– ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿ ತೆರಳಿದ ಸಿಎಂ, ಸಚಿವರು
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ, ಸರ್ಕಾರಿ ವಾಹನವನ್ನು ಸಚಿವ ನಾರಾಯಣಗೌಡ (Narayana Gowda) ಭಾವನಾತ್ಮಕವಾಗಿ ಬೀಳ್ಕೊಟ್ಟರು.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ, ಸರ್ಕಾರದ ಹೊಸ ಘೋಷಣೆಗಳಿಗೆ ಬ್ರೇಕ್ ಬಿದ್ದಿದೆ. ಹೊಸ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸೇರಿ ಎಲ್ಲಾ ಕಾರ್ಯಕ್ರಮಗಳು ಬಂದ್ ಆಗಿವೆ. ಈ ವೇಳೆ ಸಚಿವ ನಾರಾಯಣಗೌಡ ಅವರು ತಮಗೆ ನೀಡಿದ್ದ ಕಾರಿಗೆ ಕೆ.ಆರ್.ಪೇಟೆ ತಮ್ಮ ನಿವಾಸದಲ್ಲಿ ಪೂಜೆ ಸಲ್ಲಿಸಿದರು. ಈ ವಿಶೇಷ ಪೂಜೆಯಲ್ಲಿ ಕರ್ಪೂರ ಬೆಳಗಿ ಈಡುಗಾಯಿ ಹೊಡೆದರು. ಪೂಜೆ ಬಳಿಕ ಸರ್ಕಾರಿ ವಾಹನ ಹಿಂದಿರುಗಿಸಿದರು.
Advertisement
Advertisement
ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ ಬೆನ್ನಲ್ಲೇ ಮುಖ್ಯಮಂತ್ರಿ ನಿವಾಸದಲ್ಲಿದ್ದ ಎರಡು ಸರ್ಕಾರಿ ವಾಹನಗಳು ಅಲ್ಲಿಂದ ನಿರ್ಗಮಿಸಿದವು. ಸಿಎಂ ಬೊಮ್ಮಾಯಿ (Basavaraj Bommai), ಸಚಿವರಾದ ಮುನಿರತ್ನ, ಸೋಮಣ್ಣ ಖಾಸಗಿ ಕಾರುಗಳಲ್ಲಿ ಕಾಣಿಸಿಕೊಂಡರು. ಇದನ್ನೂ ಓದಿ: ಈಶ್ವರಪ್ಪ ಅಂತಾ ಒಬ್ಬ ದಡ್ಡ ಇದ್ದಾನೆ, ಅವನಿಗೆ ದಿನವೂ ಹಣ ಎಣಿಸೋದೆ ಕೆಲಸ : ಸಿದ್ದರಾಮಯ್ಯ
Advertisement
Advertisement
ಮೈಸೂರಿನ ಕಾರ್ಯಕ್ರಮವೊಂದಕ್ಕೆ ಸಿದ್ದರಾಮಯ್ಯ ಸರ್ಕಾರಿ ಕಾರಲ್ಲಿ ತೆರಳಿದ್ದರು. ಕಾರ್ಯಕ್ರಮ ಮುಗಿಯೋದ್ರೊಳಗೆ ನೀತಿ ಸಂಹಿತೆ ಜಾರಿಯಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಹೊರಡುವಾಗ ಸರ್ಕಾರಿ ಕಾರು ಬದಲು ಖಾಸಗಿ ಕಾರು ಹತ್ತಿದರು. ನೀತಿ ಸಂಹಿತೆ ಜಾರಿ ಬೆನ್ನಲ್ಲೇ ಬೆಂಗಳೂರು ಸೇರಿ ಎಲ್ಲೆಡೆ ರಾಜಕೀಯ ಪಕ್ಷಗಳ ಫ್ಲೆಕ್ಸ್, ಬ್ಯಾನರ್‍ಗಳನ್ನು ಅಧಿಕಾರಿಗಳು ತೆರವು ಮಾಡಿದರು. ಇದನ್ನೂ ಓದಿ: karnataka Election 2023: ಈ ಬಾರಿ ಬೆಂಗಳೂರಿನ ಎಲ್ಲಾ ಮತಗಟ್ಟೆಗಳಲ್ಲಿ ಹೊಸ EVM ಬಳಕೆ – ತುಷಾರ್ ಗಿರಿನಾಥ್