ಜನ ನನ್ನನ್ನು ತೇಲು ಅಂದ್ರೆ ತೇಲುತ್ತೇನೆ, ಮುಳುಗು ಅಂದ್ರೆ ಮುಳುಗುತ್ತೇನೆ: ಸವದಿ

Public TV
1 Min Read
LAXMAN SAVADI

ಚಿಕ್ಕೋಡಿ(ಬೆಳಗಾವಿ): ಜನರು ನನ್ನನ್ನು ತೇಲು ಎಂದರೆ ತೇಲುತ್ತೇನೆ, ಮುಳುಗು ಎಂದರೆ ಮುಳುಗುತ್ತೇನೆ, ಮನೆಯಲ್ಲಿಯೇ ಇರು ಎಂದರೆ ಇರುತ್ತೇನೆ. ಸ್ಪರ್ಧೆ ಮಾಡು ಎಂದರೆ ಮಾಡುತ್ತೇನೆ ಎಂದು ಪರಿಷತ್ ಸದಸ್ಯ ಲಕ್ಷ್ಮಣ  ಸವದಿ (Laxman Savadi) ಹೇಳಿದ್ದಾರೆ.

ಚಿಕ್ಕೋಡಿಯಲ್ಲಿರುವ (Chikkodi) ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷಗಳಿಂದ ಜನರು ನಾನು ಹೇಳಿದಂತೆ ಕೇಳಿದ್ದಾರೆ. ಆದರೆ ಈಗ ಜನರು ಹೇಳಿದಂತೆ ನಾನು ಕೇಳಬೇಕಾಗಿದೆ. ಈ ಬಾರಿ ನಾನು ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ. ಜನರು ಹೇಗೆ ಹೇಳುತ್ತಾರೋ ಹಾಗೆ ಮಾಡುತ್ತೇನೆ. ನಾನು ಯಾರ ಬಗ್ಗೆಯೂ ಕಮೆಂಟ್ ಮಾಡುವುದಿಲ್ಲ. ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿ. ಇದೇ ತಿಂಗಳು 13 ರಂದು ಕ್ಷೇತ್ರದ ಸಭೆ ಕರೆದು ನಂತರ ತೀರ್ಮಾನಿಸುತ್ತೇನೆ ಎಂದರು. ಇದನ್ನೂ ಓದಿ: BJP ಜನರನ್ನ ವಿಭಜಿಸುತ್ತಲೇ ಇರುತ್ತೆ, ನಾನು ಒಗ್ಗೂಡಿಸುತ್ತಲೇ ಇರುತ್ತೇನೆ – ರಾಗಾ 

Laxman Savadi

ಈ ಕುರಿತು ಸಿಎಂ ನನ್ನ ಜೊತೆ ಮಾತನಾಡುತ್ತೇನೆ ಎಂದು ದೆಹಲಿಯಲ್ಲಿ (Delhi) ಹೇಳಿದ್ದಾರೆ. ಅವರು ನನ್ನನ್ನು ಸಂಪರ್ಕಿಸಿದ ನಂತರ ನನ್ನ ತೀರ್ಮಾನವನ್ನು ಮಾಡುತ್ತೇನೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಮಹೇಶ್ ಕುಮ್ಟಾ ಅಥವಾ ನನಗೆ ಕೊಡಬೇಕು. ಇಲ್ಲವೆಂದರೆ ಮೂರನೇ ವ್ಯಕ್ತಿಗೆ ಕೊಡಬೇಕು. ನಾನು ಬೇಕೋ ಅಥವಾ ಇನ್ಯಾರಾದರು ಬೇಕೋ ಎಂದು ಕ್ಷೇತ್ರದ ಜನರಲ್ಲಿ ಕೇಳುತ್ತೇನೆ. ಜನರ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಗೆ ಶಕ್ತಿ ಇಲ್ಲದಾಗ ಸಂಘಟನೆ ಮಾಡಿದವ್ರಲ್ಲಿ ಈಶ್ವರಪ್ಪ ಪ್ರಮುಖರು: ಹೆಚ್‍ಡಿಕೆ 

ನನಗೆ ಹೈಕಮಾಂಡ್‌ನಿಂದ (High Command) ಯಾವುದೇ ಕರೆ ಹಾಗೂ ಸಂದೇಶ ಬಂದಿಲ್ಲ. ಮೊದಲು ಟೆಲಿಗ್ರಾಂ (Telegram) ಬರುತ್ತಿದ್ದವು. ಇನ್ನೂ ಯಾವುದೂ ಬಂದಿಲ್ಲ ಎಂದರು. ಕಾಂಗ್ರೆಸ್ (Congress) ಸೇರ್ಪಡೆ ಆಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಮುಂಗಾರು ಮಳೆ ಯಾವಾಗ ಬರುತ್ತದೋ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಟಿಕೆಟ್ ನೀಡದಿದ್ರೂ ಸ್ಪರ್ಧೆ, 10 ವರ್ಷ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್

Share This Article