ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ (Congress) 130 ರಿಂದ 140 ಸ್ಥಾನಗಳನ್ನು ಗೆಲ್ಲಲಿದೆ. ಯಾವ ಕಾರಣಕ್ಕೂ ಅದಕ್ಕಿಂತ ಕಡಿಮೆ ಆಗಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (MB Patil) ವಿಶ್ವಾಸ ವ್ಯಕ್ತಪಡಿಸಿದರು.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಈ ಸಲ ನಾವು 18 ರಲ್ಲಿ 12 ಸೀಟ್ ಗೆದ್ದೇ ಗೆಲ್ಲುತ್ತೇವೆ. ಕರಾವಳಿಯಿಂದ ಕಲ್ಯಾಣ ಕರ್ನಾಟಕದವರೆಗೂ ನಮಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಈ ಚುನಾವಣೆಯಲ್ಲಿ ನಾವು 130ರಿಂದ 140 ಸೀಟ್‌ಗಳನ್ನು ಗೆಲ್ಲುತ್ತೇವೆ ಎಂದ ಅವರು, ನಾನು ಯಾವುದೇ ಸರ್ವೆ ಮಾಡಿಸುತ್ತಿಲ್ಲ. ನಮ್ಮದು ಪ್ರಚಾರದ ಕೆಲಸವಷ್ಟೇ. ಸರ್ವೆಯನ್ನು ಪಕ್ಷ ಮಾಡಿಸುತ್ತದೆ ಎಂದರು.
Advertisement
Advertisement
ಪಂಚಮಸಾಲಿ ಸಮುದಾಯ ಮಾತ್ರವಲ್ಲ, ಎಲ್ಲ ಸಮುದಾಯಗಳಿಗೂ ಮಾನ್ಯತೆ ನೀಡುತ್ತೇವೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಕ್ಕೂ ನ್ಯಾಯ ಕೊಡಿಸುವ ಕೆಲಸ ಆಗುತ್ತದೆ. ಸ್ಕ್ರೀನಿಂಗ್ ಕಮಿಟಿ ಹಾಗೂ ಚುನಾವಣಾ ಸಮಿತಿಯ ಚರ್ಚೆ ಬಳಿಕ ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
Advertisement
ಸಿದ್ದರಾಮಯ್ಯ (Siddaramaiah) ಎಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದನ್ನು ಅವರು ಹಾಗೂ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ. ಸಿದ್ದರಾಮಯ್ಯಗೆ ಸಲಹೆ ಕೊಡುವಷ್ಟು ದೊಡ್ಡವನು ನಾನಲ್ಲ, ಕೆ.ಎನ್ ರಾಜಣ್ಣನೂ ನಾನಲ್ಲ. ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಹಾಗೂ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲುತ್ತಾರೆ. 2018ರ ಚುನಾವಣೆಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ಸಿದ್ದರಾಮಯ್ಯ ಆಡಳಿತ ಹೇಗೆ ಎನ್ನುವುದು ಜನರಿಗೆ ಈಗ ಅರ್ಥ ಆಗುತ್ತಿದೆ ಎಂದರು.
Advertisement
ಬೆಂಗಳೂರು (Bengaluru) ನಗರದಲ್ಲೂ ಚುನಾವಣೆ (Election) ಹತ್ತಿರ ಬರುತ್ತಿದ್ದಂತೆ ಜಾಸ್ತಿ ಸೀಟು ಗೆಲ್ಲುತ್ತೇವೆ. ಕಾಂಗ್ರೆಸ್‌ಗೆ ಈ ಕ್ಷಣಕ್ಕೆ 130-140 ಸೀಟು ಬಂದೇ ಬರುತ್ತದೆ. ಇದಕ್ಕಿಂತ ಕಡಿಮೆ ಬರುವುದಿಲ್ಲ. ಜೊತೆಗೆ ಬಿಜೆಪಿಯವರು 65 ರಿಂದ 70 ಸೀಟು ದಾಟುವುದಿಲ್ಲ ಎಂದ ಅವರು, ಕಾಂಗ್ರೆಸ್ ಸೇರಲು ಬಿಜೆಪಿಯವರು (BJP) ಕ್ಯೂನಲ್ಲಿದ್ದಾರೆ. ಬಿಜೆಪಿಯ ಶಾಸಕರೂ ಕಾಂಗ್ರೆಸ್ ಸೇರಲಿದ್ದಾರೆ. ಮುಳುಗುವ ಹಡಗಿಗೆ ಯಾರಾದ್ರೂ ಹೋಗ್ತಾರಾ? ಈಗಾಗಲೇ ಬಹಳಷ್ಟು ಮಂದಿ ಕಾಂಗ್ರೆಸ್ ಸೇರಿಲ್ವ? ಇನ್ನೂ ಸೇರುವವರಿದ್ದಾರೆ ನೋಡ್ತಾ ಇರಿ ಎಂದು ಭವಿಷ್ಯ ನುಡಿದರು.
ಸುಮಲತಾ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಕೆಶಿ, ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿರಬಹುದು. ಶೀಘ್ರದಲ್ಲೇ ಗೊತ್ತಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಮಹದಾಯಿ ಯೋಜನೆ ಅನುಷ್ಠಾನ – ಗೋವಾ ಸರ್ಕಾರದ ನಡೆಯ ಬಗ್ಗೆ ಗೊತ್ತಿಲ್ಲವೆಂದ ಸಿಎಂ
ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಕ್ಕೆ ಬಯಸುವುದಿಲ್ಲ. ಅದಕ್ಕೆ ಉತ್ತರ ಕೊಡಬೇಕಾಗಿದ್ದು ಅಧ್ಯಕ್ಷರು ಅವರೇ ಉತ್ತರ ಕೊಡ್ತಾರೆ. ಅದನ್ನು ಬಿಟ್ಟು ಬೇರೇ ಏನಾದರೂ ಕೇಳಿ. ಹೊಡೆಯೋರು ಬಿಡೋರು ಜನರೇ ಹೊರತು, ಬೇರೆ ಯಾರೂ ನಿರ್ಧಾರ ಮಾಡಲು ಸಾಧ್ಯವಿಲ್ಲ. ಜನ ನಮಗೆ ಹೊಡೆಯಬೇಕು ಅಂದರೆ ಹೊಡಿತಾರೆ. ನಮ್ಮನ್ನು ಏರಿಸಬೇಕು ಅಂದರೆ ಏರಿಸ್ತಾರೆ. ಜಾರಕಿಹೊಳಿ ಮಾತಿನ ಬಗ್ಗೆ ನಾನು ಕಾಮೆಂಟ್ ಮಾಡಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಸುಮಲತಾ ರಾಜ್ಯ ರಾಜಕೀಯ ಪ್ರವೇಶಕ್ಕೆ ಬೆಂಬಲಿಗರ ಗ್ರೀನ್ ಸಿಗ್ನಲ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k