ಗದಗ: ಮೋದಿ ವಿಷದ ಹಾವು ಇದ್ದಂತೆ, ನೋಡೊಕೆ ಚೆನ್ನಾಗಿರುತ್ತೆ, ಮುಟ್ಟಿದ್ರೆ ವಿಷ ಅಂತ ಗೊತ್ತಾಗುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಗದಗ ಜಿಲ್ಲೆ ನರೇಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಬಹಿರಂಗ ಸಭೆ ಮಾತನಾಡಿದ ಅವರು, ಮೋದಿ ಚೆನ್ನಾಗಿದ್ದಾರೆ ಅಂತ ಅವರನ್ನು ನೆಕ್ಕಿ ನೋಡಿದ್ರೆ ಸತ್ತೇ ಹೋಗುತ್ತೀರಿ. ನಾವು ಕನ್ನಡಿಗರು, ನಾವು ಯಾರಿಗೂ ಬಗ್ಗುವುದಿಲ್ಲ. ಗುಜರಾತ್, ಅಹ್ಮದಾಬಾದ್‍ನಿಂದ ಯಾರೇ ಬರಲಿ ಹೆದರಬೇಡಿ. ನಾವು ಕನ್ನಡಿಗರು, ಕರ್ನಾಟಕದವರು ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಸರ್ಕಾರ ಎಂದು ಬರುತ್ತೊ ಅಂದಿನಿಂದ 200 ಯುನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ. ಮನೆಯ ಯಜಮಾನಿಗೆ 2 ಸಾವಿರ ಸಹಾಯಧನ ಕೊಡುತ್ತೇವೆ. ಕೆಲಸ ಇಲ್ಲದ ಪದವಿದರರಿಗೆ 3 ಸಾವಿರ ಯುವನಿಧಿ ಪ್ರೋತ್ಸಾಹ ನೀಡುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಬಿಜೆಪಿ ಪಾರ್ಟಿ ಹಾವು ಇದ್ದಂಗೆ: ಇನ್ನೂ ಮೋದಿ ವಿಷದ ಹಾವು ಇದ್ದಂತೆ ಎಂಬ ಹೇಳಿಕೆ ನೀಡಿದ್ದು, ವಿವಾದವಾಗುವ ಮುನ್ಸೂಚನೆ ದೊರೆತ ಬೆನ್ನಲ್ಲೇ, ರೋಣ ಪಟ್ಟಣದಲ್ಲಿ ಮಾತನಾಡುವಾಗ ತಮ್ಮ ಹೇಳಿಕೆಯಯಲ್ಲಿ ಯೂಟರ್ನ್ ಹೊಡೆದಿದ್ದಾರೆ. ಮೋದಿ ಎಂದರೆ ಬಿಜೆಪಿ ಎಂದರ್ಥವಾಗಿದೆ. ಬಿಜೆಪಿ ಪಾರ್ಟಿ ಹಾವು ಇದ್ದಂಗೆ. ಸ್ವಲ್ಪ ನೆಕ್ಕಿ ನೋಡ್ತೆವಿ ಅಂದ್ರೆ ಅಲ್ಟಿಮೆಟ್ಲಿ ಡೆತ್ ಅಂತ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕರ್ನಾಟಕ ಬಿಜೆಪಿ ಕಾರ್ಯಕರ್ತರಿಗೆ ಮೋದಿ ನೀಡಿದ ಸಂದೇಶ ಏನು?
ಮೋದಿಯವರ ಬಗ್ಗೆ ಹೇಳಿಲ್ಲ. ವೈಯಕ್ತಿಕವಾಗಿ ನಾವು ಯಾರ ಬಗ್ಗೆಯೂ ಹೇಳುವುದಿಲ್ಲ. ವೈಯಕ್ತಿಕವಾಗಿ ಯಾರ ಬಗ್ಗೆಯೂ ನನಗೆ ಅಸೂಯೆ ಇಲ್ಲ. ಬಿಜೆಪಿ ಐಡಿಯಾಲಾಜಿ ಒಂದು ವಿಷದಂತಿದೆ. ಆ ಐಡಿಯಾಲಾಜಿ ನೀವು ಸಪೋರ್ಟ್ ಮಾಡಿದ್ರೆ, ನೀವು ನೆಕ್ಕಿ ನೋಡ್ತೆವಿ ಅಂದ್ರೆ ಸಾವು ಖಚಿತ ಎಂದರು. ಇದನ್ನೂ ಓದಿ: ರಾಮನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ: ನಿಖಿಲ್ ಕುಮಾರಸ್ವಾಮಿ