ರಾಮನಗರ: ವಿಧಾನಸಭಾ ಚುನಾವಣೆ (Election) ಹತ್ತಿರವಾಗುತ್ತಿದ್ದಂತೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಆರೋಪ, ಪ್ರತ್ಯಾರೋಪ ಮುಂದುವರಿದಿದೆ. ಮಾಜಿ ಶಾಸಕ ಬಾಲಕೃಷ್ಣ ಆರೋಪಕ್ಕೆ ಶಾಸಕ ಎ. ಮಂಜುನಾಥ್ (A Manjunath) ಪತ್ನಿ ಲಕ್ಷ್ಮಿಆಣೆ ಪ್ರಮಾಣದ ಮೂಲಕ ತಿರುಗೇಟು ನೀಡಿದ್ದಾರೆ.
ಮಾಗಡಿ (Magadi) ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಆರೋಪ – ಪ್ರತ್ಯಾರೋಪದ ಜೊತೆಗೆ ಆಣೆ ಪ್ರಮಾಣದ ಪಾಲಿಟಿಕ್ಸ್ ಕೂಡಾ ಜೋರಾಗಿದೆ. ಕಮಿಷನ್ ಆರೋಪದ ಬೆನ್ನಲ್ಲೇ ಬಾಲಕೃಷ್ಣ (Balakrishna) ವಿರುದ್ಧ ರೊಚ್ಚಿಗೆದ್ದ ಶಾಸಕ ಎ.ಮಂಜುನಾಥ್ ಪತ್ನಿ ಕಿಡಿಕಾರಿದ್ದಾರೆ. ದೇವರ ಮುಂದೆ ಕರ್ಪೂರ ಹಚ್ಚಿ ಸವಾಲು ಹಾಕಿದ್ದಾರೆ.
Advertisement
Advertisement
ಗುತ್ತಿಗೆದಾರರ ಜೊತೆ ಹಾಲಿ ಶಾಸಕ ಎ.ಮಂಜುನಾಥ್ ಪತ್ನಿ ಪಾಲುದಾರಿಕೆ ಮಾಡಿದ್ದಾರೆ. ಗುತ್ತಿಗೆದಾರರ ಬಳಿ ಕಮಿಷನ್ ಪಡೆಯುತ್ತಿದ್ದಾರೆ. ಕಾರ್ಯಕರ್ತನಿಗೂ ಒಂದು ಸಣ್ಣ ಸಹಾಯ ಮಾಡಿಲ್ಲ ಎಂದು ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದರು. ನಾನು ಕಾರ್ಯಕರ್ತರಿಗೆ ಗುತ್ತಿಗೆ ನೀಡಿ ಕೆಲಸ ಮಾಡಿಸುತ್ತೇನೆ. ಆದರೆ ಅಮ್ಮವ್ರು ತಾ.ಪಂ ಸದಸ್ಯನಿಗೆ ಕಾಂಟ್ರಾಕ್ಟ್ ನೀಡಿ ಕಮಿಷನ್ ಪಡೆದಿದ್ದಾರೆ. ಇದ್ಯಾವುದು ನಿಮಗೆ ಗೊತ್ತಿಲ್ವಾ ಎಂದು ಟೀಕಿಸಿದರು. ಇದರಿಂದ ಬಾಲಕೃಷ್ಣ ವಿರುದ್ಧ ರೊಚ್ಚಿಗೆದ್ದ ಶಾಸಕ ಎ.ಮಂಜುನಾಥ್ ಪತ್ನಿಕಿಡಿಕಾರಿದ್ದಾರೆ. ದೇವರ ಮುಂದೆ ಕರ್ಪೂರ ಹಚ್ಚಿ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕಮಲ ಹುಟ್ಟುವುದು ಕೆಸರಲ್ಲಿ, ಅರಳಿದ ಮೇಲೆ ಮುದುಡಲೇ ಬೇಕು – ಸುರೇಶ್‌ಗೌಡ
Advertisement
Advertisement
ಮಾಗಡಿಯ ಇತಿಹಾಸ ಪ್ರಸಿದ್ಧ ರಂಗನಾಥ ಸ್ವಾಮಿ ದೇವಾಲಯಕ್ಕೆ ಬೆಂಬಲಿಗರ ಜೊತೆ ಆಗಮಿಸಿದ ಶಾಸಕ ಎ.ಮಂಜುನಾಥ್ ಪತ್ನಿ ಲಕ್ಷ್ಮಿ, ಅಲ್ಲಿ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಮುಂಭಾಗ ಕರ್ಪೂರ ಹಚ್ಚಿದ್ದಾರೆ. ಮಾಜಿ ಶಾಸಕ ಬಾಲಕೃಷ್ಣ ಹೇಳಿದ್ದೆಲ್ಲವೂ ಸುಳ್ಳು. ನಾನು ಯಾವ ಕಮಿಷನ್ ವ್ಯವಹಾರದಲ್ಲಾಗಲಿ, ಕಾಂಟ್ರ್ಯಾಕ್ಟ್ ವ್ಯವಹಾರದಲ್ಲಾಗಲೀ ಭಾಗಿಯಾಗಿಲ್ಲ. ನಾನು ಭಾಗಿಯಾಗಿದ್ದರೆ ನನಗೆ ಭಗವಂತ ರಂಗನಾಥಸ್ವಾಮಿ ಶಿಕ್ಷೆ ಕೊಡಲಿ. ಇಲ್ಲವಾದಲ್ಲಿ ನನ್ನ ಮೇಲೆ ಅನಗತ್ಯ ಆರೋಪ ಅಪವಾದ ಮಾಡುತ್ತಿರುವವರನ್ನು ಭಗವಂತ ರಂಗ ಶಿಕ್ಷಿಸಲಿ ಎಂದು ಹೇಳಿ ರಂಗನಾಥಸ್ವಾಮಿ ದೇವಾಲಯ ಮುಂದೆ ಕರ್ಪೂರ ಹಚ್ಚಿ ಪ್ರಮಾಣ ಮಾಡಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಆರೋಪ ಮಾಡಿ ಶಾಪ ಹಾಕಿಸಿಕೊಂಡು ಉದ್ಧಾರ ಆಗಿರೋದು ಚರಿತ್ರೆನೇ ಇಲ್ಲ. ಎಲ್ಲವನ್ನೂ ದೇವರು ನೋಡಿಕೊಳ್ತಾನೆ ಎಂದು ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಲಕ್ಷ್ಮಿ ಮಂಜುನಾಥ್ ಗುಡುಗಿದ್ದಾರೆ. ಇದನ್ನೂ ಓದಿ: ರಸ್ತೆ ಕಿತ್ತುಬಂದಿಲ್ಲ, ನ್ಯೂನತೆ ಸರಿ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ