ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಯನ್ನು ತಿರುಚಿ ಬಿಜೆಪಿಗರು (BJP) ಜನರ ಭಾವನಗೆಳನ್ನು ಕೆರಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಆರೋಪಿಸಿದ್ದಾರೆ.
ಗೋಕಾಕ್‍ನಲ್ಲಿ (Gokak) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ. ಆದರೆ ಅದನ್ನು ತಪ್ಪಾಗಿ ಅರ್ಥೈಸುವ ಕೆಲಸವಾಗಿದೆ. ಈ ಮೂಲಕ ಜನರನ್ನು ಪ್ರಚೋಧಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ಗೆಲುವಿಗೆ ವಿಚಿತ್ರ ಹರಕೆ – 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ ಫ್ಯಾನ್ಸ್
ಬಿಜೆಪಿ ಸರ್ಕಾರದ 40% ಕಮಿಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಮೋದಿಯವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. 40% ವಿಚಾರವನ್ನು ಯಾರು ಇಲ್ಲ ಎಂದವರು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಶೆಟ್ಟರ್ ಹಾಗೂ ಸವದಿ ಪಕ್ಷ ಬಿಟ್ಟಿದ್ದು ಸಮುದ್ರದಲ್ಲಿನ ಒಂದು ಲೋಟ ನೀರು ತೆಗೆದಂತೆ ಎಂಬ ಬಿಜೆಪಿಗರ ಹೇಳಿಕೆ ವಿಚಾರಕ್ಕೆ, ಚುನಾವಣೆಯಾದ ಬಳಿಕ ನಾವು ಒಂದು ಲೋಟ ನೀರೋ, ತಂಬಿಗೆ ನೀರೋ ಅಥವಾ ಬಕೆಟ್ ನೀರೋ ಎಂಬುದು ತಿಳಿಯಲಿದೆ. ಗೋಕಾಕ್ ಚುನಾವಣೆಯಲ್ಲಿ ಈ ಬಾರಿ ಮೌನ ಕ್ರಾಂತಿ ಆಗುತ್ತದೆ. ಈ ಮೂಲಕ ಹೊಸ ಕ್ರಾಂತಿ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸವದಿ ಕೊಡುವ ದುಡ್ಡು ಬಿಜೆಪಿಯದ್ದು. ಅದನ್ನು ಪಡೆದು ನಮಗೆ ವೋಟ್ ನೀಡಿ ಎಂಬ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿಕೆ ವಿಚಾರಕ್ಕೆ, ಗೋಕಾಕ್‍ನಲ್ಲಿ ಅವರೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಅದನ್ನು ಹೇಳಲು ನಾನು ಬಂದಿದ್ದೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಅಮೆರಿಕಾ, ರಷ್ಯಾ ಪ್ರೆಸಿಡೆಂಟ್‍ನ್ನು ಕರ್ಕೊಂಡು ಬರಲಿ: ಹೆಚ್‍ಡಿ ರೇವಣ್ಣ ಟಾಂಗ್