಗಿದೆ. ಇದನ್ನೂ ಓದಿ: ಮೂಲಭೂತ ಸೌಕರ್ಯ ಕೊಡದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ: ನಿಖಿಲ್‌ಗೆ ಮಹಿಳೆಯರಿಂದ ತರಾಟೆ