Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್

Bengaluru City

ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್

Public TV
Last updated: May 1, 2023 11:54 am
Public TV
Share
3 Min Read
bjp manifesto
SHARE

– ಏಕರೂಪ ನಾಗರಿಕ ಸಂಹಿತೆ ಜಾರಿ
– ಪ್ರತಿ ವಾರ್ಡ್‍ಗಳಲ್ಲಿ ಅಟಲ್ ಆಹಾರ ಕೇಂದ್ರ

ಬೆಂಗಳೂರು: ಬಿಪಿಎಲ್ (BPL) ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಬಿಜೆಪಿ (BJP) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.

ರಾಜ್ಯದ ವಿಧಾನ ಸಭೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಪ್ರಣಾಳಿಕೆ ರಚಿಸಿರುವ ಸಚಿವ ಡಾ.ಸುಧಾಕರ್ ನೇತೃತ್ವದ ಸಮಿತಿಯು ವಿವಿಧ ವಲಯಗಳ ನಿರೀಕ್ಷೆಗಳು, ಅಗತ್ಯತೆಗಳ ಕುರಿತು ವಲಯವಾರು ತಜ್ಞರ ಜೊತೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿ, ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ.

bjp flag 3

ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?:
ಬಿಪಿಎಲ್ ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ.

ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್‍ಗಳಲ್ಲಿ ಅಟಲ್ ಆಹಾರ ಕೇಂದ್ರವನ್ನು ಸ್ಥಾಪಿಸುತ್ತೇವೆ. ಇದನ್ನೂ ಓದಿ: ಪ್ರಧಾನಿ ಮೋದಿ ನಾಲಾಯಕ್‌: ಪ್ರಿಯಾಂಕ್‌ ಖರ್ಗೆ ಮೂದಲಿಕೆ

ಪೋಷಣೆ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು 5 ಕೆಜಿ ಶ್ರೀ ಅನ್ನ- ಸಿರಿ ಧಾನ್ಯವನ್ನು ಒಳಗೊಂಡ ಪಡಿತರ ಕಿಟ್ ನೀಡುತ್ತೇವೆ.

ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುತ್ತೇವೆ.

ರಾಜ್ಯದಾದ್ಯಂತ ನಿವೇಶನ ರಹಿತ, ವಸತಿ ರಹಿತ ನಿವಾಸಿಗಳಿಗೆ ಸರ್ವರಿಗೂ ಸೂರು ಯೋಜನೆಯಡಿ 10 ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ ಮಾಡುತ್ತೇವೆ.

ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯನ್ನು ಪ್ರಾರಂಭಿಸುತ್ತೇವೆ. ಈ ಯೋಜನೆಯಡಿ ಎಸ್‍ಸಿ, ಎಸ್‍ಟಿ ಸಮುದಾಯದ ಮಹಿಳೆಯರು 5 ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ – 10 ಸಾವಿರದವರೆಗೆ ತಾಳಿಯಾಗುವ ಠೇವಣಿ ನೀಡುತ್ತೇವೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸುಲಲಿತ ಜೀವನಕ್ಕೆ ಕರ್ನಾಟಕ ಅಪಾರ್ಟ್ ಮೆಂಟ್ ಮಾಲೀಕತ್ವ ಕಾಯಿದೆ 1972ಕ್ಕೆ ಸೂಕ್ತ ತಿದ್ದುಪಡಿಗಳನ್ನು ತರುತ್ತೇವೆ ಹಾಗೂ ಕಂದುಕೊರತೆಗಳ ಪರಿಹಾರಕ್ಕೆ ಆನ್ ಲೈನ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತೇವೆ.

ವಿಶ್ವೇಶ್ವರಯ್ಯ ವಿದ್ಯಾ ಯೋಜನೆ ಇದರಡಿ ಸರ್ಕಾರಿ ಶಾಲೆಗಳನ್ನು ಅತ್ಯುನ್ನತ ಶ್ರೇಣಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಬುದ್ಧರು ಹಾಗೂ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದಲಾಗುತ್ತದೆ.

ಸಮನ್ವಯ ಯೋಜನೆ ಇದರಡಿ ತ್ವರಿತಗತಿಯಲ್ಲಿ SME ಗಳು ಮತ್ತು ITI ಗಳ ನಡುವೆ ಸಮನ್ವಯತೆ ಸಾಧಿಸುತ್ತೇವೆ. ಪ್ರತಿಭಾವಂತ ಯುವ ವೃತ್ತಿಪರರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತೇವೆ.

ಐಎಎಸ್, ಕೆಎಎಸ್, ಬ್ಯಾಂಕಿಂಗ್, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹವನ್ನು ನೀಡುವ ಮೂಲಕ ಮಹತ್ವಾಕಾ೦ಕ್ಷೆಯ ಯುವಜನರಿಗೆ ವೃತ್ತಿ ಬೆಂಬಲವನ್ನು ಒದಗಿಸುತ್ತೇವೆ. ಇದನ್ನೂ ಓದಿ: ಹಳ್ಳದಲ್ಲಿ‌ ಕೊಚ್ಚಿ ಹೋಗಿದ್ದ ಒಂದೇ ಕುಟುಂಬದ ಮೂವರ ಮೃತದೇಹಗಳು ಪತ್ತೆ

ಮಿಷನ್ ಸ್ವಾಸ್ಥ್ಯ ಕರ್ನಾಟಕದ ಅಡಿ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಕರ್ಯಗಳನ್ನು ಸುಧಾರಿಸುತ್ತೇವೆ. ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‍ನಲ್ಲಿ ಲ್ಯಾಬೊರೇಟರಿ ಸೌಲಭ್ಯ ಹೊಂದಿರುವ ನಮ್ಮ ಕ್ಲಿನಿಕ್ ಸ್ಥಾಪಿಸುತ್ತೇವೆ. ಹಾಗೂ ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆಯ ಸೌಲಭ್ಯ ಕಲ್ಪಿಸುತ್ತೇವೆ.

ನಮ್ಮ ಮುಂದಿನ ಪೀಳಿಗೆಗಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಿ, ಅದನ್ನು ರಾಜ್ಯ ರಾಜಧಾನಿ ಪ್ರದೇಶ ಎಂದು ಗುರುತಿಸಲಾಗುತ್ತದೆ. ತಂತ್ರಜ್ಞಾನ ಆಧಾರಿತ ನಗರ ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತೇವೆ. ಸುಲಲಿತ ಜೀವನಕ್ಕೆ ಅನುವುಮಾಡಿಕೊಡುವ ಸುಸಂಘಟಿತ ಸಾರಿಗೆ ಜಾಲ ಸೃಷ್ಟಿಸುತ್ತೇವೆ. ಅಲ್ಲದೇ, ಬೆಂಗಳೂರನ್ನು ಡಿಜಿಟಲ್ ಇನ್ನೋವೇಶನ್‍ನ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ಪರಿಸರ ವ್ಯವಸ್ಥೆ ಕಲ್ಪಿಸುತ್ತೇವೆ.

ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತೇವೆ. ಪೂರಕವಾಗಿ, ಚಾಜಿರ್ಂಗ್ ಸ್ಟೇಷನ್‍ಗಳ ಸ್ಥಾಪನೆ, 1,000 ಸ್ಟಾರ್ಟ್ ಅಪ್‍ಗಳಿಗೆ ಪ್ರೋತ್ಸಾಹ, ಹಾಲಿ ಇರುವ ಬಿಎಂಟಿಸಿ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್‍ಗಳಾಗಿ ಪರಿವರ್ತಿಸುತ್ತೇವೆ. ಜತೆಗೆ ಬೆಂಗಳೂರಿನ ಹೊರವಲಯದಲ್ಲಿ ಇಬಿ ಸಿಟಿ ಅಭಿವೃದ್ಧಿಗೊಳಿಸುವುದು.

ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು 30,000 ಕೋಟಿ ಮೊತ್ತದ ಕೆ-ಅಗ್ರಿ ಫಂಡ್ ಸ್ಥಾಪಿಸುತ್ತೇವೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ ಮಾಡುತ್ತೇವೆ. ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡುತ್ತೇವೆ. ಜತೆಗೆ, 5 ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್‍ಗಳು ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್‍ಗಳನ್ನು ಸ್ಥಾಪಿಸುತ್ತೇವೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಅರವಿಂದ್ ಲಿಂಬಾವಳಿ, ಶೋಭಾರಂದ್ಲಾಜೆ, ಧಮೇರ್‍ಂದ್ರ ಪ್ರಧಾನ್ ಇತರರಿದ್ದರು.

TAGGED:bjpelectionಚುನಾವಣೆಬಿಜೆಪಿ
Share This Article
Facebook Whatsapp Whatsapp Telegram

Cinema news

Gilli Nata 3
ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ, ರನ್ನರ್‌ ರಕ್ಷಿತಾ, ಅಶ್ವಿನಿ ಗೌಡಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?
Cinema Latest Main Post TV Shows
Gilli
BBK Season 12 Winner | ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟ ಗಿಲ್ಲಿ
Bengaluru City Cinema Latest Main Post TV Shows
Ashwini Gouda 1
BBK Season 12 | ಬಿಗ್‌ ಮನೆಯ ಫೈಯರ್‌ ಬ್ರ್ಯಾಂಡ್‌ ಅಶ್ವಿನಿ ಗೌಡಗೆ 3ನೇ ಸ್ಥಾನ!
Cinema Latest Main Post TV Shows
Gilli Kavya
ಗಿಲ್ಲಿ ಹೇಳಿದಾಗ ಕಾಣಿಸಿಕೊಳ್ಳೋಕೆ ಇದು ಕಪಲ್‌ ಶೋ ಅಲ್ಲ – ಆಚೆ ಬರ್ತಿದ್ದಂತೆ ಕ್ಲ್ಯಾರಿಟಿ ಕೊಟ್ಟ ಕಾವು!
Bengaluru City Cinema Latest Top Stories TV Shows

You Might Also Like

Pralhad Joshi Davos WEF Meeting
Latest

ವಿಶ್ವ ಆರ್ಥಿಕ ವೇದಿಕೆ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Public TV
By Public TV
3 hours ago
Ind vs NZ 1
Cricket

ಭಾರತದ ನೆಲದಲ್ಲಿ ಫಸ್ಟ್‌ ಟೈಮ್‌ ಏಕದಿನ ಸರಣಿ ಗೆದ್ದ ಕಿವೀಸ್‌; ಚೇಸ್‌ ಮಾಸ್ಟರ್‌ ಶತಕದ ಹೋರಾಟ ವ್ಯರ್ಥ!

Public TV
By Public TV
4 hours ago
Kavya 01
Bengaluru City

BBK Season 12 | 3ನೇ ರನ್ನರ್‌ಅಪ್‌ ಕಾವ್ಯ ಶೈವ ಔಟ್‌ – ಸಿಕ್ಕ ಬಹುಮಾನ ಎಷ್ಟು?

Public TV
By Public TV
5 hours ago
Raghu
Cinema

BBK Season 12 | ಗ್ರ್ಯಾಂಡ್‌ ಫಿನಾಲೆಯಿಂದ ರಗಡ್‌ ರಘು ಔಟ್‌

Public TV
By Public TV
6 hours ago
AR Rahman 2
Bollywood

ಭಾರತ ನನ್ನ ಸ್ಫೂರ್ತಿ, ತವರು – ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಲ್ಪಡಬಹುದು: ರೆಹಮಾನ್ ಸ್ಪಷ್ಟನೆ

Public TV
By Public TV
6 hours ago
Dhanush Gowda
Cinema

BBK 12 | Top-5 ಪಟ್ಟದಿಂದ ಔಟ್‌ – ಗ್ರ್ಯಾಂಡ್‌ ಫಿನಾಲೆಯಿಂದ ಹೊರಬಂದ ಧನುಷ್‌

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?