ಮಂಡ್ಯ: ಜಿಲ್ಲೆಯ ಜನರ ಜೀವನಾಡಿಯಂತಿದ್ದ ಮೈಶುಗರ್ ಸಕ್ಕರೆ ಕಾರ್ಖಾನೆ ಅವಧಿಗೂ ಮುನ್ನವೇ ಸ್ಥಗಿತವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕಾರ್ಖಾನೆ ಶುರು ಮಾಡಿದ್ದ ಬಿಜೆಪಿ ಸರ್ಕಾರದ ನಡೆ ಬಟಾಬಯಲಾಗಿದೆ. ಮಂಡ್ಯ (Mandya) ಜಿಲ್ಲೆಯ ರೈತರಿಗೆ ಸಿಹಿ ಕೊಡುತ್ತೇವೆ ಎಂದ ಬೊಮ್ಮಾಯಿ (Basavaraj Bommai) ಸರ್ಕಾರ ಕಡೆಗೆ ಕೊಟ್ಟಿದ್ದೇನು ಎಂದು ಪ್ರಶ್ನಿಸುವಂತಾಗಿದೆ.
ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಂತಿದ್ದ ಮೈಶುಗರ್ (Mysugr) ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಇಲ್ಲಿನ ರೈತರು ಸಾಕಷ್ಟು ಹೋರಾಟ ಮಾಡಿದ್ದರು. ಇತ್ತೀಚೆಗೆ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ (BJP) ಸರ್ಕಾರ ತರಾತುರಿಯಲ್ಲಿ ಕಾರ್ಖಾನೆ ಪುನಾರಂಭ ಮಾಡಿತ್ತು. ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಕಾರ್ಖಾನೆ ಆರಂಭಿಸಿದ ಪರಿಣಾಮ ಇಲ್ಲಿವರೆಗೂ ನಷ್ಟದಲ್ಲೇ ಕಾರ್ಖಾನೆ ನಡೆಯುತ್ತ ಬಂತು.
Advertisement
Advertisement
ಸರ್ಕಾರ ಕೊಟ್ಟ ಪುಡಿಗಾಸು ಅನುದಾನದಲ್ಲಿ ಬೇಕಾಬಿಟ್ಟಿ ದುರಸ್ತಿ ಕಾರ್ಯ ಪೂರ್ಣಗೊಳಿಸಿದ ಸರ್ಕಾರ, ಆತುರಾತುರವಾಗಿ ಕಾರ್ಖಾನೆ ಶುರು ಮಾಡಿತ್ತು. ಸರ್ಕಾರ ಸೆಪ್ಟೆಂಬರ್‌ಗೆ ಕಾರ್ಖಾನೆ ಶುರು ಮಾಡಿದ್ದರ ಪರಿಣಾಮ ಅಷ್ಟರಲ್ಲಾಗಲೇ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ರೈತರು ಬೇರೆಡೆ ಸರಬರಾಜು ಮಾಡಿದರು. ಇದೀಗ ಕಬ್ಬು ಅಭಾವದ ನೆಪ ಹೇಳಿ ಅವಧಿಗೂ ಮುನ್ನವೇ ಕಾರ್ಖಾನೆ ಸ್ಥಗಿತಗೊಳಿಸಿದೆ.
Advertisement
Advertisement
ಸದ್ಯಕ್ಕಂತೂ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಪಾವತಿ ಏನೋ ಮಾಡಿದೆ. ಮುಂದಿನ ಹಂಗಾಮಿಗೆ ಕಾರ್ಖಾನೆ ಆರಂಭವಾಗಬೇಕಿದ್ದರೇ ಕಾರ್ಖಾನೆ ಸಂಪೂರ್ಣ ದುರಸ್ತಿ ಆಗಲೇಬೇಕಿದೆ. ಈ ದುರಸ್ತಿ ಕಾರ್ಯಕ್ಕೆ ಸರ್ಕಾರದ ಅನುದಾನ ಕೂಡ ಅಗತ್ಯವಿದೆ. ಹೀಗಾಗಿ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಎಷ್ಟು ಅನುದಾನ ಘೋಷಿಸುತ್ತದೆ? ಆ ಅನುದಾನ ಬಿಡುಗಡೆಯಾಗಿ ಕಾರ್ಖಾನೆ ದುರಸ್ತಿ ಆದರೆ ಮಾತ್ರ ಪುನಾರಂಭದ ಮಾತು. ಇಲ್ಲವೇ ಎಂದಿನಂತೆ ಬಿಜೆಪಿ ಸರ್ಕಾರದ ಪೊಳ್ಳು ಭರವಸೆಗೆ ಜಿಲ್ಲೆಯ ಕಬ್ಬು ಬೆಳೆದ ರೈತ ಮತ್ತೆ ಸಂಕಷ್ಟಕ್ಕೀಡಾಗೋದು ಮಾಮೂಲಿ ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ. ಇದನ್ನೂ ಓದಿ: ಮಟ ಮಟ ಮಧ್ಯಾಹ್ನವೇ ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ನಾಲ್ವರು ಯುವಕರು
ಕಳೆದ ಮೂರೂವರೆ ವರ್ಷಗಳಿಂದ ಏನೂ ಮಾಡದ ಬಿಜೆಪಿ (BJP) ಸರ್ಕಾರ ಚುನಾವಣೆ ಸಮಯದಲ್ಲಿ ಹುಸಿ ಭರವಸೆ ಕೊಟ್ಟು ಜನರ ವಿಶ್ವಾಸಗಳಿಸುವ ಪ್ರಯತ್ನ ಮಾಡುತ್ತಿದೆ. ಇದು ಚುನಾವಣೆ ವೇಳೆ ಬಿಜೆಪಿಗೆ ತಿರುಗುಬಾಣ ಆಗುವುದರಲ್ಲಿ ಎರಡು ಮಾತಿಲ್ಲ. ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್: ರೆಪೋ ದರ ಹೆಚ್ಚಿಸಿದ RBI – ಸಾಲದ EMI ಹೆಚ್ಚಳ ಸಾಧ್ಯತೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k