ಚಾಮರಾಜನಗರ: ಎರಡು ಕಡೆಯಲ್ಲೂ ಸತತ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಸಚಿವ ವಿ. ಸೋಮಣ್ಣಗೆ ಲೋ ಬಿಪಿ ಆಗಿ ತಲೆ ಸುತ್ತು ಬಂದ ಪ್ರಸಂಗ ಇಂದು ನಡೆಯಿತು.
ರಾಜ್ಯ ವಿಧಾನಸಭಾ ಚುನಾವಣೆಗೆ (Election) ಇನ್ನೇನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಸಿಲಿನಲ್ಲೂ ವರುಣಾ (Varuna), ಚಾಮರಾಜನಗರ (Chamarajanagara) ಎರಡು ಕ್ಷೇತ್ರದಲ್ಲೂ ವಿ. ಸೋಮಣ್ಣ (V Somanna) ಅವರು ಬೀರುಸಿನ ನಡೆಸುತ್ತಿದ್ದಾರೆ. ಸತತವಾಗಿ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೊಮಣ್ಣಗೆ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದಿದೆ. ಕೂಡಲೇ ಅಲ್ಲಿದ್ದ ಕಾರ್ಯಕರ್ತರು ಸೋಮಣ್ಣ ಅವರನ್ನು ಚಾಮರಾಜನಗರ ಕೋಡಿಮೊಳೆ ಗ್ರಾಮದಲ್ಲಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನಂತರ ಸೋಮಣ್ಣ ಮತ್ತೆ ಪ್ರಚಾರ ಆರಂಭಿಸಿದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು
ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆರಾಮಾಗಿದ್ದೇನೆ, ಸ್ವಲ್ಪ ಲೋ ಬಿಪಿ. ನಂಗೆ ತಲೆ ಸುತ್ತು ಬಂತು. ಹಾಗೇ ಕಾರಿನಲ್ಲಿ ಕುಳಿತೆ. 20 ನಿಮಿಷ ರೆಸ್ಟ್ ಮಾಡಿದೆ. ವೈದ್ಯರು ಬಂದು ಚೆಕ್ ಮಾಡಿದರು. ರಕ್ತದೊತ್ತಡ 70ಕ್ಕೆ ಇಳಿದಿತ್ತು. ನಾನು ಸುಮ್ನೆ ಕುಳಿತುಕೊಳ್ಳುವವನು ಅಲ್ಲ. ಸಭೆ ಮುಗಿಸಿ ಮಲಗಿದಾಗ 4 ಗಂಟೆ ಆಗಿತ್ತು. ದೈಹಿಕವಾಗಿ ಬಳಲಿದ್ದೇನೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? – ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ