ಮಂಡ್ಯ: ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ದಾಳಿ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ (BJP) ಪ್ರಧಾನಿ ಸೇರಿದಂತೆ ಕೇಂದ್ರದ ಮಂತ್ರಿಗಳು ಇಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದ್ದಾರೆ.
ಆದಿಚುಂಚನಗಿರಿಯಲ್ಲಿ (Adichunchanagiri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ನಾಯಕರು ಕೂಡ ಇಲ್ಲಿಯೇ ಇದ್ದಾರೆ. ಆದರೆ ಕರ್ನಾಟಕದ ದುರಾದೃಷ್ಟವೇನೆಂದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಇಬ್ಬರೂ ಹೇಳುತ್ತಿಲ್ಲ. ಪ್ರಧಾನ ಮಂತ್ರಿಗಳು ಕೇವಲ ಅವರನ್ನು ನಿಂದಿಸಿದ ಬಗ್ಗೆ ಹೇಳುತ್ತಾರೆ. ಕಾಂಗ್ರೆಸ್‌ನವರು (Congress) ಅವರನ್ನು ವಿಷಸರ್ಪ ಎಂದು ಮಾತನಾಡುತ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬೆಳಗಾವಿಯ (Belagavi) ಗಡಿ ವಿಚಾರದ ಬಗ್ಗೆ ಮೌನವಹಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಧಿಕಾರಕ್ಕಾಗಿ ದೇವರ ಮೊರೆ ಹೋದ ದಳಪತಿ- ಆದಿಚುಂಚನಗಿರಿ ಕ್ಷೇತ್ರಕ್ಕೆ ಹೆಚ್‍ಡಿಕೆ ಭೇಟಿ
Advertisement
Advertisement
ನಾಡಿನ ಜನರ ಬದುಕಿನ ಬಗ್ಗೆ ಎರಡೂ ಪಕ್ಷಗಳು ಸಂದೇಶ ನೀಡುತ್ತಿಲ್ಲ. ಕಾಂಗ್ರೆಸ್ ಎರಡು ಸಾವಿರ ಗ್ಯಾರಂಟಿ ಸೇರಿ ಇನ್ನೂ ನಾಲ್ಕು ಭರವಸೆಯನ್ನು ಬೇರೆ ರಾಜ್ಯದಲ್ಲಿ ಘೋಷಣೆ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಇಲ್ಲ. ನಾಡಿನ ಸಮಸ್ಯೆಗಳಿಗೆ ಜೆಡಿಎಸ್ (JDS) ಪರಿಹಾರ ನೀಡುತ್ತದೆ. ನಮ್ಮ ಯೋಜನೆಯನ್ನು ಜನರು ಮೆಚ್ಚಿದ್ದಾರೆ ಎಂದರು. ಇದನ್ನೂ ಓದಿ: `ನಮೋ’ ರೋಡ್ ಶೋ; ಮೈಸೂರಿನ ಈ ಮಾರ್ಗಗಳಲ್ಲಿಂದು ವಾಹನ ಸಂಚಾರ ಬಂದ್
Advertisement
ಅಶೋಕ್ (R.Ashok) ಅವರು ಜೆಡಿಎಸ್ ಲಾಟರಿ ನಿರೀಕ್ಷೆ ಮಾಡುತ್ತಿದೆ ಎಂದು ಹೇಳಿದ್ದರು. ನಾವು ಯಾವುದೇ ಲಾಟರಿಯನ್ನು ನಿರೀಕ್ಷೆ ಮಾಡುತ್ತಿಲ್ಲ. ಜೆಡಿಎಸ್‌ಗೆ 20 ಸೀಟ್ ಬರುತ್ತದೆ ಎಂದು ಹೇಳುತ್ತಾರೆ. ಬಿಜೆಪಿಗೆ ಎಷ್ಟು ಸೀಟ್ ಬರುತ್ತದೆ ಎಂದು ನೋಡಿಕೊಳ್ಳಲಿ. ಮಂಡ್ಯ (Mandya) ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಅಶೋಕ್ ಸಾಮ್ರಾಟ್ ಎಲ್ಲಿ ಹೋಗಿದ್ದರು? ನಾನು ಸಿಎಂ ಆಗಿದ್ದಾಗ ಬಜೆಟ್ ಘೋಷಣೆ ಮಾಡಿದ್ದಕ್ಕೆ ಮಂಡ್ಯ ಬಜೆಟ್ ಎಂದರು. ಈಗ ಬಿಜೆಪಿ ಮಂಡ್ಯಕ್ಕೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮನೆಯಿಂದ್ಲೇ ಮತದಾನ ಮಾಡಿದ ಮೂಡಿಗೆರೆ ಕ್ಷೇತ್ರದ ಶತಾಯುಷಿಗಳು
Advertisement
ಬಿಜೆಪಿಯವರು ಇಡಿ, ಐಟಿಯನ್ನು ಆಕ್ಟಿವ್ ಮಾಡುತ್ತಿದ್ದಾರೆ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಪಕ್ಷದಲ್ಲೂ ಒಂದೊಂದು ಮೋರ್ಚಾ ಇಟ್ಟುಕೊಂಡಿದ್ದಾರೆ. ಅದೇ ರೀತಿ ಬಿಜೆಪಿ ಇಡಿ, ಐಟಿ ಮೋರ್ಚಾ ಎಂದು ಇಟ್ಟುಕೊಂಡಿದೆ. ಆ ಮೋರ್ಚಾಗಳನ್ನು ಚುನಾಚಣೆಯ (Election) ಸಂದರ್ಭದಲ್ಲಿ ಬಿಡುತ್ತಿದ್ದಾರೆ. ಅವುಗಳನ್ನು ಈಗ ಆಕ್ಟಿವ್ ಮಾಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವುದು ಸರಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ʻಮನ್ ಕಿ ಬಾತ್ʼ100ನೇ ಸಂಚಿಕೆ ಇಂದು ಪ್ರಸಾರ
ಸುಮಲತಾ ಅಂಬರೀಶ್ (Sumalatha Ambareesh) ಅವರ ಜೆಡಿಎಸ್ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು, ಅವರು ಮಹಾನ್ ನಾಯಕಿ. ಅಲ್ಲದೇ ದೊಡ್ಡ ಪಕ್ಷದವರು. ನಾವು ಚಿಕ್ಕ ಪಕ್ಷದವರಾಗಿದ್ದರಿಂದ ಅವರ ಬಗ್ಗೆ ಮಾತನಾಡಲು ಆಗಲ್ಲ. ನಾವು ಒಂದು ಅವಕಾಶಕ್ಕೆ ಕಾಯುತ್ತಿದ್ದೇವೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ ಹಲವು ಒಳ್ಳೆಯ ಕೆಲಸ ಮಾಡಿದ್ದೇನೆ. ಲಾಟರಿ, ಸಾರಾಯಿ ಎಲ್ಲವನ್ನು ನಿಷೇಧ ಮಾಡಿದ್ದೇ ನಾನು. ಎಲ್ಲಾ ಮಾತಿಗೂ ಜನ ತೀರ್ಪು ಕೊಡುತ್ತಾರೆ ಎಂದರು. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ